ವಾರ್ಷಿಕೋತ್ಸವ ಸಂಭ್ರಮದಲ್ಲಿ ದಿಲ್ ಫರ್ ಮೆಡಿಕಲ್ಸ್ ಕೊಡುಗೆ
ಪುತ್ತೂರು : ಕಳೆದ 6 ವರುಷಗಳಿಂದ ಕಡಬ ತಾಲೂಕಿನ ಆತೂರು ಮುಖ್ಯರಸ್ತೆ ,ಬಿ ಜೆ ಎಂ ಸಂಕೀರ್ಣ ಇಲ್ಲಿ ಕಾರ್ಯಚರಿಸುತ್ತಿದ್ದ ,ಅಬ್ದುಲ್ ಫಾರೂಕ್ ಮಾಲೀಕತ್ವದ ಔಷಧಿ ಮಳಿಗೆ , ದಿಲ್ ಫರ್ ಮೆಡಿಕಲ್ಸ್ ಏಳನೇ ವರುಷಕ್ಕೆ ಪಾದರ್ಪಣೆಗೈಯುತ್ತಿರುವ ಶುಭವೇಳೆ ತನ್ನ ಗ್ರಾಹಕ ಜನತೆಗೆ ಇನ್ನೂ ಹೆಚ್ಚಿನ ಸೇವೆ ಒದಗಿಸುವ ಸಲುವಾಗಿ ಹಾಗೂ ವಾರ್ಷಿಕೋತ್ಸವದ ಖುಷಿ ,ಸಂಭ್ರಮವನ್ನು ಇನ್ನೊಂದು ಸಂಸ್ಥೆ ಆರಂಭಿಸುವ ಮೂಲಕ ಆತೂರು ಜನತೆಗೆ ಕೊಡುಗೆ ನೀಡಿದೆ.
ಇದೀಗ ಕಾರ್ಯಚರಿಸುತ್ತಿರುವ ಔಷಧಿ ಮಳಿಗೆಯನ್ನೇ ವಿಸ್ತರಿಸಿ , ನವೀಕೃತಗೊಳಿಸಿ , ಪಕ್ಕದಲ್ಲೇ ದಿಲ್ ಪರ್ ಪೆಟ್ ಶಾಪ್ ಮೇ.3 ರಂದು ಶುಭಾರಂಭಗೊಂಡಿತು.
ಪಶು ವೈದ್ಯ ಅಶೋಕ್ ಕೊಯಿಲ ಸಂಸ್ಥೆಯನ್ನು ಉದ್ಘಾಟಿಸಿ , ಅತ್ಯುತ್ತಮ ರೀತಿಯಲ್ಲಿ ಗ್ರಾಹಕ ವರ್ಗಕ್ಕೆ ಸೇವೆ ನೀಡುವ ಮೂಲಕ ಎಲ್ಲಾ ವರ್ಗದ ಜನತೆಯ ಪ್ರೀತಿಯ ,ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆಯಲಿಯೆಂದು ಹಾರೈಸಿ ,ಅಭಿನಂದಿಸಿದರು.
ಧರ್ಮಗುರು ಆತೂರ್ ಹಾದಿ ತಂಙಳ್ ಹಾಗೂ ಬದ್ರಿಯಾ ಮಸೀದಿಯ ಸದರ್ ಉಸ್ತಾದ್ದು ಆ ಆಶೀರ್ವಚನ ಮಾಡಿ ,ಶ್ರಯೋಭಿವೃದ್ಧಿಗೆ ಹರಸಿದರು. ಮುಖ್ಯ ಅತಿಥಿಯಾಗಿ
ತುಳು ರಂಗ ಭೂಮಿ ಕಲಾವಿದ , ಖುಸಲ್ದ ಅರಸೆ ಖ್ಯಾತಿಯ ರವಿ ರಾಮಕುಂಜ , ಆಲಂಕಾರ್ ಶ್ರೀ ಭವಾನಿ ಮೆಡಿಕಲ್ಸ್ ಮಾಲಕ ಸುನಿಲ್ ಕಾರ್ಕಳ , ನಿತಿನ್ ಗೌಡ ಎಣ್ಣೆಮಜಲು,
ಬದ್ರಿಯಾ ವಿದ್ಯಾಸಂಸ್ಥೆ ಅಧ್ಯಕ್ಷ ಹಾಜಿ ಆದಂ ಪೋಡಿಕುಂಜಿ ನೀರಾಜೆ, ಕೆಟಿಸಿ ಮೋನಕ, ವಾಸುಕಿ ಭಟ್, ಬಿನೊಯ್ ಕುರಿಯನ್ ಈಗಲ್ ಪ್ರಿಂಟ್ಸ್ ಕಡಬ , ಬಿ ಆರ್ ಮೋನಕ ,
ಬಾಲಕೃಷ್ಣ ಕುಲಾಲ್ ಹಾಗೂ ಸಿರಾಜ್ ಬಡಮೆ ಉಪಸ್ಥಿತರಿದ್ದರು.
ಸಂಸ್ಥೆಯ ಸಿಬಂದಿಗಳಾದ ದೀಕ್ಷಿತ್ ಕಡಬ , ಅಕ್ಬರ್ ಮತ್ತು ಆಫ್ವಾನ್ ಸಹಕಾರ ನೀಡಿ, ಮಾಲಕ ಅಬ್ದುಲ್ ಫಾರೂಕ್ ಅತಿಥಿಗಳನ್ನು ಸತ್ಕರಿಸಿ , ಮಾತನಾಡಿ ,ಸುಮಾರು ಆರು ವರುಷಗಳಿಂದ ಅತೀ ಪ್ರಾಮಾಣಿಕ ರೀತಿಯ ರೀತಿಯ ಸೇವೆ ನೀಡಿ ,ಗ್ರಾಹಕ ವರ್ಗದ ಪ್ರೀತಿ ,ವಿಶ್ವಾಸ ಗಳಿಸುವಲ್ಲಿ ಯಶಸ್ಸು ಕಂಡಿದ್ದೇವೆ. ಇದೀಗ ಏಳನೇ ವಾರ್ಷಿಕೋತ್ಸವ ಸಂಧರ್ಭ , ಸಂಸ್ಥೆಯ ನವೀಕರಣ ಮಾಡಿ ,ವಿಸ್ತರಿಸಿ ಪೆಟ್ ಶಾಪ್ ಕೂಡ ಆರಂಭಿಸಿದ್ದೇವೆ. ಈ ಮೊದಲಿನಂತೆಯೇ ತಮ್ಮೆಲ್ಲರ ಪ್ರೀತಿ ,ಬೆಂಬಲವೆಲ್ಲಾ ಸದಾ ಮುಂದುವರಿಯಲಿಯೆಂದು ಯಾಚಿಸಿದರು.
ಮೆಹಫೂಸಾ ಹಳ್ಯಾರ ಕಾಸಿಂ ಸ್ವಾಗತಿಸಿ ,ವಂದಿಸಿದರು.
ಹೈನುಗಾರರಿಗೆ ಹಾಗೂ ವೈದ್ಯರಿಗೆ ರಖಂ ದರದಲ್ಲಿ ಔಷಧಿಗಳು…!!
ಅಲೋಪತಿ ,ಅಯುರ್ವೇದ ,ಸರ್ಜಿಕಲ್ಸ್ ಸಾಮಾಗ್ರಿ ,ಸೌಂಧರ್ಯವರ್ಧಕಗಳೂ ಹಾಗೂ ಸಾಕುಪ್ರಾಣಿ ಮತ್ತು ಪಕ್ಷಿಗಳಿಗೆ ಸಂಬಂಧಿಸಿದ ಔಷಧಿಗಳೂ ಇಲ್ಲಿ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದ್ದು , ವೈದ್ಯರು ಹಾಗೂ ಹೈನುಗಾರರಿಗೆ ಪೆಟ್ ಮೆಡಿಷಿನ್ ರಖಂ ದರದಲ್ಲಿ ಸಿಗಲಿದೆ.
ಅಬ್ದುಲ್ ಫಾರೂಕ್ ,ಮಾಲೀಕರು.
ಮೊ.8197112946.