ಬೀರಿಗ ಅಂಗನವಾಡಿ ಕೇಂದ್ರದಲ್ಲಿ ಮತದಾರರ ಜಾಗೃತಿ ಅಭಿಯಾನ, ವಿದಾಯಕೂಟ

0

ಪುತ್ತೂರು:ಬನ್ನೂರು ಗ್ರಾ.ಪಂ ವ್ಯಾಪ್ತಿಯ ಬೀರಿಗ ಅಂಗನವಾಡಿ ಕೇಂದ್ರದ ಬಾಲ ವಿಕಾಸ ಸಮಿತಿ, ಸ್ವಸಹಾಯ ಸಂಘಗಳ ಒಕ್ಕೂಟ, ಮಕ್ಕಳ ಪೋಷಕರ ಆಶ್ರಯದಲ್ಲಿ ಮತದಾನದ ಜಾಗೃತಿ ಅಭಿಯಾನ ಹಾಗೂ ಮಕ್ಕಳಿಗೆ ವಿದಾಯಕೂಟವು ಇತ್ತೀಚೆಗೆ ನಡೆಯಿತು.


ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಅರುಣಾರವರು ಮತದಾನದ ಮಹತ್ವವನ್ನು ತಿಳಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.


ಬಳಿಕ ನಡೆದ ಕಾರ್ಯಕ್ರಮದಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ಅಂಗನವಾಡಿ ಕೇಂದ್ರದಿಂದ ತೆರಳುವ 11 ಮಂದಿ ವಿದ್ಯಾರ್ಥಿಗಳಿಗೆ ವಿಧಾಯಕೂಟ ನೆರವೇರಿತು. ಮಕ್ಕಳ ಪೋಷಕರಾದ ಸ್ವಾತಿಗಣೇಶ್, ಶಾಲಿನಿ ಶೇಖರ್, ವಿದ್ಯಾ ಅಭಿಜಿತ್ ಮಾತನಾಡಿ, ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡುವ ಶಾಲಾ ಪೂರ್ವ ಶಿಕ್ಷಣ, ಪೌಷ್ಠಿಕ ಆಹಾರ ಹಾಗೂ ಕೇಂದ್ರದ ಕಾರ್ಯವೈಖರಿಯ ಬಗ್ಗೆ ಮೆಚ್ಚಗೆ ವ್ಯಕ್ತಪಡಿಸಿದರು.


ಪೋಷಕರಿಂದ ಅಂಗನವಾಡಿಗೆ ಕೊಡುಗೆ:
ಮಕ್ಕಳ ಪೋಷಕರಾದ ಸ್ವಾತಿ ಗಣೇಶ್‌ರವರು ಫ್ಯಾನ್, ಶಾಲಿನಿಶೇಖರ್, ಶ್ವೇತಾ ಜಗದೀಶ್, ಗೀತಾಗಣೇಶ್ ಅಡುಗೆ ಒಲೆ, ಚಿತ್ರಶೇಖರ್ ಗಡಿಯಾರ, ಡಾ.ಶ್ರೀಲತಾ ಅನಿಲ್, ಶರ್ಮ ಆಟದ ಸಾಮಾಗ್ರಿ, ವಿದ್ಯಾಅಭಿಜಿತ್, ನಳಿನಿ ತಿಮ್ಮಪ್ಪ, ಮನುಜ ಜಯಕುಮಾರ್, ಜ್ಯೋತಿ ಮೋನಪ್ಪರವರು ಧನಸಹಾಯ ನೀಡಿ ಸಹಕರಿಸಿದರು.


ಬಾಲ ವಿಕಾಸ ಸಮಿತಿ ಅಧ್ಯಕ್ಷೆ ವಿದ್ಯಾ ಕನ್ಯಾಲ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾಗೀರಥಿ, ಸಂಪನ್ಮೂಲ ವ್ಯಕ್ತಿ ಧನಲಕ್ಷ್ಮೀ, ಸ್ವಸಹಾಯ ಸಂಘದ ಸದಸ್ಯರು, ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ. ಸ್ವಾಗತಿಸಿ, ಸಹಾಯಕಿ ಸಂಧ್ಯಾ ವಂದಿಸಿದರು.

LEAVE A REPLY

Please enter your comment!
Please enter your name here