





ಪುತ್ತೂರು: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ಪರ ಮತಯಾಚನೆ ಮಾಡುತ್ತಿದ್ದ ಯುವಕರನ್ನು ತಡೆದು ಕಾಂಗ್ರೆಸ್ ಮುಖಂಡರ ಮನೆಗೆ ಕರೆಸಿ, ಕಾಂಗ್ರೆಸ್ಸಿಗೆ ಬಲವಂತವಾಗಿ ಸೇರ್ಪಡೆಗೊಳಿಸಿ ಶಾಲು ಹಾಕಿ ಫೋಟೋ ತೆಗೆದು ಅನುಮತಿ ಇಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದಾಗಿ ಪೆರ್ನೆ,ಬಿಳಿಯೂರಿನ 5 ಬೂತ್ ಅಧ್ಯಕ್ಷರಾದ ಅಬ್ದುಲ್ ರಜಾಕ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.






ಮತಯಾಚನೆ ಸಾಮಾನ್ಯವಾಗಿ ವಿಷಯ, ಆದರೆ ಇಷ್ಟು ಕೀಳು ಮಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಬಲವಂತವಾಗಿ ಮತಯಾಚನೆ ಮಾಡಿಸುವುದು ನಿಜಕ್ಕೂ ನಾಚಿಕೆಗೇಡು. ಚುನಾವಣಾ ನಿಯಮದ ಪ್ರಕಾರ ಮತಕ್ಕಾಗಿ ಯಾರನ್ನು ಬಲವಂತ ಪಡಿಸುವಂತಿಲ್ಲ. ಬಲವಂತ ಪಡಿಸಿದರೆ ಅದು ಅಪರಾಧವಾಗುತ್ತದೆ. ಮತದಾನ ಪ್ರತಿ ಪ್ರಜೆಯ ಹಕ್ಕಾಗಿದ್ದು, ಅದನ್ನು ಯಾರು ಕಸಿದುಕೊಳ್ಳುವಂತಿಲ್ಲ ಎಂದು ರಜಾಕ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಕಾರ್ಯಕರ್ತರಾದ ಅಬ್ದುಲ್ ರಜಾಕ್, ಅಬ್ದುಲ್ ಲತೀಫ್, ಹುಸೇನ್ ಕೆ, ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.
















