ಹೊಸ ಆವಿಷ್ಕಾರಗಳಿಂದ ಯಶಸ್ವೀ ಫಲಿತಾಂಶ ರಾಜ್ಯಕ್ಕೇ ಮಾದರಿಯಾಗಿದೆ ಈ ವಿದ್ಯಾಸಂಸ್ಥೆ- ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು

0

ಪುತ್ತೂರು: ಕುಂಬ್ರದಲ್ಲಿ ಕಾರ್ಯಾಚರಿಸುತ್ತಿರುವ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಗ್ರಾಮೀಣ ಪ್ರದೇಶದಲ್ಲಿರುವ ರಾಜ್ಯದ ಪ್ರತಿಷ್ಠಿತ ಮಹಿಳಾ ವಿದ್ಯಾಸಂಸ್ಥೆಗಳಲ್ಲಿ ಒಂದು. ಗುಣಮಟ್ಟದ ವಿದ್ಯಾಭ್ಯಾಸ, ಶಿಸ್ತಿಗೆ ಹೆಸರು ಪಡೆದಿರುವ ಈ ಸಂಸ್ಥೆ ವರ್ಷಗಳು ಉರುಳಿದಂತೆ ಹೆಚ್ಚಿನ ಅಭಿವೃದ್ಧಿ ಮತ್ತು ಫಲಿತಾಂಶದಲ್ಲಿ ಸಾಧನೆ ಮಾಡುತ್ತಿದೆ. ಪದವಿಪೂರ್ವ, ಪದವಿ ಹಾಗೂ ಶರೀಅತ್ ಪದವಿ ವಿಭಾಗಗಳಲ್ಲಿ ಸಂಸ್ಥೆ ಕಾರ್ಯಾಚರಿಸುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ಕೂಡಲೇ ಈ ಕಾಲೇಜಿನಲ್ಲಿ ಪ್ರವೇಶಾತಿ, ಮಾಹಿತಿ/ಅಪ್ಲಿಕೇಶನ್ ವಿಚಾರವಾಗಿ ಭಾರೀ ರಶ್ ಆಗುತ್ತದೆ. ನೂರು ಶೇ. ಫಲಿತಾಂಶ ಪಡೆದ ಟಾಪರ್‌ಗಳಿಗೆ ವಿಶೇಷ ಆದ್ಯತೆ ಕೊಟ್ಟು ಹಲವು ಕಾಲೇಜುಗಳು ಪ್ರವೇಶಾತಿ ನೀಡುವಾಗ ಮರ್ಕಝುಲ್ ಹುದಾ ಅದಕ್ಕೆ ತದ್ವಿರುದ್ದ. ಅಡ್ಮಿಶನ್‌ಗೆ ವಿದ್ಯಾರ್ಥಿನಿಯರ ಅಂಕವನ್ನು ಮಾತ್ರ ಮಾನದಂಡವಾಗಿಸದೆ ಸಂಸ್ಥೆಗೆ ಸೇರಿದ ಬಳಿಕ ಅವರನ್ನು ಸಾಧನೆ ಮಾಡಿಸುವುದು ಈ ಕಾಲೇಜಿನ ವಿಶೇಷತೆ. ಅಂದರೆ ಕಲಿಕೆಯಲ್ಲಿ ತೀರಾ ಹಿಂದುಳಿದವರನ್ನೂ ಈ ಕಾಲೇಜಿನಲ್ಲಿ ದಾಖಲಾತಿ ಮಾಡಿಕೊಳ್ಳುತ್ತಿದ್ದು ಅವರನ್ನೂ ವಿಶೀಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗುವಂತೆ ಪರಿವರ್ತಿಸಲಾಗುತ್ತಿದೆ.

ಯಶಸ್ವಿಯಾದ ‘ಸ್ಟಡೀ ಐಸಿಯು: ಸ್ಟಡೀ ಐಸಿಯು ಎನ್ನುವ ವಿಭಿನ್ನ ಪದ್ದತಿಯನ್ನು ಮರ್ಕಝುಲ್ ಹುದಾದಲ್ಲಿ ಜಾರಿಗೆ ತರಲಾಗಿದ್ದು ಪ್ರಾರಂಭಿಕ ಹಂತದಲ್ಲೇ ಅದು ಯಶಸ್ಸು ಕಂಡಿದೆ. ಅದರ ಫಲವಾಗಿಯೇ ಈ ಬಾರಿಯ ದ್ವಿತೀಯ ಪಿಯುಸಿಯಲ್ಲಿ ಸಂಸ್ಥೆ 100% ಫಲಿತಾಂಶದ ಸಾಧನೆ ಮಾಡಿದ್ದು ಕಲಿಕೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿನಿಯರೂ ಡಿಸ್ಟಿಂಕ್ಷನ್ ಹಾಗೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಪರಿಣಾಮಕಾರಿ ಸಿಸಿಯು ಘಟಕ: ಗುಣಮಟ್ಟದ ಶಿಕ್ಷಣದ ಜೊತೆಗೆ ನೈತಿಕ ಬೋಧನೆಯನ್ನೂ ಇಲ್ಲಿ ನೀಡಲಾಗುತ್ತದೆ. ವಿದ್ಯಾರ್ಥಿನಿಯರು ಯಾವುದೇ ಸಂದರ್ಭದಲ್ಲೂ ಹಾದಿ ತಪ್ಪದೇ ಇರುವಂತೆ ಮಾಡಲು ಮತ್ತು ಕಲಿಕೆ ಬಿಟ್ಟು ಇತರ ವಿಚಾರಗಳತ್ತ ಆಕರ್ಷಿತರಾಗದಂತೆ ಮಾಡಲು ವಿಶೇಷ ತರಬೇತಿ ನೀಡಲಾಗುತ್ತದೆ. ಅದಕ್ಕಾಗಿಯೇ ಸಿ.ಸಿ.ಯು ಎಂಬ ಘಟಕ ಕೂಡಾ ಇಲ್ಲಿದೆ.

‘ಸಕ್ಸಸ್ ವರ್ಲ್ಡ್’ ತೆರೆಯಲು ಚಿಂತನೆ: ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಗುರುತಿಸಿ ಅವರನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಿ ಸಮಾಜಕ್ಕೆ ಅರ್ಪಿಸುವ ನಿಟ್ಟಿನಲ್ಲಿ ಕಾರ್ಯಾಚರಿಸಲು ‘ಸಕ್ಸಸ್ ವರ್ಲ್ಡ್’ ಎಂಬ ವಿಶೇಷ ವಿಭಾಗವೊಂದನ್ನು ತೆರೆಯಲು ಸಮಿತಿ ಚಿಂತನೆ ನಡೆಸಿದೆ. ಇಲ್ಲಿ ಸಂಸ್ಥೆಗೆ ದಾಖಲಾಗುವ ಎಲ್ಲಾ ಪ್ರತಿಭಾನ್ವಿತೆಯರ ಬಗ್ಗೆ ಸಮಗ್ರ ಅಧ್ಯಯನ ನಡೆಸಲಾಗುತ್ತದೆ. ಅದಕ್ಕಾಗಿ ದಾಖಲಾತಿ ಫಾರಂಗಳೊಂದಿಗೆ ವಿಶೇಷ ಅರ್ಜಿಯನ್ನೂ ನೀಡಲಾಗುತ್ತದೆ. ಅದನ್ನು ಭರ್ತಿ ಮಾಡಿ ಕೊಟ್ಟ ಮೇಲೆ ಪರಿಶೀಲನೆಗೊಳಪಡಿಸಿ ವಿದ್ಯಾರ್ಥಿನಿಯರಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಸಮಗ್ರವಾಗಿ ಹೊರತರಲಾಗುತ್ತದೆ. ಅದಕ್ಕಾಗಿ ಸರ್ವಸಜ್ಜಿತ ಕಚೇರಿ ಕಾರ್ಯಾಚರಿಸಲಿದೆ.

ಉನ್ನತ ಹುದ್ದೆಯಲ್ಲಿ ಸಂಸ್ಥೆಯ ವಿದ್ಯಾರ್ಥಿನಿಯರು: ಸಮಾಜದಲ್ಲಿ ಮಹಿಳಾ ಡಾಕ್ಟರ್, ಇಂಜಿನಿಯರ್, ವಕೀಲರು ಹಾಗೂ ಸರಕಾರಿ ಉದ್ಯೋಗಿಗಳನ್ನು ಉಂಟುಮಾಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲು ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ ಹೆಚ್ಚಿನ ಮಾಹಿತಿ ನೀಡಿ ಅವರನ್ನು ತಯಾರುಗೊಳಿಸಲಾಗುತ್ತಿದೆ. ಇದರ ಭಾಗವಾಗಿ ಇಂದು ಹಲವು ವಿದ್ಯಾರ್ಥಿನಿಯರು ಉನ್ನತ ವ್ಯಾಸಾಂಗದಲ್ಲಿ ಮುಂದುವರಿಯುತ್ತಿದ್ದು, ಸರಕಾರಿ ಹಾಗೂ ಇನ್ನಿತರ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಕ್ಕೆ ಇನ್ನಷ್ಟು ವೇಗವಾಗಿ ಕಾರ್ಯಾಚರಿಸಲು ರೂಪುರೇಷೆ ಸಿದ್ದಗೊಳ್ಳುತ್ತಿದ್ದು ‘ಮರ್ಕಝ್ ಟಾರ್ಗೆಟ್’ ಎಂಬ ಘೋಷ ವಾಕ್ಯದಡಿ ಕಾರ್ಯಾಚರಣೆ ನಡೆಸಲಿದೆ.

ಪ್ರತೀ ವರ್ಷ ಕಲಿಕೆಗೆ ಎಷ್ಡು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೋ ಅದೇ ರೀತಿ ಇತರ ಕಾರ್ಯಚಟುವಟಿಕೆಗಳಿಗೂ ಹೆಚ್ಚಿನ ಗಮನ ನೀಡಲಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳಿಂದ ಆಯಾ ಸಂದರ್ಭಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ. ಪಾಠ ಹಾಗೂ ಪಾಠ್ಯೇತರ ವಿಚಾರಗಳಲ್ಲಿ ನಡೆಯುವ ಈ ಸ್ಪೆಷಲ್ ಕ್ಲಾಸ್‌ಗಳು ವಿದ್ಯಾರ್ಥಿನಿಯರಿಗೆ ಅತ್ಯಂತ ಫಲಪ್ರದಾಯಕವಾಗಿದೆ

ಜಾಗೃತಿ ಕಾರ್ಯಕ್ರಮ: ಶಿಕ್ಷಣದ ಜೊತೆಗೆ ಆರೋಗ್ಯ, ಸ್ವಚ್ಚತೆ ವಿಚಾರಗಳಲ್ಲಿ ಸಂಸ್ಥೆ ಹೆಚ್ಚಿನ ಗಮನವಹಿಸುತ್ತದೆ. ಅದಕ್ಕಾಗಿ ಶಿಬಿರ, ಜಾಗೃತಿ ಮೂಡಿಸಲಾಗುತ್ತಿದೆ. ಉಚಿತ ಆರೋಗ್ಯ ಶಿಬಿರಗಳನ್ನೂ ನಡೆಸಲಾಗುತ್ತದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆಸಲ್ಪಟ್ಟ ಚಿಕಿತ್ಸಾ ಶಿಬಿರದಲ್ಲಿ ಸುಮಾರು 800ಕ್ಕೂ ಹೆಚ್ಚಿನ ಸಾರ್ವಜನಿಕರು ಹಾಗೂ ವಿದ್ಯಾರ್ಥಿನಿಯರು ಪ್ರಯೋಜನ ಪಡೆದುಕೊಂಡಿದ್ದರು.

ಸರ್ವ ಧರ್ಮೀಯರ ಉಪನ್ಯಾಸಕಿಯರ ತಂಡ: ಕಲುಷಿತಗೊಂಡಿರುವ ಸಮಾಜದ ವಾತಾವರಣವನ್ನು ಶುದ್ದಗೊಳಿಸಲು ಮರ್ಕಝ್ ಪ್ರಯತ್ನಿಸುತ್ತಿದ್ದು ಸಮಾಜಕ್ಕೆ ಸೌಹಾರ್ದತೆಯ ಸಂದೇಶವನ್ನು ಕೂಡಾ ನೀಡುತ್ತಿದೆ. ಸರ್ವ ಧರ್ಮೀಯ ಉಪನ್ಯಾಸಕಿಯರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲರಿಗೂ ಅವರವರ ಧರ್ಮಗಳ ಆಚಾರ ವಿಚಾರ ಉಡುಗೆ ತೊಡುಗೆಗಳಿಗೆ ಸಂಸ್ಥೆ ಮುಕ್ತ ಅವಕಾಶ ನೀಡಿದೆ. ನೂರಾರು ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಇಲ್ಲಿ ಉಚಿತ ಶಿಕ್ಷಣವನ್ನೂ ನೀಡಲಾಗುತ್ತಿದೆ. ಕಲಿಕೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಬಡ ಅನಾಥ ವಿದ್ಯಾರ್ಥಿನಿಯರ ಪಾಲಿಗೆ ಸಂಸ್ಥೆ ಆಶಾದಾಯಕ ಕೇಂದ್ರವಾಗಿದೆ.

ಇನ್ನಷ್ಟು ಯೋಜನೆಗಳು ಜಾರಿಗೆ: ಮರ್ಕಝುಲ್ ಹುದಾ ಆಡಳಿತ ಸಮಿತಿಯ ಮುಂದೆ ದೊಡ್ಡ ಕನಸುಗಳಿವೆ. ಮಹಿಳಾ ವಿದ್ಯಾರಂಗದಲ್ಲಿ ಮತ್ತಷ್ಟು ಸಾಧನೆ ಮಾಡುವ ನಿಟ್ಟಿನಲ್ಲಿ ರೂಪುರೇಷೆ ಸಿದ್ದಗೊಳ್ಳುತ್ತಿದೆ. ಮಹಿಳೆಯರ ಮೂಲಕ ಈ ಸಮಾಜವನ್ನು ಜಾಗೃತಿಗೊಳಿಸಿ ಬೆಳೆಸಲು ಬೇಕಾದ ಎಲ್ಲವನ್ನೂ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಆಡಳಿತ ಸಮಿತಿ ಕಾರ್ಯಪ್ರವೃತ್ತವಾಗಿದೆ.

ತಾಲೂಕಿನಲ್ಲೇ ಅತಿ ದೊಡ್ಡ ಮಹಿಳಾ ಲೈಬ್ರೆರಿ, ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಆಡಳಿತ ಸಮಿತಿ ಚಿಂತಿಸುತ್ತಿದೆ.
ಮರ್ಕಝ್ ಸರ್ವ ಧರ್ಮೀಯ ವಿದ್ಯಾರ್ಥಿನಿಯರಿಗೂ ಬಾಗಿಲು ತೆರೆದಿಟ್ಟಿದೆ. ಅತೀ ಕಡಿಮೆ ಶುಲ್ಕದೊಂದಿಗೆ ಗುಣಮಟ್ಟದ ಶಿಕ್ಷಣ ಸಂಸ್ಥೆಯ ಗುರಿ. ಇತರ ಧರ್ಮೀಯ ವಿದ್ಯಾರ್ಥಿನಿಯರಿಗೆ ಯಾವುದೇ ಕಟ್ಟುಪಾಡುಗಳು ಇಲ್ಲಿಲ್ಲ. ಅವರವರ ಧರ್ಮದ ಆಚಾರಗಳಂತೆ ಬಂದು ಕಲಿಯಲು ಅವಕಾಶ ನೀಡಲಾಗಿದೆ.

ರಾಜ್ಯದಲ್ಲೇ ನಂಬರ್ ವನ್ ಕ್ಯಾಂಪಸ್ ಆಗಲಿದೆ: ನಮ್ಮ ಸಂಸ್ಥೆಗೆ ಓರ್ವ ವಿದ್ಯಾರ್ಥಿನಿ ದಾಖಲಾದರೆ ಅವರ ಸರ್ವತೋಮುಖ ಅಭಿವೃದ್ದಿಗೆ ಏನೇನು ಬೇಕೋ ಅವೆಲ್ಲವನ್ನೂ ಮಾಡುವ ಮೂಲಕ ಚೌಕಟ್ಟಿನೊಳಗಡೆ ನಿಂತು ವಿದ್ಯಾರ್ಥಿನಿಯರನ್ನು ಎತ್ತರಕ್ಕೆ ಬೆಳೆಸಲಾಗುತ್ತದೆ. ವಿವಿಧ ಯುನಿಟ್‌ಗಳ ರಚನೆ ಮಾಡುವ ಮೂಲಕ ವಿದ್ಯಾರ್ಥಿನಿಯರ ಆಮೂಲಾಗ್ರ ಬದಲಾವಣೆ ತರಲಾಗುತ್ತದೆ. ಮುಂದೆ ಪೋಷಕರು ಅಚ್ಚರಿಪಡುವಂತಹ ರೀತಿಯ ಯೋಜನೆಗಳು ಲಭ್ಯಗೊಳ್ಳಲಿದೆ. ಈ ಮೂಲಕ ಮರ್ಕಝುಲ್ ಹುದಾ ರಾಜ್ಯದಲ್ಲೇ ನಂಬರ್ ವನ್ ಮಹಿಳಾ ವಿದ್ಯಾ ಕ್ಯಾಂಪಸ್ ಆಗಲಿದೆ. ಗುಣಮಟ್ಟದ ಶಿಕ್ಷಣದಲ್ಲಿ ಯಾವುದೇ ರಾಜಿ ಇಲ್ಲದ ಕಾರ್ಯಾಚರಣೆ ನಡೆಸಲಾಗುತ್ತದೆ. ಸಂಸ್ಥೆಯ ಉಪನ್ಯಾಸಕಿಯರು ವಿದ್ಯಾರ್ಥಿನಿಯರ ಶ್ರೇಯೋಭಿವೃದ್ಧಿಗೆ ಶ್ರಮಪಡುತ್ತಿದ್ದು ಕಾಲೇಜಿನ ಸಾಧನೆಯ ಹಿಂದೆ ಶಿಕ್ಷಕಿಯರ ಪಾತ್ರ ಅಪಾರವಾಗಿದ್ದು ಸಾಧನೆಯ ಕೀರ್ತಿ ಅವರಿಗೆ ಸಲ್ಲಬೇಕು ಎಂದು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.

ಕಲಿಕೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿನಿಯನ್ನು ವಿಶಿಷ್ಟ ಶ್ರೇಣಿ ಪಡೆಯುವ ಹಂತಕ್ಕೆ ತಂದು ನಿಲ್ಲಿಸುವ ಕಾರ್ಯ ನಮ್ಮ ಸಂಸ್ಥೆಯಲ್ಲಿ ನಡೆಯುತ್ತಿರುವುದು ಸಂತೋಷದಾಯಕ ವಿಚಾರ. ಮುಂದೆ ಮತ್ತಷ್ಟು ಅಚ್ಚರಿದಾಯಕ ಬದಲಾವಣೆಗಳನ್ನು ಸಮಾಜ ನಿರೀಕ್ಷಿಸಬಹುದು. ಹೆಣ್ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ವಿನೂತನ ಕಾರ್ಯಾಚರಣೆ ನಡೆಯುತ್ತಿದ್ದು ಎಲ್ಲರೂ ನಮ್ಮೊಂದಿಗೆ ಕೈಜೋಡಿಸಲು ವಿನಂತಿ.
-ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಪ್ರ.ಕಾರ್ಯದರ್ಶಿ

20 ವರ್ಷಗಳಿಂದ ಈ ಸಮಾಜಕ್ಕೆ ಸುಸಂಸ್ಕೃತ, ಸುಶಿಕ್ಷಿತ ಮಹಿಳೆಯರನ್ನು ನೀಡುವ ಕಾಯಕವನ್ನು ನಮ್ಮ ವಿದ್ಯಾಸಂಸ್ಥೆ ಮಾಡುತ್ತಿದೆ. ಪ್ರತಿ ವರ್ಷವೂ ಉತ್ತಮ ಫಲಿತಾಂಶದೊಂದಿಗೆ ವಿದ್ಯಾರ್ಥಿನಿಯರು ಕಾಲೇಜಿನ ಕೀರ್ತಿಯನ್ನು ಬೆಳಗುತ್ತಿದ್ದಾರೆ. ಉಪನ್ಯಾಸಕ ವೃಂದ ಹಾಗೂ ಆಡಳಿತ ಮಂಡಳಿಯವರ ಶ್ರಮ, ಸಹಕಾರ ಜೊತೆಗೂಡಿ ಸಾಗುತ್ತಿರುವುದು ವಿದ್ಯಾರ್ಥಿನಿಯರ ಸಾಧನೆಗೆ ಪೂರಕವಾಗಿದೆ.
-ಸಂಧ್ಯಾ ಪಿ, ಪ್ರಾಂಶುಪಾಲರು ಪದವಿಪೂರ್ವ ವಿಭಾಗ

ಮರ್ಕಝುಲ್ ಹುದಾ ಸಮೂಹ ಶಿಕ್ಷಣ ಸಂಸ್ಥೆ ಸುಮಾರು 22 ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಯ ವಿದ್ಯಾರ್ಥಿನಿಯರಿಗೆ ಮೌಲ್ಯಯುತವಾದಂತ ಶಿಕ್ಷಣವನ್ನು ನೀಡಿ ಸತತವಾಗಿ ಉತ್ತಮ ರೀತಿಯ ಫಲಿತಾಂಶವನ್ನು ನೀಡುತ್ತಾ ಬಂದಿದೆ. ಪ್ರಸ್ತುತ ಈ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿನಿಯರ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡುವ ಉದ್ದೇಶದೊಂದಿಗೆ ಪದವಿ ವಿಭಾಗವನ್ನು ಪ್ರಾರಂಭಿಸಿ ಹೊಸ ಶೈಕ್ಷಣಿಕ ವರ್ಷಕ್ಕೆ ಬಿ.ಎ ಮತ್ತು ಬಿಕಾಂ ವಿಭಾಗಗಳ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಮುಂದೆಯೂ ನಮ್ಮ ಸಂಸ್ಥೆ ಹೊಸ ಹೊಸ ವಿಭಾಗಗಳನ್ನು ಪರಿಚಯಿಸಿ ಮಹಿಳಾ ಶಿಕ್ಷಣ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವುದರ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ.
-ಮಹಮ್ಮದ್ ಮುನ್ಸೂರ್ ಕಡಬ, ಪ್ರಾಂಶುಪಾಲರು ಪದವಿ ಕಾಲೇಜು

LEAVE A REPLY

Please enter your comment!
Please enter your name here