ಸರ್ವೋದಯ ಪ್ರೌಢಶಾಲೆಯಲ್ಲಿ ಮೇ 1994-95 ನೇ ಸಾಲಿನ ಹಳೆ ವಿದ್ಯಾರ್ಥಿಗಳ ‘ರಜತ ಸಮನ್ವಯ ‘ಕಾರ್ಯಕ್ರಮ’

0

ಬಡಗನ್ನೂರುಃ  ಸರ್ವೋದಯ ಪ್ರೌಢಶಾಲೆಯಲ್ಲಿ ಮೇ 1994-95 ನೇ ಸಾಲಿನ ಹಳೆ ವಿದ್ಯಾರ್ಥಿಗಳ ‘ರಜತ ಸಮನ್ವಯ’ ಕಾರ್ಯಕ್ರಮ ಮೇ.30 ರಂದು ನಡೆಯಿತು.

 ಸರ್ವೋದಯ ಪ್ರೌಢಶಾಲಾ ಬೆಳ್ಳಿಹಬ್ಬದ ಸಂಭ್ರಮದ  ಅವಧಿಯ   ಹತ್ತನೇ ತರಗತಿಯ ಸುಮಾರು 35 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರು. ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಿದ್ಯಾ ಸಂಸ್ಥೆಗೆ ಸುಮಾರು 50005 ರೂಪಾಯಿನ್ನು ನೀಡಲಾಯಿತು. ಎಚ್ ಡಿ  ಶಿವರಾಮ, ವಿಷ್ಣುಭಟ್ ಪಡ್ಪು, ರಾಮಣ್ಣ ಗೌಡ, ಪ್ರೇಮ ಕಲ್ಲೂರಾಯ, ಗೋಪಾಲ ಕೃಷ್ಣ ಭಟ್, ವೆಂಕಟರಮಣ ಭಟ್, ಹಾಗೂ ಶಾಲೆಯ ಸಂಚಾಲಕ ಮಾಧವ ಭಟ್ ಕೊಲ್ಯ , ಕೃಷ್ಣ ನಾಯ್ಕ ವೈ. ಉಪಸ್ಥಿತರಿದ್ದು ಶುಭಹಾರೈಸಿದರು. ಹಳೆ ವಿದ್ಯಾರ್ಥಿಗಳ ಪರವಾಗಿ ರಾಮಪ್ರಸಾದ್ ಶೆಟ್ಟಿ, ಪ್ರಸಾದ್ ಭಟ್, ಲಕ್ಷ್ಮಿದೇವಿ, ಮಾತನಾಡಿದರು. ಚಂದ್ರಶೇಖರ ಸುಳ್ಯಪದವು  ಕಾರ್ಯಕ್ರಮ ನಿರೂಪಣೆ ಗೈದರು. ಬಳಿಕ ವಿವಿಧ ಸ್ಪರ್ಧೆಗಳು ನಡೆಯಿತು.

LEAVE A REPLY

Please enter your comment!
Please enter your name here