ಪುತ್ತೂರು: ಗಾಂಧಿ ಕಟ್ಟೆಯ ಬಳಿ ಅಮ್ ಆದ್ಮಿ ಪಾರ್ಟಿಯ ಪ್ರಚಾರ ಸಭೆ

0

ಪುತ್ತೂರು : ಅಮ್ ಆದ್ಮಿ ಪಾರ್ಟಿಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯು ಬಸ್ಸು ನಿಲ್ದಾಣದ ಗಾಂಧಿ ಕಟ್ಟೆಯ ಬಳಿ ನಡೆಯಿತು.

ಪುರುಷೋತ್ತಮ ಗೌಡ ಕೋಲ್ಪೆ ಮಾತನಾಡಿ ಈ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆ ಮಾಡುವಾಗ ವಿಧ್ಯಾವಂತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ವಿಧಾನ ಸೌಧದ ಒಳಗಡೆ ನಮ್ಮ ಸಮಸ್ಯೆಗಳನ್ನು ಮಾತನಾಡುವಾಗ ಭಾಷೆಯ ಸಮಸ್ಯೆ ಆಗುವುದಿಲ್ಲ ಈಗಾಗಲೇ ನಾವು ಆಯ್ಕೆ ಮಾಡಿದ ಅಭ್ಯರ್ಥಿಗಳ ಬಗ್ಗೆ ಭಾಷೆ ತಿಳಿಯದೆ ಮಾತನಾಡಿ ಟ್ರೋಲ್ ಆದದ್ದನ್ನು ಸಾಮಾಜಿಕ ಜಾಲತಾಣದ ಮೂಲಕ ನೋಡಿದ್ದೇವೆ ಎಂದರು.

ಡಾ.ಬಿ.ಕೆ.ವಿಷುಕುಮಾರ್ ಗೌಡ ಮಾತನಾಡಿ ಜನಪ್ರತಿನಿಧಿ ಎಂದರೆ ಕೇವಲ ಅಧಿಕಾರದ ಆಸೆಗೆ ಆಗಬಾರದು.ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಯನ್ನು ಆಲಿಸುವ ವ್ಯಕ್ತಿಯಾಗಬೇಕು.ಈ ಬಾರಿ ನನಗೊಂದು ಅವಕಾಶ ಕೊಡಿ ಎಂದರು.

LEAVE A REPLY

Please enter your comment!
Please enter your name here