ಪುತ್ತೂರಿನ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಒಲವು-ಅನಿವಾಸಿ ಭಾರತೀಯರೊಂದಿಗೆ ಬಿಜೆಪಿ ಜಿಲ್ಲಾಧ್ಯಕ್ಷರ ಸಂವಾದ

0

ಪುತ್ತೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆಯವರು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ  ಅಂತರ್ಜಾಲ ಮುಖಾಂತರ ಏ. 27 ರಂದು ಮಾತನಾಡಿದರು.

ಭಾರತೀಯ ಜನತಾಪಕ್ಷ ಕಳೆದ‌ ನಾಲ್ಕು ದಶಕಗಳಲ್ಲಿ ಬೆಳೆದು ಬಂದ ಬಗ್ಗೆ ವಿವರಿಸಿದರು.‌ಅಟಲ್ ಬಿಹಾರಿ ವಾಜಪೇಯಿಯವರ ಕಾಲದಿಂದ ಪ್ರಸ್ತುತ ಮೋದಿ ಸರಕಾರ ಮಾಡುತ್ತಿರುವ ಸಾಧನೆಗೆ ಅನಿವಾಸಿ ಭಾರತೀಯರ ಕೊಡುಗೆಯನ್ನು ಸ್ಮರಿಸಿದರು.

ಭಾರತವು ವಿಶ್ವಗುರುವಾಗುವ ದಾರಿಯಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ ಆರ್ಥಿಕ ವ್ಯವಸ್ಥೆಯ ಸ್ವಾವಲಂಬನೆಗೆ ಒಂದು ಪ್ರಮುಖ ಘಟ್ಟವಾಗಿರುತ್ತದೆ. ಅದನ್ನು ಸಾಧಿಸಲು ಮೂರು ಮುಖ್ಯ ಕ್ಷೇತ್ರಗಳಾದ – ರಕ್ಷಣಾ ಇಲಾಖೆಯಲ್ಲಿ ಪ್ರಗತಿ – ತೈಲ ಉತ್ಪಾದನೆ ಹಾಗೂ ರೂಪಾಯಿ ಮೌಲ್ಯಾಧರಿತ ವಿದೇಶಿ‌ ವಿನಿಯಮದಲ್ಲಿ ನಾವು ಮೇಲುಗೈ ಸಾಧಿಸಬೇಕಾಗಿದೆ ಎಂದು ಮನವರಿಕೆ ಮಾಡಿದರು.

ಪುತ್ತೂರಿನ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರಸ್ತಾಪಿಸಿದ ಸುದರ್ಶನ್ ರವರು ‘ವ್ಯಕ್ತಿಯಿಂದ ಪಕ್ಷ ದೊಡ್ಡದು.ಪಕ್ಷಕ್ಕಿಂತ ರಾಷ್ಟ್ರ ದೊಡ್ಡದು ಎಂಬ ಭಾಜಪ ದ ತತ್ವ ಹಾಗೂ ಮಹಿಳಾ ಸಬಲೀಕರಣದ ಧ್ಯೇಯಕ್ಕೆ ಒತ್ತು ಕೊಟ್ಟು ಪುತ್ತೂರಿನಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಎಂದು ಹೇಳಿ ಅವರ ಗೆಲುವಿಗೆ ಅನಿವಾಸಿ ಭಾರತೀಯರ ಸಂಪೂರ್ಣ ಸಹಕಾರ ಕೋರಿದರು.

ಅಮೆರಿಕಾ, ಕೆನಡಾ, ಇಂಗ್ಲಂಡ್, ಕೊಲ್ಲಿ ರಾಷ್ಟ್ರಗಳು, ಸಿಂಗಪುರ ಮತ್ತು ಆಸ್ಟ್ರೇಲಿಯಾ ದಲ್ಲಿ ನೆಲೆಸಿರುವ ಹಲವು ಅನಿವಾಸಿ ಭಾರತೀಯರು ಸಂವಾದದಲ್ಲಿ ಭಾಗವಹಿಸಿದ್ದು, ಪಕ್ಷದ ಗೆಲುವಿಗೆ ಶ್ರಮಿಸುವಂತೆ ಭರವಸೆ ನೀಡಿದರು.

LEAVE A REPLY

Please enter your comment!
Please enter your name here