ಪುತ್ತೂರು : ರೋಡ್‌ ಶೋದೊಂದಿಗೆ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಿರುವ ಅಭ್ಯರ್ಥಿಗಳು

0

ಪುತ್ತೂರು;ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಎರಡು ದಿನಗಳು ಬಾಕಿ ಇದ್ದು ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದೆ. ಮೇ 8 ಸೋಮವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಮೇ 9 ಮಂಗಳವಾರದಂದು ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದ್ದು ಕಡಿಮೆ ಸಮಯಾವಕಾಶದ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ರೋಡ್ ಶೋವನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಚಿಂತನೆ ನಡೆಸಿ ರೋಡ್ ಶೋಗೆ ಪಕ್ಷಗಳು ಪ್ರಾಧಾನ್ಯತೆ ನೀಡಿದೆ.

ಪುತ್ತೂರಿನಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಇಂದು ಸಂಜೆ 4:00ಕ್ಕೆ ಉಪ್ಪಿನಂಗಡಿ ಗಾಂಧಿ ಪಾರ್ಕ್‌ ನಿಂದ ಹಳೆ ಬಸ್ ನಿಲ್ದಾಣದವರಿಗೆ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ.ಇದಾದ ಬಳಿಕ ಮೇ.8ರಂದು ಮಧ್ಯಾಹ್ನ 2 ಗಂಟೆಗೆ ಪುತ್ತೂರಿನ ಬೊಳುವಾರ್ ನಿಂದ ದರ್ಬೆಯವರೆಗೆ ಮಹಾಸಂಗಮ ರೋಡ್ ಶೋ ನಡೆಸಲಿದ್ದಾರೆ.

ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮೇ 8 ಸೋಮವಾರದಂದು ಉಪ್ಪಿನಂಗಡಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬೆಳಿಗ್ಗೆ 9 ರಿಂದ ಗಾಂಧಿ ಪಾರ್ಕಿನಿಂದ ಬಸ್ ನಿಲ್ದಾಣದವರೆಗೆ ರೋಡ್‌ ಶೋ ನಡೆಸಲಿದ್ದು ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಪ್ರತಾಪ್ ಸಿಂಹ ನಾಯಕ್ ಭಾಗವಹಿಸಲಿದ್ದಾರೆ.

ಇನ್ನುಳಿದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅಶೋಕ್ ಕುಮಾರ್ ಕೂಡ ಕೊನೆಗಳಿಗೆಯಲ್ಲಿ ರೋಡ್ ಶೋ ನೆಚ್ಚಿಕೊಂಡಿದ್ದಾರೆ.

ಮೇ 7 ಭಾನುವಾರ ಸಂಜೆ 4:30 ರಿಂದ ವಿಟ್ಲದಲ್ಲಿ ರೋಡ್ ಶೋ ನಡೆಯಲಿದ್ದು, ಮೇ 8 ಸೋಮವಾರ ಬೆಳಿಗ್ಗೆ ಉಪ್ಪಿನಂಗಡಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ.ಸಂಜೆ 3 ಗಂಟೆಗೆ ಬೊಳುವಾರ್‌ ನಿಂದ ದರ್ಬೆಯವರೆಗೆ ರೋಡ್ ಶೋ ನಡೆಸಲಿದ್ದು ಖ್ಯಾತ ಚಿತ್ರ ನಟಿ ರಮ್ಯಾ ಮತ್ತು ಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here