ಬ್ಲಾಕ್ ಕಾಂಗ್ರೆಸ್ ಎಸ್.ಟಿ ಘಟಕದಿಂದ ಕಾಂಗ್ರೆಸ್ ಪರ ಮತಯಾಚನೆ

0

ಪುತ್ತೂರು:ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ಹಾಗೂ ಪಾಣಾಜೆ ವಲಯದ ಸಹ ಉಸ್ತುವಾರಿ ಬಾಬು ರೈ ಕೋಟೆರವರ ನೇತೃತ್ವದಲ್ಲಿ ಕಾಂಗ್ರೆಸ್ ಆಭ್ಯರ್ಥಿ ಅಶೋಕ್ ಕುಮಾರ್ ರೈಯವರ ಪರ ಪಾಣಾಜೆ ಹಾಗೂ ಕೇಪು ವಲಯದಲ್ಲಿ ಮನೆ ಮನೆ ತೆರಳಿ ಮತಯಾಚನೆ ಮಾಡಲಾಯಿತು.


ಈ ಸಂದರ್ಭದಲ್ಲಿ ಬಾಲಕೃಷ್ಣ ನಾಯ್ಕ, ಕೇಶವ ನಾಯ್ಕ, ವಿಮಲ ನಾಯ್ಕ, ಪ್ರೇಮಲತಾ ಕಟ್ಟೆ, ಪಂಚಾಯತ್ ಸದಸ್ಯರಾದ ನಾರಾಯಣ ನಾಯಕ್, ವಿಮಲಾ ನಾಯ್ಕ್ , ಕೃಷ್ಣಪ್ಪ, ಮೈಮುನಾ, ಈಶ್ವರ ನಾಯ್ಕ, ಕರುಣಾಕರ ಉಪಸ್ಥಿತರಿದ್ದರು. ಬಳಿಕ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಗೆ ಬೇಟಿ ನೀಡಲಾಯಿತು. ಎಸ್ ಕೆ ಮೊಹಮ್ಮದ್ ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ ಬಿಜೆಪಿ ಸರಕಾರ ಎಸ್.ಸಿ, ಎಸ್.ಟಿ ಯವರಿಗೆ ಸಂವಿಧಾನಬದ್ಧವಾಗಿ ದೊರೆಯುತ್ತಿದ್ದ ಹತ್ತು ಹಲವು ಸವಲತ್ತುಗಳನ್ನು ರದ್ದುಪಡಿಸಿ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಮನವರಿಕೆ ಮಾಡಲಾಯಿತು.

LEAVE A REPLY

Please enter your comment!
Please enter your name here