ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪರವಾಗಿ ಮನೆ ಮನೆ ಸಂಪರ್ಕ ಮಹಾ ಅಭಿಯಾನ

0

ಪುತ್ತೂರು:ವಿಧಾನ ಸಭಾ ಚುನಾವಣೆಯ ಪುತ್ತೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪರವಾಗಿ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪುತ್ತೂರು ಕ್ಷೇತ್ರದಾದ್ಯಂತ ಎರಡು ದಿನಗಳ ಕಾಲ ಪುತ್ತೂರು ಕ್ಷೇತ್ರದ 220 ಬೂತ್‌ಗಳಲ್ಲಿ ಮನೆ ಮನೆ ಸಂಪರ್ಕಸುವ ಮಹಾ ಅಭಿಯಾನ ನಡೆಸಿ ಮತಯಾಚಿಸಿದರು.

ಮೇ.7ರಂದು ಬೆಳಿಗ್ಗೆ ಪ್ರಾರಂಭಗೊಂಡ ಮಹಾ ಅಭಿಯಾನದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಎಲ್ಲಾ ಬೂತ್‌ಗಳಲ್ಲಿ ಮನೆ ಮನೆಗಳನ್ನು ಭೇಟಿ ನೀಡಿ ಮತ ಯಾಚಿಸಿದರು. ಪುತ್ತೂರು ಕ್ಷೇತ್ರದ ಎಲ್ಲಾ 220 ಬೂತ್‌ಗಳಲ್ಲಿ ನಡೆದ ಮಹಾ ಸಂಪರ್ಕ ಅಭಿಯಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮನೆ ಮನೆಗಳಿಗೆ ಭೇಟಿ ನೀಡಿ, ಪುತ್ತಿಲರವರು ಮತದಾರರಿಗೆ ನೀಡಿದ ಪ್ರಣಾಳಿಕೆ ಹಂಚಿ, ಬ್ಯಾಟ್ ಚಿಹ್ನೆಯ ಬಗ್ಗೆ ಅರಿವು ಮೂಡಿಸಿದರು. ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭಗೊಂಡ ಅಭಿಯಾನವು ರಾತ್ರಿಯವರೆಗೂ ನಡೆಯಿತು. ಕಾರ್ಯಕರ್ತರು ಸ್ವಯಂ ಸ್ಪೂರ್ತಿಯಿಂದ ಸುಡುವ ಬಿಸಿಲನ್ನು ಲೆಕ್ಕಿಸದೇ ಉತ್ಸಾಹದಲ್ಲಿ ಮನೆ ಮನೆ ಸಂಪರ್ಕ ಮಹಾ ಅಭಿಯಾನದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here