ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ್ ಕುಮಾರ್ ರೈ ಒಕ್ಕೆತ್ತೂರು ಗ್ರಾಮದ ಸುರುಳಿ ಮೂಲೆ ದಲಿತ ಕಾಲೋನಿಯಲ್ಲಿ ಮತಯಾಚನೆ ನಡೆಸಿದರು.
ಕಾಲೋನಿ ನಿವಾಸಿಗಳೊಂದಿಗೆ ಮಾತನಾಡಿದ ರೈ, ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಬಗ್ಗೆ ವಿವರಿಸಿ, ಮತ ನೀಡಿ ಬೆಂಬಲಿಸುವಂತೆ ಮನವಿ ಮಾಡಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.