ಪ್ರಧಾನಿ ಮೋದಿ ರೋಡ್ ಶೋದಲ್ಲೂ ‘ಪುತ್ತೂರಿಗೆ ಪುತ್ತಿಲ’ ಘೋಷಣೆ; ಬೆಂಗಳೂರಿಗೂ ವ್ಯಾಪಿಸಿದ ಪುತ್ತೂರಿಗೆ ಪುತ್ತಿಲ ಹವಾ!

0

ಪುತ್ತೂರು: ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿರುವ ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲರವರ ಚುನಾವಣಾ ಪ್ರಚಾರ, ಮತ ಬೇಟೆಗಳು ಭರ್ಜರಿಯಾಗಿ ನಡೆಯುತ್ತಿದೆ. ಪುತ್ತೂರಿನಾದ್ಯಂತ ವ್ಯಾಪಿಸಿರುವ ‘ಪುತ್ತೂರಿಗೆ ಪುತ್ತಿಲ’ ಚುನಾವಣಾ ಹವಾ ರಾಜ್ಯ ರಾಜಧಾನಿ ಬೆಂಗಳೂರಿಗೂ ವ್ಯಾಪಿಸಿದೆ. ಬೆಂಗಳೂರಿನಲ್ಲಿ ಎರಡು ದಿನ ನಡೆದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋದಲ್ಲಿಯೂ ಪುತ್ತಿಲ ಪರ ಘೋಷಣೆಗಳು ಮೊಳಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೇ 6ರಂದು ಬೆಂಗಳೂರಿನ ಸಿಲಿಕಾನ್ ಸಿಟಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಮೆಗಾ ರೋಡ್ ಶೋದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮೋದಿ ಅಭಿಮಾನಿಗಳು ಭಾಗವಹಿಸಿ ‘ಮೋದಿ ಮೋದಿ’ ಘೋಷಣೆ ಕೂಗಿದರು. ಈ ಘೋಷಣೆಯ ಮಧ್ಯೆ ‘ಪುತ್ತೂರಿಗೆ ಪುತ್ತಿಲ’ ಘೋಷಣೆಯೂ ಕೆಲವರಿಂದ ಮೊಳಗಿದೆ. ಎರಡನೇ ದಿನವಾದ ಮೇ.7ರಂದು ನಡೆದ ಪ್ರಧಾನಿ ಮೋದಿಯವರ ರೋಡ್ ಶೋದಲ್ಲಿಯೂ ‘ಪುತ್ತಿಲ, ಪುತ್ತಿಲ’ ಘೋಷಣೆಯು ಮೊಳಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

LEAVE A REPLY

Please enter your comment!
Please enter your name here