ಪುತ್ತೂರು: ನಗರದ ಹೊರ ವಲಯದಲ್ಲಿರುವ ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ನಲ್ಲಿ ಮೇ 7 ರಂದು ನಡೆದ ದಿವ್ಯ ಬಲಿಪೂಜೆ ಸಂದರ್ಭದಲ್ಲಿ ಚರ್ಚ್ ವ್ಯಾಪ್ತಿಯ 8 ರಿಂದ 9ರ ಹರೆಯದ 8 ಮಂದಿ ಮಕ್ಕಳಿಗೆ ಪ್ರಥಮ ಪವಿತ್ರ ಪರಮಪ್ರಸಾದವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ನೀಡಲಾಯಿತು.
ಚರ್ಚ್ ಪ್ರಧಾನ ಧರ್ಮಗುರು ವಲೇರಿಯನ್ ಫ್ರ್ಯಾಂಕ್, ಡೆನ್ಝಿಲ್ ಲೋಬೊ, ಉತ್ತರಪ್ರದೇಶ ಬರೇಲಿ ಚರ್ಚ್ ನ ಪಾವ್ಲ್ ಪಲ್ಲೇರೊರವರು ಮಕ್ಕಳಿಗೆ ಪ್ರಥಮ ಪವಿತ್ರ ಪರಮಪ್ರಸಾದವನ್ನು ನೀಡಿದರು. ಚರ್ಚ್ ವ್ಯಾಪ್ತಿಯ ಮಕ್ಕಳಾದ ಅಲೇಕ್ ರೆಬೆಲ್ಲೋ, ಹೆನ್ಸನ್ ಡಿ’ಸೋಜ, ರೋಯಿಸ್ಟನ್ ನೊರೋನ್ಹಾ, ನಿತಿನ್ ಡಿ’ಸೋಜ, ಆನ್ಸಿ ಪಸನ್ನ, ಮಿರಿಯಮ್ ಡಿ’ಸೋಜ, ರಿಶೋನಾ ಮಸ್ಕರೇನ್ಹಸ್, ಜಾಸ್ನಿ ಪಸನ್ನರವರು ಪ್ರಥಮ ಪವಿತ್ರ ಪರಮಪ್ರಸಾದವನ್ನು ಶ್ರದ್ಧಾಭಕ್ತಿಯಿಂದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪ್ರಥಮ ಪವಿತ್ರ ಪರಮಪ್ರಸಾದವನ್ನು ಸ್ವೀಕರಿಸಿದ ಎಂಟು ಮಂದಿ ಮಕ್ಕಳ ಹೆತ್ತವರು ಹಾಗೂ ಕುಟುಂಬಿಕರು, ಭಕ್ತರು ದಿವ್ಯಬಲಿಪೂಜೆಯಲ್ಲಿ ಪಾಲ್ಗೊಂಡರು.