ಪುತ್ತೂರಿನಲ್ಲಿ ಆಶಾ ತಿಮ್ಮಪ್ಪ ಗೌಡ 10 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು- ಬೂಡಿಯಾರ್ ರಾಧಾಕೃಷ್ಣ ರೈ

0


ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರವರು 10 ಸಾವಿರಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದು ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಹೇಳಿದ್ದಾರೆ.

ಪಕ್ಷದ ವತಿಯಿಂದ ಪುತ್ತೂರು ಬಿಜೆಪಿ ಚುನಾವಣಾ ಪ್ರಭಾರಿ ರಾಜೇಶ್ ಕಾವೇರಿ ಮತ್ತು ಪಕ್ಷದ ಕಾರ‍್ಯಕರ್ತರ ಜೊತೆ ಆರ್ಯಾಪು ಮತ್ತು ಕುರಿಯ ಗ್ರಾಮದ ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದ ಬಳಿಕ ಸುದ್ದಿಯೊಂದಿಗೆ ಮಾತನಾಡಿ ಪುತ್ತೂರಿನ 220 ಬೂತ್‌ಗಳಲ್ಲಿಯೂ ಪಕ್ಷದ ಕಾರ‍್ಯಕರ್ತರು ಗಟ್ಟಿಯಾಗಿದ್ದಾರೆ.

ಮತದಾರರು ಈ ಬಾರಿ ಹೆಚ್ಚಿನ ಉತ್ಸಾಹದಿಂದ ಬಿಜೆಪಿ ಬೆಂಬಲ ಮಾಡಲಿದ್ದಾರೆ. ಕರಾವಳಿ ಕರ್ನಾಟಕದ 20 ಸ್ಥಾನಗಳಲ್ಲಿ ಬಿಜೆಪಿ 19 ಸ್ಥಾನವನ್ನು ಪಡೆಯುವ ಮೂಲಕ ಬಿಜೆಪಿಯ ಭದ್ರಕೋಟೆಯಾಗಲಿದೆ ಎಂದು ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು.

LEAVE A REPLY

Please enter your comment!
Please enter your name here