ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 20ನೇ ಬಾರಿ ಶೇಕಡಾ 100 ಫಲಿತಾಂಶ

0

ತ್ತಮ್ ಜಿ 623 ಅಂಕಗಳಿಸುವ ಮೂಲಕ ರಾಜ್ಯಕ್ಕೆ ತೃತೀಯ ಸ್ಥಾನ

ಕಾಣಿಯೂರು: ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದಲ್ಲಿ 20ನೇ ಬಾರಿ ಶೇಕಡಾ 100 ಫಲಿತಾಂಶ ಪಡೆದುಕೊಂಡಿದೆ. ವಿದ್ಯಾರ್ಥಿ ಉತ್ತಮ್ ಜಿ ಅವರು 625ರಲ್ಲಿ 623 ಅಂಕಗಳನ್ನು ಪಡೆದುಕೊಂಡಿದ್ದು, ಇವರು ಕನ್ನಡದಲ್ಲಿ 125 ಇಂಗ್ಲಿಷ್ 100 ತುಳು 100 ಗಣಿತ 100 ವಿಜ್ಞಾನ 100 ಸಮಾಜ ವಿಜ್ಞಾನ 98 ಅಂಕಗಳನ್ನು ಪಡೆದುಕೊಂಡಿದ್ದು ಇವರು ಕಾಣಿಯೂರು ಗ್ರಾಮದ ಗುಂಡಿಗದ್ದೆ ಪದ್ಮನಾಭ ಗೌಡ ಮತ್ತು ಹೇಮಾವತಿ ದಂಪತಿಗಳ ಪುತ್ರ.
ಶ್ರಾವ್ಯ ಕೆ.ಎಚ್ 608 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದು ಇವರು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಹುದೇರಿ ಕುಶಾಲಪ್ಪ ಗೌಡ ಮತ್ತು ಸುಜಿತ ಕೆ ದಂಪತಿಗಳ ಪುತ್ರಿ. ಆಝ್ಮಿಯತ್ ಸಫಾ 605 ಅಂಕ ಪಡೆದುಕೊಂಡಿದ್ದು,ತೃತೀಯ ಸ್ಥಾನ ಇವರು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಸಮಹಾದಿ ಪಿ ಎಂ ಮಹಮ್ಮದ್ ಹನೀಫ್ ಮತ್ತು ಎಂ ಕೆ ಜಮೀಲಾ ದಂಪತಿಗಳ ಪುತ್ರಿ. ಆಂಗ್ಲ ಮಾಧ್ಯಮ ವಿಭಾಗದ ಒಟ್ಟು 59 ವಿದ್ಯಾರ್ಥಿಗಳಲ್ಲಿ ಒಟ್ಟು 50 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು 500ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ದಾಖಲೆ ನಿರ್ಮಿಸಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.


ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಾಲಾಡಳಿತ ಸಮಿತಿ ಅಧ್ಯಕ್ಷರಾದ ಜಗನ್ನಾಥ ರೈ ನುಳಿಯಾಲು, ಶಾಲಾ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, ಶಾಲಾಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಶಾಲಾ ಮುಖ್ಯಗುರು ಸರಸ್ವತಿ ಎಂ ಮತ್ತು ಎಲ್ಲಾ ಶಿಕ್ಷಕವೃಂದ ದದವರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದರು.

ಪ್ರಗತಿ ಕನ್ನಡ ಮಾಧ್ಯಮ ವಿಭಾಗದಲ್ಲಿಯೂ ಅತ್ಯುತ್ತಮ ಸಾಧನೆ
ಪ್ರಗತಿ ವಿದ್ಯಾಸಂಸ್ಥೆಯ ಕನ್ನಡ ಮಾಧ್ಯಮ ವಿಭಾಗದಲ್ಲಿ

ಸ್ವಸ್ತಿಕಾ ರೈ ಪಿ ಆರ್ 616 ಅಂಕಗಳೊಂದಿಗೆ ಸಂಸ್ಥೆಗೆ ಪ್ರಥಮ ಸ್ಥಾನ. ಇವರ ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಪಿಜಕ್ಕಳ ರಘುರಾಮ ರೈ ಮತ್ತು ರತಿ ರೈ ದಂಪತಿಗಳ ಪುತ್ರಿ. ಆಯಿಷತ್ ಯುಸ್ರಾ 560 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಇವರು ಕಡಬ ತಾಲೂಕಿನ ಬೆಳಂದೂರು ಗ್ರಾಮದ ಕೂಂಕ್ಯ ಉಮ್ಮರ್ ಮತ್ತು ರುಕ್ಯ ದಂಪತಿಗಳ ಪುತ್ರಿ. ಧನುಶ್ರೀ ರೈ 542 ಅಂಕಗಳೊಂದಿಗೆ ತೃತೀಯ ಸ್ಥಾನ ಇವರು ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ವಸಂತ ರೈ ಮತ್ತು ಸುಮಿತ್ರ ದಂಪತಿಗಳ ಪುತ್ರಿ. ಒಟ್ಟು 20 ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ

LEAVE A REPLY

Please enter your comment!
Please enter your name here