ಸವಣೂರಿನಲ್ಲಿ ಕ್ಲಬ್ ಜ್ಹೋನ್ ಮಲ್ಟಿ ಜಿಮ್ ಉದ್ಘಾಟನೆ

0

ಉತ್ತಮ ಆರೋಗ್ಯ ಪಡೆಯಲು ಜಿಮ್ ಅಗತ್ಯ- ಸೀತಾರಾಮ ರೈ


ಪುತ್ತೂರು: ಸವಣೂರಿನ ಸಿಂಧೂರ ಕಾಂಪ್ಲೆಕ್ಸ್‌ನ, ಆದರ್ಶ ವಿವಿದೋದ್ದೇಶ ಬ್ಯಾಂಕ್ ಹತ್ತಿರ “ಕ್ಲಬ್ ಜ್ಹೋನ್ ಮಲ್ಟಿ ಜಿಮ್” ಇದರ ಉದ್ಘಾಟನೆಯು ಮೇ.5 ರಂದು ಜರಗಿತು.

ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ಸಂಸ್ಥೆಯನ್ನು ಉದ್ಘಾಟನೆಗೈದು ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ಸವಣೂರಿಗೆ ಹೊಸ ಹೊಸ ರೀತಿಯ ಸೌಕರ್ಯಗಳು ಬೇಕು. ಇದೀಗ ಜಿಮ್ ಆರಂಭವಾಗಿರುವುದು ತುಂಬಾ ಸಂತೋಷ ತಂದಿದೆ. ಜಿಮ್‌ನ ಪ್ರಯೋಜನ ಪಡೆದಲ್ಲಿ ಉತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯವಾಗಿದ್ದು, ಸವಣೂರು ಸುತ್ತಮತ್ತಲಿನ ಯುವಕರು ಇದರ ಪ್ರಯೋಜನವನ್ನು ಪಡೆದು ಸಂಸ್ಥೆಯ ಅಭಿವೃದ್ಧಿಗೆ ಸಹಕಾರವನ್ನು ನೀಡಬೇಕೆಂದು ಶುಭಹಾರೈಸಿದರು.
ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದುರವರು ದೀಪ ಪ್ರಜ್ವಲನೆಗೈದು ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಸವಣೂರು ಗ್ರಾ.ಪಂ. ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯ, ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಸವಣೂರು ಸಿ.ಎ, ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ.ಸವಣೂರು, ಕಲ್ಲಾರೆಯ ನಡುವಾಳ್ ಬ್ಯುಸಿನೆಸ್ ಸೊಲ್ಯೂಷನ್‌ನ ಭರತ್ ನಡುವಾಳ್, ಸವಣೂರು ಯುವಕ ಮಂಡಲದ ಅಧ್ಯಕ್ಷ ಜೀತಕ್ಷಾ ಜಿ ರವರುಗಳು ಉಪಸ್ಥಿತರಿದ್ದರು. ಅರ್ಚಕ ಗಣೇಶ್ ನಿಡ್ವಣ್ಣಾಯ ತಿಂಗಳಾಡಿ, ನಾರಾಯಣ, ಶ್ಯಾಮಲ, ಶ್ರೀಶಾನ್ ಸಹಿತ ಅನೇಕ ಮಂದಿ ಭಾಗವಹಿಸಿದರು. ಜಿಮ್ ಸಂಸ್ಥೆಯ ಮಾಲಕ ಶಶಿಧರನ್ ಸವಣೂರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here