ಉಪ್ಪಿನಂಗಡಿ ಇಂಡಿಯನ್ ಸ್ಕೂಲ್‌ಗೆ ಶೇ.100 ಫಲಿತಾಂಶ

0

ಉಪ್ಪಿನಂಗಡಿ: ೨೦೨೨-೨೦೨೩ ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆ ಬರೆದ ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್‌ನ ಎಲ್ಲಾ ೪೧ ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶಾಲೆಗೆ ಶೇ.೧೦೦ ಫಲಿತಾಂಶ ಲಭಿಸಿರುತ್ತದೆ.

ಇವರಲ್ಲಿ ೧೦ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, ೩೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ.
ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದವರು: ಫಾತಿಮತ್ ಅಕ್ಸ (೫೮೨) ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದು, ಫಾತಿಮ ಜುಬೈರಾ (೫೭೫) ದ್ವಿತೀಯ ಹಾಗೂ ಫಾತಿಮತ್ ಅಫೀಫ (೫೬೧) ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಹಲೀಮ ಮುಫ್ತುನ್ (೫೫೨), ನಿಶ್ಮಾ ಪಾತೀಮ ಹಕೀಮ್ (೫೫೧), ಮೊಹಮ್ಮದ್ ತನೂಫ (೫೪೧), ಫಾತಿಮತ್ ಅಫೀಝ (೫೩೯), ಆಯಿಷತ್ ಸಫಾನ (೫೩೫), ಫಾತಿಮ ಸಹಲಾ (೫೩೦), ಫಾತಿಮತ್ ಕಾಶಿಫ (೫೩೦) ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

LEAVE A REPLY

Please enter your comment!
Please enter your name here