ಮಹಾಲಿಂಗೇಶ್ವರ ದೇವಳದ ಕಾಮಧೇನು ಗೋಶಾಲೆಯಲ್ಲಿ ಗೋವುಗಳ ಗಂಜಲ ಲಭ್ಯ

0

ಪುತ್ತೂರು: ಇತಿಹಾಸ ಪ್ರಸಿದ್ದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿರುವ ಕಾಮಧೇನು ಗೋಶಾಲೆಯಲ್ಲಿ ಗೋವುಗಳ ಗಂಜಲ(ಸ್ಲೆರಿ) ಸಂಗ್ರಹವಾಗಿದ್ದು, ತೆಂಗು, ಅಡಿಕೆ, ಕೃಷಿಗಳಿಗೆ ಉತ್ತಮ ಸಾವಯ ಗೊಬ್ಬರವಾಗಿ ಬಳಸಲಾಗುತ್ತಿದ್ದು, ಅವಶ್ಯಕತೆ ಇದ್ದವರಿಗೆ ಗಂಜಲ ಲಭ್ಯವಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ಸಂಗ್ರಹವಾದ ಸ್ಲೆರಿಯನ್ನು ಟ್ಯಾಂಕರ್ ಮೂಲಕ ನೇರವಾಗಿ ಸರಬರಾಜು ಮಾಡಲಾಗುವುದು. ಟ್ಯಾಂಕರ್ ನಲ್ಲಿ 8 ಸಾವಿರ ಲೀಟರ್ ಗಂಜಲ ಹಿಡಿಯುತ್ತಿದ್ದು, ಬಾಡಿಗೆ ಸಹಿತ ಒಟ್ಟು ಮೌಲ್ಯ ರೂ 9,000 ಆಗಿರುತ್ತದೆ. ಅಪೇಕ್ಷಿತರು ದೇವಸ್ಥಾನ ಅಥವಾ ಮೊಬೈಲ್ ಸಂಖ್ಯೆ 9449030872 ಅನ್ನು ಸಂಪರ್ಕಿಸಬಹುದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here