ಎಸ್‌ಎಸ್‌ಎಲ್‌ಸಿ: ರಾಮಕುಂಜ ಕ.ಮಾ.ಪ್ರೌಢಶಾಲೆಗೆ ಶೇ.96 ಫಲಿತಾಂಶ

0

ರಾಮಕುಂಜ: ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಶೇ.96 ತೇರ್ಗಡೆ ಫಲಿತಾಂಶ ಬಂದಿದೆ.

ಪ್ರೌಢಶಾಲೆಯಿಂದ ಪರೀಕ್ಷೆಗೆ ಹಾಜರಾದ 155 ವಿದ್ಯಾರ್ಥಿಗಳ ಪೈಕಿ, 148 ವಿದ್ಯಾರ್ಥಿಗಳು ತೇರ್ಗಡೆಗೊಂಡು, ಶೇ.96 ಫಲಿತಾಂಶ ಬಂದಿದೆ. 24 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ(ಡಿಸ್ಟಿಂಕ್ಷನ್) ತೇರ್ಗಡೆ ಹೊಂದಿದ್ದಾರೆ. 84 ವಿದ್ಯಾರ್ಥಿಗಳು ಪ್ರಥಮ, 32 ವಿದ್ಯಾರ್ಥಿಗಳು ದ್ವಿತೀಯ ಹಾಗೂ 08 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಎಮ್.ಎಚ್.ಅನ್ವಿತ 600, ಮಧುಶ್ರೀ ಎ 590, ಮೋಕ್ಷಿತ್ 584, ಜೀವನ್ ವಿ.ಎಸ್. 575, ರಕ್ಷಿತ್‌ಕುಮಾರ್ 575, ಶ್ರೀರಕ್ಷಾ ಪಿ ಆರ್. 571, ದೀಪ್ತಿ ಬಿ.ಎಸ್. 569, ಸ್ವಿನಿ ಡಿ.ಸೋಜ 569, ಮನೀಶ ಕೆ 568, ಚಂದ್ರಕಾಂತ 565, ಉಜ್ವಲ್ ಎಮ್ 559, ಶ್ರೀನಿಧಿ ಪಿ 555, ಶಿಶಿರ್ ಪಿ 554, ರಶ್ಮಿ ಎ. 553, ಮೋಕ್ಷಿತ್ 551, ರುಬಿನಾ 551, ರಾಮಕೃಷ್ಣ ಭಟ್ 547, ನಿತಿನ್ 546, ಪವಿತ್ರ 546, ಅನುಶ್ರೀ 543, ಪೃಥ್ವಿ ಬಿ 540, ಕಿರಣ್ 539, ಮುರಳಿಕೃಷ್ಣ 526, ಹಂಶಿತ್ ಜಿ 535 ಅಂಕ ಪಡೆದುಕೊಂಡು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ. ಶಾಲೆಗೆ ಪರೀಕ್ಷಾ ಮಂಡಳಿಯಿಂದ ಎ ಗ್ರೇಡ್ ಮಾನ್ಯತೆ ದೊರೆತಿದೆ.

LEAVE A REPLY

Please enter your comment!
Please enter your name here