ಪುತ್ತೂರು: ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ಮಹಾಸಭೆ ಜಿಡೆಕಲ್ಲು ಶಾಲಾ ವಠಾರದಲ್ಲಿ ನಡೆಯಿತು. ಸಮಿತಿ ಸದಸ್ಯ ಗಣೇಶ್ ಆಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಳೆದ 17 ವರ್ಷಗಳಲ್ಲಿ ಅನೇಕ ಜನಪರವಾದ ಕಾರ್ಯಚಟುವಟಿಕೆಗಳನ್ನು ಸಂಸ್ಥೆ ಮೂಲಕ ನಡೆಸಲಾಗಿದೆ. ಭ್ರಷ್ಟಾಚಾರದ ವಿರುದ್ದ ನಿರಂತರ ಹೋರಾಟಗಳನ್ನು ಮುಂದುವರೆಸಲು ಎಲ್ಲಾ ಸದಸ್ಯರ ಪೂರ್ಣ ಸಹಕಾರ ಅವಶ್ಯಕತೆ ಇದೆ ಎಂದರು.
ಪದ್ಮನಾಭ ಪ್ರಭು ವಾರ್ಷಿಕ ವರದಿ ವಾಚಿಸಿದರು. ಲಗೋರಿ ಸೆರಾವೊ ಖರ್ಚುವೆಚ್ಚ ಮಂಡಿಸಿದರು. ಮುಂದಿನ ವರ್ಷದ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸದಸ್ಯರಾದ ಉಮೇಶ್ ಪೂಜಾರಿ, ಸಂತೋಷ್ ಆಚಾರ್ಯ, ದೇವದಾಸ್, ಜಯರಾಮ ಪೂಜಾರಿ, ರಘುನಾಥ ರೈ, ಸುರೇಂದ್ರ ಪೂಜಾರಿ, ಸಂಜೀವ ರೈ ಮತ್ತು ಇತರರು ಭಾಗವಹಿಸಿದರು. ಸಂಪತ್ ಕುಮಾರ್ ಜೈನ್ ಸ್ವಾಗತಿಸಿ ರಮೇಶ್ ಕೆಮ್ಮಾಯಿ ವಂದಿಸಿದರು.