ಮತಗಟ್ಟೆ ಸಿಬ್ಬಂದಿಗಳ ಎಡವಟ್ಟು! ಒಬ್ಬರ ಮತ ಇನ್ನೊಬ್ಬರಿಂದ ಚಲಾವಣೆ- ಮತದಾನದಿಂದ ವಂಚಿತರಾದ ಸಾದಿಕ್

0

ಪುತ್ತೂರು: 102 ನೆಕ್ಕಿಲಾಡಿ ಗ್ರಾಮದ ಕರ್ಮಾಯಿ 101 ಮತಗಟ್ಟೆಯಲ್ಲಿ ಮತಗಟ್ಟೆ ಸಿಬ್ಬಂದಿಗಳ ಎಡವಟ್ಟಿನಿಂದ ಒಬ್ಬರ ಮತವನ್ನು ಇನ್ನೊಬ್ಬರು ಚಲಾಯಿಸಿದ್ದು, ಇದರಿಂದ ಸಾದಿಕ್ ಎಂಬವರು ಮತದಾನದಿಂದ ವಂಚಿತರಾಗಿರುವ ಘಟನೆ 102ನೇ ನೆಕ್ಕಿಲಾಡಿ ಗ್ರಾಮದ ಕರ್ಮಾಯಿ 101 ಮತಗಟ್ಟೆಯಲ್ಲಿ ನಡೆದಿದೆ.


ಸಾದಿಕ್ s/o ಅಬೂಬಕ್ಕರ್ ಎಂಬವರು ಮತದಾನದಿಂದ ವಂಚಿತರಾದವರು. ಇವರ ಮತವನ್ನು ಸಾದಿಕ್.ಕೆ ಎಂಬವರು ಹಾಕಿ ಹೋಗಿದ್ದು ಸಾದಿಕ್ ಅವರು ಮತಗಟ್ಟೆಗೆ ಬಂದಾಗ ಅಧಿಕಾರಿಗಳು ಅವರಿಗೆ ಮತಚಲಾವಣೆಗೆ ನಿರಾಕರಿಸಿದ್ದಾರೆ. ಮತದಾರನನ್ನು ಸರಿಯಾಗಿ ಪರಿಶೀಲಿಸಿ ಮತ ಚಲಾವಣೆ ಮಾಡಿಸಬೇಕಾದ ಅಧಿಕಾರಿಗಳ ಬೇಜಾಬ್ದಾರಿಯಿಂದ ಸಾದಿಕ್ ಅವರು ಮತದಾನದಿಂದ ವಂಚಿತರಾಗಿದ್ದು, ಅವರು ಬೇಸರ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here