ಹೊಟೇಲ್ ವ್ಯವಹಾರಕ್ಕೂ ಅಪಸ್ವರ!

0


ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಅಂಡೆತಡ್ಕದ ಮತದಾನ ಕೇಂದ್ರದ ಬಳಿ ಕ್ಯಾಂಟೀನ್ ಒಂದಿದ್ದು, ಅಲ್ಲಿನ ವ್ಯವಹಾರಕ್ಕೆ ಎಚ್ಚರಿಕೆ ನೀಡಿದ ಘಟನೆ ಮತದಾನದ ಸಂದರ್ಭ ನಡೆಯಿತು.
ಮತದಾನ ಮಾಡಿದ ಹಲವರು ಈ ಕ್ಯಾಂಟೀನ್‌ಗೆ ಬಂದು ಚಾ ಕುಡಿಯುತ್ತಿದ್ದರು. ಇದನ್ನು ಕಂಡ ಮತದಾನ ಕೇಂದ್ರದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಹೊಟೇಲ್‌ಗೆ ಬಂದು ಇಲ್ಲಿ ಗುಂಪುಗೂಡಲು ಅವಕಾಶ ಕೊಡಬೇಡಿ ಎಂದರು. ಆಗ ಅಲ್ಲಿದ್ದವರು ನಾವು ನಮ್ಮ ಹಣದಲ್ಲಿ ಚಾ ಕುಡಿಯುವುದು ಅದಕ್ಕೇನು ತೊಂದರೆ ಎಂದರು. ಸ್ವಲ್ಪ ಹೊತ್ತು ಅಲ್ಲಿ ಆ ಕಡೆ ಈಕಡೆ ಮಾತುಗಳಾಗಿ ಮತ್ತೆ ಅದು ಬಗೆಹರಿಯಿತು.. ಭದ್ರತಾ ಸಿಬ್ಬಂದಿ ಹಿಂದಿ ಭಾಷಿಕರಾಗಿದ್ದು, ಭಾಷಾ ಸಂವಹನ ಸಮಸ್ಯೆಯೂ ಅಲ್ಲಿ ಸಲ್ಪಮಟ್ಟಿಗೆ ಕಾಡಿತು

LEAVE A REPLY

Please enter your comment!
Please enter your name here