





ಪುತ್ತೂರು: ಕೆದಂಬಾಡಿ ಗ್ರಾಮದ ಕುರಿಕ್ಕಾರ ಕುಟುಂಬದ ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ, ನಾಗ ದೇವರ ವಾರ್ಷಿಕ ತಂಬಿಲ ಸೇವೆ ಹಾಗೂ ಶ್ರೀ ದೈವಗಳ ತಂಬಿಲ ಸೇವೆಗಳು ಮೇ 23, ಮಂಗಳವಾರದಂದು ಬೆಳಿಗ್ಗೆಯಿಂದ ರಾತ್ರಿ ತನಕ ನಡೆಯಲಿದೆ.


ಆದ್ದರಿಂದ ಕುಟುಂಬಸ್ಥರು ಸಮಯಕ್ಕೆ ಮುಂಚಿತವಾಗಿ ಹಾಜರಿದ್ದು, ಎಲ್ಲಾ ದೈವೀಕ ಕಾರ್ಯಗಳಲ್ಲಿ ಭಾಗವಹಿಸಬೇಕೆಂದು ಕುರಿಕ್ಕಾರ ಕುಟುಂಬದ ಯಜಮಾನ ವಿಶ್ವನಾಥ ರೈ ಕುಯ್ಯಾರು ಹಾಗೂ ಕುರಿಕ್ಕಾರ ತರವಾಡು ಕುಟುಂಬ ಸಮಿತಿ ಅಧ್ಯಕ್ಷ ಆನಂದ ರೈ ಪುಂಡಿಕಾಯಿ ಮತ್ತು ಕುಟುಂಬದ ಸರ್ವಸದಸ್ಯರುಗಳು ತಿಳಿಸಿದ್ದಾರೆ.







 
            