ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಶೇ.100 ಫಲಿತಾಂಶ

0

ಪುತ್ತೂರು: ಭಾರತ ಸರ್ಕಾರದಿಂದ ಪ್ರವರ್ತಿತ ರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ ಭಾರತ್ ಸೇವಕ್ ಸಮಾಜದ ಅಂಗೀಕೃತ ಸಂಸ್ಥೆ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ 2022-23ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ (ಡಿಮ್‌ಇಡಿ) ಫಲಿತಾಂಶ ಪ್ರಕಟಗೊಂಡಿದ್ದು 6ನೇ ಬ್ಯಾಚ್‌ನ ಎಲ್ಲಾ 24 ವಿದ್ಯಾರ್ಥಿ ಶಿಕ್ಷಕಿಯರು ಉತ್ತೀರ್ಣರಾಗುವ ಮೂಲಕ ಸತತ 6ನೇ ಬಾರಿಗೆ ಶೇ.100 ಫಲಿತಾಂಶ ದಾಖಲಾಗಿದೆ. 17 ಮಂದಿ ವಿದ್ಯಾರ್ಥಿ ಶಿಕ್ಷಕಿಯರು ವಿಶಿಷ್ಟ ಶ್ರೇಣಿಯಲ್ಲಿ, 6 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

2022-23ನೇ ಸಾಲಿನಲ್ಲಿ ಸಂಸ್ಥೆಯಿಂದ ಒಟ್ಟು 24 ವಿದ್ಯಾರ್ಥಿ ಶಿಕ್ಷಕಿಯರು ಮೊಂಟೆಸ್ಸರಿ ಶಾಲಾ ಶಿಕ್ಷಕಿಯರ ತರಬೇತಿಯ ಪರೀಕ್ಷೆ ಬರೆದಿದ್ದರು. ಇಸನಾ(1088), ಮೈಮುನ ಹೆಚ್.(1079), ಸ್ಮಿತಾ ಕೆ.(1069), ಫಾತಿಮತ್ ಅಫ್ರಿನಾ ಡಿ.ಹೆಚ್. (1066), ಹಬೀಬ ಎಂ.ಎಂ.(1060), ಭೂಮಿಕಾ ಕೆ.ಎಂ.(1040), ಆಯಿಷತುಲ್ ನೆಸಿಯಾ(1037), ಮೇಘನಾ ಯು.ಜಿ (1031), ಪೂರ್ಣಿಮಾ ಎಸ್. (1013), ಆಯಿಷತುಲ್ ಸುನೈನಾ ಕೆ.(1011), ಯಶಸ್ವಿನಿ ಎ.(1007), ಪ್ರಮೀಳಾ ಕೆ.(1007), ಖತೀಜತುಲ್ ಫರ್ಝಾನ (989), ಧನ್ಯಶ್ರಿ (975), ಯಕ್ಷಿತಾ (965), ರಾಹಿಲಾ(966), ಸುಚೇತಾ ಡಿ.ಎಂ(963) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ತೇಜೇಶ್ವರಿ ಎನ್, ಉಷಾ ಎ.ಕೆ., ಸಾಕಿರ ಎ., ಮಂಜುಳಾ ಎಂ, ರಮ್ಯ ಕೆ., ಚಂದ್ರಕಲಾ ಪಿ, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಂಸ್ಥೆಯಲ್ಲಿ 2023-24ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಪ್ರವೇಶಾತಿ ಆರಂಭಗೊಂಡಿದ್ದು, ಆಸಕ್ತರು ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದೆಂದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here