25-30 ಸಾವಿರ ಮತಗಳ ಅಂತರದಲ್ಲಿ ಜಯಭೇರಿಯ ವಿಶ್ವಾಸವಿದೆ, ಫಲಿತಾಂಶದ ಸಂದರ್ಭದಲ್ಲಿ ಇತರರಿಗೆ ನೋವಾಗದಂತೆ ವರ್ತಿಸಿ- ಕಾರ್ಯಕರ್ತರಿಗೆ ಅಶೋಕ್ ರೈ ಮನವಿ

0

ಪುತ್ತೂರು: ವಿಧಾನಸಭಾ ಚುನಾವಣೆ ನಡೆದಿದ್ದು, ಮತದಾರ ನಮಗೆ ಆಶೀರ್ವಾದ ಮಾಡಿದ್ದಾನೆ ಎನ್ನುವ ನಂಬಿಕೆಯಿದೆ. 25ರಿಂದ 30 ಸಾವಿರ ಮತಗಳ ಅಂತರದಲ್ಲಿ ನಾವು ಜಯಭೇರಿ ಬಾರಿಸುತ್ತೇವೆ ಎನ್ನುವ ವಿಶ್ವಾಸವಿದೆ. ಫಲಿತಾಂಶ ಬಂದ ಸಂದರ್ಭದಲ್ಲಿ ಕಾರ್ಯಕರ್ತರು ಬೇರೊಬ್ಬರ ಕಾಂಪೌಂಡ್ ಬಳಿ ಹೋಗಿ ಪಟಾಕಿ ಒಡೆಯುವುದು, ಇನ್ನೊಬ್ಬರಿಗೆ ನೋವಾಗುವಂತೆ ವರ್ತಿಸಬಾರದು ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಮೇ 11ರಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅಶೋಕ್ ಕುಮಾರ್ ರೈಯವರು, ಕಾರ್ಯಕರ್ತರು ಬೇರೊಬ್ಬರ ಕಾಂಪೌಂಡ್ ಬಳಿ ಹೋಗಿ ಪಟಾಕಿ ಒಡೆಯುವುದು, ಇನ್ನೊಂದು ಪಕ್ಷದ ಕಾರ್ಯಕರ್ತರಿಗೆ ನೋವಾಗುವಂತೆ ವರ್ತಿಸಬಾರದು. ಹೆಚ್ಚು ಪಟಾಕಿ ಒಡೆದು ಹಣ ಖರ್ಚು ಮಾಡಬೇಡಿ, ಅದನ್ನು ಬಡವರಿಗೆ ಕೊಡಿ. ಜನರು ಆಶೀರ್ವಾದ ಮಾಡಿದ್ದಾರೆ. ಯಾವ ಕೆಲಸದ ಮೂಲಕ ಮತದಾರರ ಋಣವನ್ನು ತೀರಿಸಬೇಕೋ ಆ ಕೆಲಸವನ್ನು ಮಾಡೋಣ ಎಂದು ಹೇಳಿದರು.

ರಾಜಕೀಯದಲ್ಲಿ ಜಯಗಳಿಸುವುದು ಒಂದು ಚಕ್ರ. ಒಂದು ಪಕ್ಷದ ಕಾರ್ಯಕರ್ತರು ಇನ್ನೊಂದು ಪಕ್ಷದ ಕಾರ್ಯಕರ್ತರ ಮನೆ ಕಾಂಪೌಂಡ್ ಎದುರು ಪಟಾಕಿ ಒಡೆಯುವುದನ್ನು ಹಿಂದೆ ನಾನು ನೋಡಿದ್ದೇನೆ. ಯಾರಿಗೂ ನೋವಾಗಬಾರದು ಎನ್ನುವುದು ನಮ್ಮ ವಿಚಾರ. ವಿಜಯೋತ್ಸವ ಮಾಡಬೇಕೆನ್ನುವ ಕಾರ್ಯಕರ್ತರ ಆಸೆ ಸಹಜ. ಆದರೆ ಅದನ್ನು ಸರಳವಾಗಿ ಮಾಡಬೇಕು. ಅದಕ್ಕಾಗಿ ಹೆಚ್ಚು ಹೆಚ್ಚು ಖರ್ಚು ಮಾಡುವುದು ಸರಿಯಲ್ಲ. ನನಗೆ ಒಂದು ಶಾಲ್ ಹಾಕಿದರೆ ಸಾಕು, ಬಾಕಿ ಖರ್ಚನ್ನು ಬಡವರಿಗೆ ನೀಡಿ, ಅದರಲ್ಲಿ ನನಗೆ ಸಮಾಧಾನವಿದೆ. ಅಂತಹ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಅಶೋಕ್ ರೈ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here