ಝೀ ಕನ್ನಡ ಛೋಟಾ ಚಾಂಪಿಯನ್‌ನಲ್ಲಿ ನರಿಮೊಗರಿನ ಶಿವಾಂಶ್ ಕಾಮತ್: ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಪುಟಾಣಿ

0

ಪುತ್ತೂರು : ಝೀ ಕನ್ನಡ ಟಿ.ವಿ‌ ಚಾನೆಲ್ ನಲ್ಲಿ ಪ್ರಸಾರವಾಗುವ ಮಕ್ಕಳ ಗೇಮ್ ಶೋ ಛೋಟಾ ಚಾಂಪಿಯನ್‌ನಲ್ಲಿ ಗಾಯಕಿ ನರಿಮೊಗರಿನ ಗುರುಪ್ರಿಯ ನಾಯಕ್ ಹಾಗೂ ಶಿವಾನಂದ ಕಾಮತ್ ಅವರ ಪುತ್ರ ಶಿವಾಂಶ್ ಕಾಮತ್ ಆಯ್ಕೆಯಾಗಿದ್ದು, ದಿ‌.13-05-2023 ರ ಶನಿವಾರ ಮತ್ತು ಭಾನುವಾರದಂದು ಸಾಯಂಕಾಲ ಇವರ ಎಪಿಸೋಡ್ ಪ್ರಸಾರಗೊಳ್ಳಲಿದೆ. 

ಝೀ ಕನ್ನಡದ “ಭೂಮಿಗೆ ಬಂದ ಭಗವಂತ” ದಾರಾವಾಹಿಯ ಶಿವಪ್ರಸಾದ್, ಗಿರಿಜಾ, ಹಿರಿಯ ಕಲಾವಿದ ಉಮೇಶ್, ಸ್ಕಂದ ಇವರು ಅತಿಥಿಗಳಾಗಿ ಉಪಸ್ಥಿತರಿದ್ದರು.  ಕಾರ್ಯಕ್ರಮದ ನಿರೂಪಣೆ ಕುರಿ ಪ್ರತಾಪ್ ಮತ್ತು ಶ್ವೇತಾ ಚಂಗಪ್ಪ ನಡೆಸಿಕೊಟ್ಟಿದ್ದರು. ಮಂಗಳೂರಿನಲ್ಲಿ ನಡೆದ ಆಡಿಷನ್ ನಲ್ಲಿ ಆಯ್ಕೆಯಾಗಿ, ಬೆಂಗಳೂರಿನಲ್ಲಿ ನಡೆದ 3 ಸುತ್ತಿನ ಆಡಿಷನ್ ನ ನಂತರ ಆಯ್ಕೆಯಾಗಿ, ಇವತ್ತು  13-05-23 ರ ಸಾಯಂಕಾಲ 6 ಗಂಟೆಯಿಂದ  zee kannada Chota champion ನಲ್ಲಿ ಪ್ರಸಾರಗೊಳ್ಳಲಿದೆ.‌

ಮಂಗಳೂರು ಪಿಲಿ ಕುಣಿತದ ಮೂಲಕ ಶಿವಾಂಶ್ ವೇದಿಕೆಯಲ್ಲಿ ಅಮ್ಮನ ಜೊತೆ ಹೆಜ್ಜೆ ಹಾಕಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಪ್ರಸ್ತುತ ಬಂಟ್ವಾಳದ ಮೆಲ್ಕಾರ್ ನಲ್ಲಿ ಗುರುಪ್ರಿಯ ಮತ್ತು ಶಿವಾನಂದ ದಂಪತಿಗಳು ವಾಸವಾಗಿದ್ದು, ಶಿವಾಂಶ್ ಪುರುಷರಕಟ್ಟೆಯ ನಾಗೇಶ್ ನಾಯಕ್ ಮತ್ತು ವಿದ್ಯಾ ನಾಯಕ್ ದಂಪತಿಗಳ ಮೊಮ್ಮಗ.

LEAVE A REPLY

Please enter your comment!
Please enter your name here