ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಅಕ್ಷಯ ಕಾಲೇಜಿಗೆ ಹಲವು ಪ್ರಶಸ್ತಿ

0

ಪುತ್ತೂರು: ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜು ಇತ್ತೀಚೆಗೆ ನಡೆದ ಅಂತರ್
ಸ್ಪರ್ಧೆಗಳಲ್ಲಿ ವಿವಿಧ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.

ಶ್ರೀದೇವಿ ಇಂಜಿನಿಯರಿಂಗ್ ಕಾಲೇಜು ಕೆಂಜಾರಿನಲ್ಲಿ ನಡೆದ Echelon 23 ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮೆಹಂದಿ-ಪ್ರಥಮ ಸ್ಥಾನ, ದೇಹದಾರ್ಡ್ಯ-ಪ್ರಥಮ ಸ್ಥಾನ, ಮೈಮ್ ಶೋ- ಪ್ರಥಮ ಸ್ಥಾನ ಹಾಗೂ ಫ್ಯಾಶನ್ ಶೋ ದ್ವಿತೀಯ ಸ್ಥಾನವನ್ನು ಗಳಿಸಿಕೊಂಡಿದೆ.

ಅದೇ ರೀತಿ ಮಿಲಾಗ್ರಿಸ್ ಕಾಲೇಜು ಮಂಗಳೂರಿನಲ್ಲಿ ನಡೆದ Excelso 2k23 ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿ-ಪ್ರಥಮ ಸ್ಥಾನ, ಆರ್ಟ್ ಔಟ್ ಆಫ್ ವೇಸ್ಟ್-ಪ್ರಥಮ ಸ್ಥಾನ ಲಭಿಸಿದೆ. ಹಾಗೆಯೇ ಇತ್ತೀಚಿಗೆ ಮಂಗಳೂರಿನ ಪುರಭವನದಲ್ಲಿ ನಡೆದ ಲಯನ್ಸ್ ಕನ್ನಡ ಕಲರವ ಅಂತರ್‌ ಕಾಲೇಜು ಸಾಂಸ್ಕೃತಿಕ ವೈವಿಧ್ಯ ಸ್ಪರ್ಧೆಯಲ್ಲಿ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯೊಡನೆ ರೂ.10000/- ನಗದು ಪುರಸ್ಕಾರವನ್ನು ತನ್ನದಾಗಿಸಿಕೊಂಡಿದೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here