ಪುತ್ತೂರು ಕ್ಷೇತ್ರದಲ್ಲಿ “ಕೈ”ಗೆ ಮತದಾರರ ಅಭಯ -ಅಶೋಕ್ ಕುಮಾರ್ ರೈಯವರಿಗೆ ವಿಜಯದ ಮಾಲೆ

0

ಮೊದಲ ಬಾರಿಗೆ ಪುತ್ತೂರು ಶಾಸಕರಾದ ರೈ
ಪಕ್ಷೇತರ ಅಭ್ಯರ್ಥಿ ವಿರುದ್ಧ 4149 ಮತಗಳ ಅಂತರದ ಗೆಲುವು
ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ದ್ವಿತೀಯ
ಬಿಜೆಪಿ ಮೂರನೇ ಸ್ಥಾನಕ್ಕೆ

ಪುತ್ತೂರು: ಮೇ 10ರಂದು ಕರ್ನಾಟಕ ವಿಧಾನಸಭೆಯ 224 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಿದ್ದಾಜಿದ್ದಿನೊಂದಿಗೆ ಹೈವೋಲ್ಟೇಜ್ ಕ್ಷೇತ್ರವಾಗಿ ರಾಜ್ಯದಲ್ಲೇ ಗಮನ ಸೆಳೆದಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರಿಗೆ ಮತದಾರರ ಅಭಯ ದೊರೆತಿದ್ದು ಪ್ರಥಮ ಬಾರಿಗೆ ಕ್ಷೇತ್ರದ ಶಾಸಕರಾಗಿ ಚುನಾಯಿತರಾಗಿದ್ದಾರೆ.ಬಿಜೆಪಿಯಿಂದ ಆಶಾ ತಿಮ್ಮಪ್ಪ ಗೌಡ ಸೇರಿದಂತೆ ಪುತ್ತೂರು ಕ್ಷೇತ್ರದಲ್ಲಿ 8 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು ಚುನಾವಣೆ ಎದುರಿಸಿದ್ದರೂ ಅಶೋಕ್ ಕುಮಾರ್ ರೈ ಮತ್ತು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ನಡುವೆ ಜಿದ್ದಾಜಿದ್ದಿ ನಡೆದಿತ್ತು.ಮತ ಎಣಿಕೆ ಆರಂಭದಿಂದಲೇ ರೈ ಮತ್ತು ಪುತ್ತಿಲ ಮಧ್ಯೆ ನೆಕ್ ಟು ನೆಕ್ -ಟ್ ಏರ್ಪಟ್ಟಿತ್ತು. ಅಶೋಕ್ ಕುಮಾರ್ ರೈಯವರಿಗೆ ವಿಜಯಲಕ್ಷ್ಮೀ ಒಲಿದಿದ್ದು 66607 ಮತಗಳನ್ನು ಪಡೆದುಕೊಂಡು ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ 4149 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿ ಪುತ್ತೂರು ಕ್ಷೇತ್ರದ ಶಾಸಕರಾಗಿ ಚುನಾಯಿತರಾಗಿದ್ದಾರೆ.


ಹಿಂದುತ್ವದ ಸಿದ್ಧಾಂತದ ಹೆಸರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪಽಸಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಪರಾಭವಗೊಂಡರೂ ದಾಖಲೆ ಮಾದರಿಯಲ್ಲಿ 62458 ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು 37558 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.ಉಳಿದಂತೆ ಜೆಡಿಎಸ್‌ನ ದಿವ್ಯಪ್ರಭಾ ಗೌಡ ಚಿಲ್ತಡ್ಕರವರು 684 ಮತಗಳನ್ನು ಪಡೆದುಕೊಂಡಿದ್ದಾರೆ.ಆಮ್ ಆದ್ಮಿಯ ಡಾ|ವಿಶು ಕುಮಾರ್ ಅವರು 650 ಮತಗಳನ್ನು ಪಡೆದುಕೊಂಡಿದ್ದಾರೆ.ಎಸ್‌ಡಿಪಿಐ ಅಭ್ಯರ್ಥಿ ಇಸ್ಮಾಯಿಲ್ ಶಾಫಿ ಬೆಳ್ಳಾರೆರವರು 2788 ಮತಗಳನ್ನು ಪಡೆದುಕೊಂಡಿದ್ದಾರೆ.ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಐವನ್ -ರಾವೋರವರು 529 ಮತಗಳನ್ನು ಹಾಗೂ ಇನ್ನೋರ್ವ ಪಕ್ಷೇತರ ಅಭ್ಯರ್ಥಿ ಸುಂದರ ಕೊಯಿಲ ಅವರು 622 ಮತಗಳನ್ನು ಪಡೆದುಕೊಂಡಿದ್ದಾರೆ.866 ಮತಗಳು ನೋಟಾಕ್ಕೆ ಚಲಾವಣೆಯಾಗಿವೆ.


ಮೊದಲ ಸುತ್ತಿನಲ್ಲೇ ಅಶೋಕ್ ರೈ ಮುನ್ನಡೆ 7-11 ಸುತ್ತಿನಲ್ಲಿ ಪುತ್ತಿಲ ಮುನ್ನಡೆ:
ಒಟ್ಟು 17 ಸುತ್ತುಗಳಲ್ಲಿ ಪುತ್ತೂರು ಕ್ಷೇತ್ರದ ಮತ ಎಣಿಕೆ ನಡೆದಿತ್ತು. ಕ್ಷಣ ಕ್ಷಣಕ್ಕೂ ಕುತೂಹಲ ಸೃಷ್ಠಿಸಿತ್ತು. ಮೊದಲ ಸುತ್ತಿನಿಂದ 6ನೇ ಸುತ್ತಿನ ತನಕ ಅಶೋಕ್ ಕುಮಾರ್ ರೈಯವರೇ ಮುನ್ನಡೆ ಸಾಽಸಿದ್ದರು.7ರಿಂದ 11ನೇ ಸುತ್ತಿನ ತನಕ ಅರುಣ್ ಕುಮಾರ್ ಪುತ್ತಿಲ ಅವರು ಅಶೋಕ್ ಕುಮಾರ್ ರೈಯವರನ್ನು ಹಿಂದಿಕ್ಕಿ ಮೇಲುಗೈ ಸಾಧಿಸಿದ್ದರು.


ಮೊದಲ ಸುತ್ತಿನಲ್ಲಿ 3996 ಮತಗಳನ್ನು ಪಡೆದ ಅಶೋಕ್ ಕುಮಾರ್ ರೈಯವರು ಅರುಣ್ ಕುಮಾರ್ ಪುತ್ತಿಲ ಅವರಿಗಿಂತ 1034 ಮತಗಳ ಮುನ್ನಡೆ ಸಾಽಸಿದ್ದರು.ಮುನ್ನಡೆ ಮುಂದುವರಿದು ಆರನೇ ಸುತ್ತಿನಲ್ಲಿ ಅಶೋಕ್ ಕುಮಾರ್ ರೈಯವರು 24592 ಮತಗಳನ್ನು ಪಡೆದುಕೊಂಡು ಅರುಣ್ ಕುಮಾರ್ ಪುತ್ತಿಲ ಅವರಿಗಿಂತ 1490 ಮತಗಳ ಮುನ್ನಡೆ ಸಾಧಿಸಿದ್ದರು.7ನೇ ಸುತ್ತಿನಲ್ಲಿ ಹಿನ್ನಡೆ ಪಡೆದುಕೊಂಡಿದ್ದ ಅಶೋಕ್ ಕುಮಾರ್ ರೈಯವರು 27421 ಮತಗಳನ್ನು ಪಡೆದುಕೊಂಡಿದ್ದರು.ಅರುಣ್ ಕುಮಾರ್ ಪುತ್ತಿಲ ಅವರು 27512 ಮತಗಳನ್ನು ಪಡೆದುಕೊಂಡು ಅಶೋಕ್ ಕುಮಾರ್ ರೈಯವರಿಗಿಂತ 91 ಮತಗಳ ಮುನ್ನಡೆ ಪಡೆದುಕೊಂಡಿದ್ದರು.11ನೇ ಸುತ್ತಿನ ತನಕವೂ ಪುತ್ತಿಲ ಅವರೇ ಮುನ್ನಡೆ ಪಡೆದುಕೊಂಡಿದ್ದರು.11ನೇ ಸುತ್ತಿನ ಅಂತ್ಯಕ್ಕೆ ಪುತ್ತಿಲ ಅವರಿಗೆ 43896 ಮತಗಳು ಲಭಿಸಿದ್ದು ಅಶೋಕ್ ಕುಮಾರ್ ರೈಯವರಿಗಿಂತ ಕೇವಲ 119 ಮತಗಳ ಮುನ್ನಡೆ ಪಡೆದುಕೊಂಡಿದ್ದರು.12ನೇ ಸುತ್ತಿನಿಂದ ಕೊನೆಯ ಸುತ್ತಿನ ತನಕವೂ ಅಶೋಕ್ ಕುಮಾರ್ ರೈಯವರೇ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ 4149 ಮತಗಳ ಅಂತರದಿಂದ ಗೆಲುವು ಸಾಧಿಸಿದರು.


ಆರಂಭದಿಂದಲೇ ಬಿಜೆಪಿಗೆ ಹಿನ್ನಡೆ:
ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಆಶಾ ತಿಮ್ಮಪ್ಪ ಗೌಡ ಅವರು ಮೊದಲ ಸುತ್ತಿನಿಂದಲೇ ಹಿನ್ನಡೆ ಅನುಭವಿಸಿದ್ದರು.ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಆಶಾ ತಿಮ್ಮಪ್ಪ ಗೌಡ ಅವರು 2392 ಮತಗಳನ್ನು ಪಡೆದುಕೊಂಡಿದ್ದರು.ಅರುಣ್ ಕುಮಾರ್ ಪುತ್ತಿಲ ಅವರು 2962 ಹಾಗೂ ಅಶೋಕ್ ಕುಮಾರ್ ರೈಯವರು 3996 ಮತಗಳನ್ನು ಪಡೆದುಕೊಂಡಿದ್ದರು.ಆಶಾ ತಿಮ್ಮಪ್ಪ ಅವರಿಗೆ ಒಂದು ಸುತ್ತಿನಲ್ಲಿಯೂ ಮುನ್ನಡೆ ಸಾಽಸಲು ಸಾಧ್ಯವಾಗಲಿಲ್ಲ.


ಬಿಜೆಪಿ 3ನೇ ಸ್ಥಾನಕ್ಕೆ ಇದೇ ಮೊದಲು:
1972ರ ನಂತರ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ 12 ಚುನಾವಣೆಗಳಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಇಳಿದದ್ದು ಇದೇ ಮೊದಲು.1972ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎ.ಶಂಕರ ಆಳ್ವ ಗೆಲುವು ಸಾಽಸಿದ್ದರೆ, ಭಾರತೀಯ ಜನಸಂಘದ ಅಭ್ಯರ್ಥಿ ಕೆ.ರಾಮ ಭಟ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು.1978, 1983ರಲ್ಲಿ ಬಿಜೆಪಿಯ ಕೆ.ರಾಮ ಭಟ್, 1994 ಮತ್ತು 1999ರಲ್ಲಿ ಬಿಜೆಪಿಯ ಡಿ.ವಿ.ಸದಾನಂದ ಗೌಡ, 2004ರಲ್ಲಿ ಬಿಜೆಪಿಯಿಂದ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, 2008ರಲ್ಲಿ ಬಿಜೆಪಿಯ ಮಲ್ಲಿಕಾಪ್ರಸಾದ್,2018ರಲ್ಲಿ ಬಿಜೆಪಿಯ ಸಂಜೀವ ಮಠಂದೂರು ಅವರು ಶಾಸಕರಾಗಿ ಚುನಾಯಿತರಾಗಿದ್ದರು.1985, 1989ರಲ್ಲಿ ಕಾಂಗ್ರೆಸ್‌ನ ವಿನಯ ಕುಮಾರ್ ಸೊರಕೆ, 2013ರಲ್ಲಿ ಕಾಂಗ್ರೆಸ್‌ನಿಂದ ಶಕುಂತಳಾ ಟಿ.ಶೆಟ್ಟಿಯವರು ಚುನಾಯಿತರಾಗಿದ್ದರು.ಬಿಜೆಪಿ ಸೋತಾಗಲೂ ಇಲ್ಲಿ ಎರಡನೇ ಸ್ಥಾನದಲ್ಲಿರುತ್ತಿತ್ತು.ಬಿಜೆಪಿ ಮತ್ತು ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪಕ್ಷ ಅವಕಾಶ ನೀಡದೇ ಇರುವುದರಿಂದ ಅವರ ಪಕ್ಷೇತರ ಸ್ಪರ್ಧೆಯಿಂದಾಗಿ ಇದೇ ಮೊದಲ ಬಾರಿ ಬಿಜೆಪಿ ಮೂರನೇ ಸ್ಥಾನಕ್ಕಿಳಿದಿದೆ.


ಅಶೋಕ್ ಕುಮಾರ್ ರೈ ಗೆಲುವು-ಕಾರ್ಯಕರ್ತರಿಂದ ವಿಜಯೋತ್ಸವ, ಸಂಭ್ರಮಾಚರಣೆ:
ಅಶೋಕ್ ಕುಮಾರ್ ರೈಯವರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಽಸಿದ ಸಂಭ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಕ್ಷೇತ್ರದ ವಿವಿಧೆಡೆ ಸಂಭ್ರಮಾಚರಿಸಿ ವಿಜಯೋತ್ಸವ ನಡೆಸಿದ್ದಾರೆ.

ಸೋತರೂ ಗೆದ್ದ ಪುತ್ತಿಲ..
ಪುತ್ತೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು ಅವಕಾಶ ವಂಚಿತರಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವಿಗೆ ತೀರಾ ಸನಿಹವಾದ ದಾಖಲೆ ಮತಗಳನ್ನು ಗಳಿಸುವ ಮೂಲಕ ಒಂದು ಹಂತದಲ್ಲಿ ಸೋತು ಗೆದ್ದಿದ್ದಾರೆ.


ಪುತ್ತಿಲ ಅವರಿಗೆ ಅವಕಾಶ ನೀಡದೇ ಇದ್ದ ಬಿಜೆಪಿಯವರ ತೀರ್ಮಾನದ ವಿರುದ್ಧ ಆಕ್ರೋಶಿತರಾಗಿದ್ದ ಪುತ್ತಿಲ ಅಭಿಮಾನಿಗಳು, ಬೆಂಬಲಿಗರು ಈ ಬಾರಿ ಬಿಜೆಪಿ ನಾಯಕರಿಗೆ ಬುದ್ಧಿ ಕಲಿಸಬೇಕು ಎಂದು ತೀರ್ಮಾನಿಸಿ ಪುತ್ತಿಲ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮಾಡಿದ್ದರು.ಪುತ್ತಿಲ ಅವರಿಗೆ ಭಾರೀ ಬೆಂಬಲವೂ ವ್ಯಕ್ತವಾಗಿತ್ತು.ಪರಿಣಾಮ ಪಕ್ಷೇತರ ಅಭ್ಯರ್ಥಿಯಾಗಿ ಸ್ಪಽಸಿ 62458 ದಾಖಲೆ ಮತಗಳನ್ನು ಗಳಿಸಿದ್ದು ಬಿಜೆಪಿ ಮೂರನೇ ಸ್ಥಾನಕ್ಕಿಳಿಯುವಂತೆ ಮಾಡುವ ಮೂಲಕ ಪುತ್ತಿಲ ಅವರು ಸೋತು ಗೆದ್ದಂತಾಗಿದೆ.

ಇಂದು ಕಾಂಗ್ರೆಸ್ ಶಾಸಕಾಂಗ ಸಭೆ
ರಾಜ್ಯದಲ್ಲಿ ಬಹುಮತ ಪಡೆದುಕೊಂಡಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮೇ 14ರಂದು ನಡೆಯಲಿದೆ.ಪುತ್ತೂರುನ ನೂತನ ಶಾಸಕ ಅಶೋಕ್ ಕುಮಾರ್ ರೈಯವರು ಈ ಸಭೆಯಲ್ಲಿ ಪಾಲ್ಗೊಳ್ಳಲೆಂದು ಬೆಂಗಳೂರು ತೆರಳಿದ್ದಾರೆ.

ಶೇಕಡಾವಾರು ಮತಗಳಿಕೆ
ಅಶೋಕ್ ಕುಮಾರ್ ರೈ-38.55.
ಅರುಣ್ ಕುಮಾರ್ ಪುತ್ತಿಲ-36.15
ಆಶಾ ತಿಮ್ಮಪ್ಪ-21.74
ದಿವ್ಯಪ್ರಭಾ ಗೌಡ-0.4
ಡಾ|ಬಿ.ಕೆ.ವಿಶು ಕುಮಾರ್-0.38
ಶಾಫಿ ಬೆಳ್ಳಾರೆ-1.61
ಐವನ್ -ರಾವೋ ಕೆ.-0.31
ಸುಂದರ ಕೊಯಿಲ-0.36
ನೋಟ-0.5

ಇಳಿಕೆಯಾದ ನೋಟಾ ಪ್ರಮಾಣ
ಈ ಬಾರಿಯ ಚುನಾವಣೆಯಲ್ಲಿ 10 ಅಂಚೆ ಮತಗಳು ಸೇರಿದಂತೆ ‘ನೋಟಾ’ಗೆ ಒಟ್ಟು 866 ಮತ ಚಲಾವಣೆಯಾಗಿದೆ.2018ರ ಚುನಾವಣೆಯಲ್ಲಿ 1227 ಮತಗಳು ನೋಟಾಗೆ ಚಲಾವಣೆಯಾಗಿದ್ದವು.

1972ರಿಂದ 2018ರ ತನಕ ಪುತ್ತೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮತ್ತು ಪಡೆದಿದ್ದ ಮತಗಳು

2018:
ಸಂಜೀವ ಮಠಂದೂರು(ಬಿಜೆಪಿ)-90073(54.17ಶೇ.)
ಶ್ರೀಮತಿ ಶಕುಂತಳಾ ಟಿ.ಶೆಟ್ಟಿ(ಕಾಂಗ್ರೆಸ್)-70596(ಶೇ.42.46)
ಐ.ಸಿ.ಕೈಲಾಸ್(ಜೆಡಿಎಸ್)-1424(0.86ಶೇ.)
ಅಬ್ದುಲ್ ಮಜೀದ್ ಕೋಲ್ಪೆ(ಜೆಡಿಯು)-527(0.32ಶೇ.)
ವಿದ್ಯಾಶ್ರೀ(ಪಕ್ಷೇತರ)-454(0.27ಶೇ.)
ಶಬಾನಾ ಎಸ್.ಶೇಖ್(ಎಐಎಂಇಪಿ)-425(0.26ಶೇ.)
ಬಿ.ಶೇಖರ ಮಾಡಾವು(ಪ್ರಜಾಪರಿವರ್ತನ್ ಪಾರ್ಟಿ)-404(0.24ಶೇ.)
ಚೇತನ್ ಕುಮಾರ್(ಪಕ್ಷೇತರ)-344(0.21ಶೇ.)
ಎಂ.ಶೇಷಪ್ಪ ರಾವ್(ಸಾಮಾನ್ಯ ಜನತಾಪಾರ್ಟಿ ಲೋಕ್ರಾಂತಿಕ್)-340(0.2ಶೇ.)
ಅಮರನಾಥ್ ಬಿ.ಕೆ.(ಪಕ್ಷೇತರ)-244(0.15ಶೇ.)
ಅಬ್ದುಲ್ ಬಶೀರ್ ಬೂಡಿಯಾರ್(ಪಕ್ಷೇತರ)-213(0.13ಶೇ.)
ನೋಟ-1227(0.74ಶೇ.)
ಒಟ್ಟು ಮತದಾರು-201948
ಚಲಾವಣೆಯಾಗಿದ್ದ ಮತಗಳು-166271(ಶೇ.82.33).

2013:
ಶ್ರೀಮತಿ ಶಕುಂತಳಾ ಟಿ.ಶೆಟ್ಟಿ(ಕಾಂಗ್ರೆಸ್)-66345(46.46ಶೇ.)
ಸಂಜೀವ ಮಠಂದೂರು(ಬಿಜೆಪಿ)-62056(43.45ಶೇ.)
ದಿನೇಶ್ ಬಿ.ಎನ್.(ಜೆಡಿಎಸ್)-6625(4.64ಶೇ.)
ಅಬೂಬಕ್ಕರ್ ಸಿದ್ಧೀಕ್(ಎಸ್‌ಡಿಪಿಐ)-4442(3.11ಶೇ.)
ಶೇಖರ್ ಮಾಡಾವು(ಪಕ್ಷೇತರ)-1834(1.28ಶೇ.)
ಜಯರಾಮ್ ಭಟ್ ಎ.ಮಾಡಾವು(ಕೆಜೆಪಿ)-1506(1.05ಶೇ)
ಒಟ್ಟು ಮತದಾರರು-1,79,600
ಚಲಾವಣೆಯಾಗಿದ್ದ ಮತಗಳು-142808(ಶೇ.79.51).


2008:
ಶ್ರೀಮತಿ ಮಲ್ಲಿಕಾಪ್ರಸಾದ್(ಬಿಜೆಪಿ)-46605(37.77ಶೇ.)
ಬೊಂಡಾಲ ಜಗನ್ನಾಥ ಶೆಟ್ಟಿ(ಕಾಂಗ್ರೆಸ್)-45180(36.61ಶೇ.)
ಅಕ್ಕ ಶಕುಂತಳಾ ಟಿ.ಶೆಟ್ಟಿ(ಪಕ್ಷೇತರ)-25171(20.4ಶೇ.)
ನಳಿನಿ ಲೋಕಪ್ಪ ಗೌಡ(ಪಕ್ಷೇತರ)-2721(2.2ಶೇ.)
ಅಬ್ದುಲ್ ಹಮೀದ್(ಬಿಎಸ್‌ಪಿ)-2553(2.07ಶೇ.)
ಪ್ರಸಾದ್ ಹೆಚ್.ಎಂ.(ಎಸ್‌ಪಿ)-1173(0.95ಶೇ.)
ಒಟ್ಟು ಮತದಾರರು-161183
ಚಲಾವಣೆಯಾಗಿದ್ದ ಮತಗಳು-123403(76.56).


2004:
ಶ್ರೀಮತಿ ಶಕುಂತಳಾ ಟಿ.ಶೆಟ್ಟಿ(ಬಿಜೆಪಿ)-65119
ಸುಧಾಕರ ಶೆಟ್ಟಿ ಎನ್.(ಕಾಂಗ್ರೆಸ್)-54007
ಲಕ್ಷ್ಮಣ ಗೌಡ(ಜೆಡಿಎಸ್)-6355
ಕಮಲಾಕ್ಷಿ ಮೋಹನ್(ಕನ್ನಡ ನಾಡು ಪಾರ್ಟಿ)-2571
ಒಟ್ಟು ಮತದಾರರು- 128052
ಚಲಾವಣೆಯಾಗಿದ್ದ ಮತಗಳು-128052


1999:
ಡಿ.ವಿ.ಸದಾನಂದ ಗೌಡ(ಬಿಜೆಪಿ)-62306(52.94ಶೇ.)
ಎನ್.ಸುಧಾಕರ ಶೆಟ್ಟಿ(ಕಾಂಗ್ರೆಸ್)-55013(46.74ಶೇ.)
ಬಿ.ಮೊಹಮ್ಮದ್(ಜೆಡಿಎಸ್)-369(0.31ಶೇ.)
ಒಟ್ಟು ಮತದಾರರು-147831
ಚಲಾವಣೆಯಾಗಿದ್ದ ಮತಗಳು-117688(ಶೇ.80.58)


1994:
ಡಿ.ವಿ.ಸದಾನಂದ ಗೌಡ(ಬಿಜೆಪಿ)-53015(48.59ಶೇ.)
ವಿನಯ ಕುಮಾರ್ ಸೊರಕೆ(ಕಾಂಗ್ರೆಸ್)-52611(48.22ಶೇ.)
ಎ.ಹೇಮನಾಥ ಶೆಟ್ಟಿ ಕಾವು(ಕೆಸಿಪಿ)-1782(1.63ಶೇ.)
ಪಾರ್ಪಕಜೆ ಈಶ್ವರ ಭಟ್(ಜನತಾದಳ)-1411(1.29ಶೇ.)
ಬಿ.ವೇಣುಗೋಪಾಲ ಮಣಿಯಾಣಿ(ಪಕ್ಷೇತರ)-289(0.26ಶೇ.)
ಒಟ್ಟು ಮತದಾರರು-139300
ಚಲಾವಣೆಯಾಗಿದ್ದ ಮತಗಳು-109108(ಶೇ.79.27).


1989:
ವಿನಯ ಕುಮಾರ್ ಸೊರಕೆ(ಕಾಂಗ್ರೆಸ್)43695(46.58ಶೇ.)
ಡಿ.ವಿ.ಸದಾನಂದ ಗೌಡ(ಬಿಜೆಪಿ)-42134(44.91ಶೇ.)
ಪಾರ್ಪಕಜೆ ಈಶ್ವರ ಭಟ್(ಜನತಾ ದಳ)-7054(7.52ಶೇ.)
ಎಂ.ಕರುಣಾಕರ ರೈ(ಜನತಾ ಪಾರ್ಟಿ)-926(0.99ಶೇ.)
ಒಟ್ಟು ಮತದಾರರು-125839
ಚಲಾವಣೆಯಾಗಿದ್ದ ಮತಗಳು-93809(ಶೇ.77.08).


1985:
ವಿನಯ ಕುಮಾರ್ ಸೊರಕೆ(ಕಾಂಗ್ರೆಸ್)-37426(51.46ಶೇ.)
ಕೆ.ರಾಮ ಭಟ್ ಉರಿಮಜಲು(ಬಿಜೆಪಿ)-16603(22.83ಶೇ.)
ಯು.ಪಿ.ಶಿವರಾಮ(ಜನತಾ ಪಾರ್ಟಿ)-16370(22.51ಶೇ.)
ಮೊಹಮ್ಮದ್ ಡಿಲಕ್ಸ್(ಪಕ್ಷೇತರ)-1572(2.16ಶೇ.)
ಕೆ.ಶೀನ(ಪಕ್ಷೇತರ)-322(0.44ಶೇ.)
ಯು.ಪಿ.ಶಿವಾನಂದ(ಪಕ್ಷೇತರ)-162(0.22ಶೇ.)
ಕೆ.ಬಾಬು(ಪಕ್ಷೇತರ)-135(0.19ಶೇ.)
ಅಬ್ಬ(ಪಕ್ಷೇತರ)-78(0.11ಶೇ.)
ಕೆ.ಸದಾಶಿವ(ಪಕ್ಷೇತರ)-67(0.09ಶೇ.)
ಒಟ್ಟು ಮತದಾರರು-98802
ಚಲಾವಣೆಯಾಗಿದ್ದ ಮತಗಳು-72735(ಶೇ.74.15).


1983:
ಕೆ.ರಾಮ ಭಟ್ (ಬಿಜೆಪಿ)-26618(45.63)
ಬಿ.ಸಂಕಪ್ಪ ರೈ(ಕಾಂಗ್ರೆಸ್)-25189(43.18ಶೇ.)
ಸಿ.ಸಿ.ಚಾಕೋ(ಜನತಾ ಪಾರ್ಟಿ)-5436(9.32ಶೇ.)
ಎಂ.ದಯಾನಂದ ಪ್ರಭು(ಪಕ್ಷೇತರ)-1090(1.87ಶೇ.)
ಒಟ್ಟು ಮತದಾರರು-82337
ಚಲಾವಣೆಯಾಗಿದ್ದ ಮತಗಳು-58333(ಶೇ.71.94).


1978:
ಕೆ.ರಾಮ ಭಟ್(ಜನತಾ ಪಾರ್ಟಿ)-25751(43.32ಶೇ)
ಬೆಟ್ಟ ಈಶ್ವರ ಭಟ್(ಕಾಂಗ್ರೆಸ್-ಐ)25109(42.24ಶೇ.)
ಬಿ.ಹುಕ್ರಪ್ಪ(ಪಕ್ಷೇತರ)-8585(14.44ಶೇ.)
ಒಟ್ಟು ಮತದಾರರು-76445
ಚಲಾವಣೆಯಾಗಿದ್ದ ಮತಗಳು-59445(ಶೇ.78.82).


1972:
ಎ.ಶಂಕರ ಆಳ್ವ(ಕಾಂಗ್ರೆಸ್)-29630(56.42ಶೇ.)
ಕೆ.ರಾಮ ಭಟ್(ಭಾರತೀಯ ಜನ ಸಂಘ)-15695(29.89ಶೇ.)
ಪರಮೇಶ್ವರ(ಎನ್‌ಸಿಒ)-4353(8.29ಶೇ.)
ಪದ್ಮನಾಭ ಪೈ(ಪಕ್ಷೇತರ)-2566(4.89ಶೇ.)
ಪಿ.ನೇಮಿರಾಜ್(ಸ್ವತಂತ್ರ ಪಾರ್ಟಿ)-269(0.51ಶೇ.)
ಒಟ್ಟು ಮತದಾರರು-77745
ಚಲಾವಣೆಯಾಗಿದ್ದ ಮತಗಳು-52513(ಶೇ.68.99).

LEAVE A REPLY

Please enter your comment!
Please enter your name here