‘ಮುಂದೆ ಬಿಜೆಪಿಗೆ ಶಾಸಕ ಸ್ಥಾನ ಬರುವ ತನಕ ಪೂರ್ಣ ಶ್ರಮ’-ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಆಶಾ ತಿಮ್ಮಪ್ಪ ಭರವಸೆ

0

ಪುತ್ತೂರು:ಸತ್ಯಕ್ಕೆ ಯಾವತ್ತು ಕೂಡಾ ಸೋಲಿಲ್ಲ.ಈ ಹಿಂದೆ ಶಾಸಕ ಸಂಜೀವ ಮಠಂದೂರು ಅವರು ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿ ಅನುದಾನ ತಂದರೂ ಮತದಾರರ ಕಣ್ಣಿಗೆ ಅದು ಕಂಡಿಲ್ಲ.ಈ ನಿಟ್ಟಿನಲ್ಲಿ ಮುಂದಿನ 5 ವರ್ಷ ನಾನು ಇಲ್ಲಿಯೇ ಇದ್ದು ಮುಂದೆ ಬಿಜೆಪಿಗೆ ಶಾಸಕ ಸ್ಥಾನ ಬರುವಂತೆ ನನ್ನ ಪೂರ್ಣ ಪ್ರಮಾಣದ ಕೆಲಸ ಮಾಡಲಿದ್ದೇನೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಭರವಸೆ ನೀಡಿದ್ದಾರೆ.


ಪುತ್ತೂರು ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಮೇ 13ರಂದು ಸಂಜೆ ನಡೆದ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.

ಕಾರ್ಯಕರ್ತರ‍್ಯಾರೂ ಧೃತಿಗೆಡದೆ ನಿಜವಾದ ಬಿಪಿಪಿ ಸಂಘಪರಿವಾರದ ಕಾರ್ಯಕರ್ತರು ಮುಂದಿನ ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಬೇಕು.ಈ ನಿಟ್ಟಿನಲ್ಲಿ ಮುಂದಿನ 5 ವರ್ಷ ನಾನು ಇಲ್ಲಿಯೇ ಇದ್ದು ಮುಂದೆ ಬಿಜೆಪಿ ಶಾಸಕ ಸ್ಥಾನ ಬರುವಂತೆ ನಾನು ನನ್ನ ಪೂರ್ಣ ಪ್ರಮಾಣದ ಕೆಲಸ ಮಾಡಲಿದ್ದೇನೆ ಎಂದ ಅವರು ಇವತ್ತಿನ ಸೋಲನ್ನು ನಾನು ಒಪ್ಪಿಕೊಳ್ಳುತ್ತೇನೆ. ಅದನ್ನು ಕಾರ್ಯಕರ್ತರ ಮೇಲೆ ಹಾಕುವುದಿಲ್ಲ ಎಂದು ಭಾವುಕರಾದರು.


ಮುಂದಿನ ಚುನಾವಣೆ ತನಕ ವಿರಮಿಸುವುದಿಲ್ಲ:
ನಿಕಟಪೂರ್ವ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಮುಂದಿನ ದಿನ ಲೋಕಸಭಾ, ತಾ.ಪಂ ಮತ್ತು ಜಿ.ಪಂ ಚುನಾವಣೆಯ ಮೂಲಕ ಮತ್ತೊಮ್ಮೆ ಪುತ್ತೂರಿನಲ್ಲಿ ಬಿಜೆಪಿ ಗೆಲುವು ಸಾಧಿಸಬೇಕು.ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಯ ತನಕ ನಾವು ವಿರಮಿಸುವುದಿಲ್ಲ ಎಂದು ಹೇಳಿದರು.ಚುನಾವಣೆಯ ಸೋಲು ತಾತ್ಕಾಲಿಕ, ಆಶಾ ತಿಮ್ಮಪ್ಪ ಅನುಭವಿ ಆಡಳಿತ ಮಾಡಿದದವರು.ಅವರ ಗೆಲುವಿಗೆ ಶಕ್ತಿ ಮೀರಿ ಕಾರ್ಯಕರ್ತರು ಕೆಲಸ ಮಾಡಿದ್ದಾರೆ.ರಾಜ್ಯ, ಕೇಂದ್ರದ ನಾಯಕರು ಬಂದು ಬೆಂಬಲ ನೀಡಿದರು.ರೋಡ್ ಶೋ ಮಾಡುವ ಮೂಲಕ ನಮಗೆ ಪ್ರೇರಣೆ ನೀಡಿದರು.ಮಾಧ್ಯಮದವರು ಸಹಕರಿಸಿದರು.ಸೀತಾರಾಮ ರೈ ಅವರು ಕಾರ್ಯಾಲಯಕ್ಕೆ ಕಚೇರಿಯನ್ನೂ ನೀಡಿದ್ದಾರೆ.ಅವರಿಗೆಲ್ಲ ನಮ್ಮ ಕೃತಜ್ಞತೆಗಳು ಎಂದರು.ನಗರಸಭಾ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್ ಕಾರ್ಯಕರ್ತರಿಗೆ ಅಭಿನಂದನೆ ಮಾಡಿದರು.ಅಭ್ಯರ್ಥಿಯ ಚುನಾವಣಾ ಏಜೆಂಟ್ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here