ನಿಡ್ಪಳ್ಳಿ; ರೆಂಜ ಸುಳ್ಯಪದವು ರಸ್ತೆಯ ಕೂಟೇಲು ಎಂಬಲ್ಲಿ ನೂತನವಾಗಿ ನಿರ್ಮಾಣವಾಗಿ ಇತ್ತೀಚೆಗೆ ಸಂಚಾರಕ್ಕೆ ಮುಕ್ತವಾದ ಸೇತುವೆಯ ಸಮೀಪ ರಸ್ತೆ ಬದಿ ಕಟ್ಟಿದ ತಡೆಗೋಡೆ ಅಪಾಯಕಾರಿಯಾಗಿ ನಿಂತಿದೆ.
ಕಳೆದ ಎರಡು ದಿನ ಬಂದ ಮಳೆಗೆ ರಸ್ತೆ ಮತ್ತು ತಡೆಗೋಡೆ ಮಧ್ಯೆ ನೀರು ತುಂಬಿದ ಕಾರಣ ಹಾಕಿದ ಮಣ್ಣು ಜಗ್ಗಿದ್ದು ಇನ್ನಷ್ಟು ನೀರು ಹೋದರೆ ತಡೆಗೋಡೆ ಕಟ್ಟಿದ ಕಲ್ಲು ಕುಸಿದು ಬೀಳುವ ಸಂಭವ ಇದೆ.ಅದುದರಿಂದ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯವರು ಎಚ್ಚೆತ್ತು ಕೊಂಡು ಅಲ್ಲಿ ನೀರು ನಿಲ್ಲದಂತೆ ಮಾಡಿ ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡದಿದ್ದರೆ ಅಪಾಯ ತಪ್ಪಿದ್ದಲ್ಲ.ರಸ್ತೆಯ ಎರಡೂ ಬದಿ ನಿರ್ಮಿಸಿದ ತಡೆಗೋಡೆಯ ರಸ್ತೆ ಅಂಚು ತಗ್ಗಿ ನಿಂತಿದ್ದು ಅಲ್ಲಿ ನೀರು ಇಳಿದರೆ ತಡೆಗೋಡೆ ಕುಸಿದು ಇಡೀ ರಸ್ತೆಗೆ ಅಪಾಯ ಎದುರಾಗ ಬಹುದು.ಅಲ್ಲದೆ ರಸ್ತೆಯ ಎರಡು ಕಡೆ ಇರುವ ಕೃಷಿಗೂ ಹಾನಿಯಾಗುವ ಸಂಭವ ಇದ್ದು ಅಲ್ಲಿಯ ಕೃಷಿಕರೂ ಆತಂಕ ಪಡುತ್ತಿದ್ದಾರೆ.ತಕ್ಷಣ ಇಲಾಖೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಮಾಡಿದ ಕಾಮಗಾರಿ ವ್ಯರ್ಥವಾಗಿ ಹೋಗಬಹುದು.