ಮೆ.16: ಸ್ಟಾರ್ ಸುವರ್ಣ ವಾಹಿನಿಯ ಬೊಂಬಾಟ್ ಭೋಜನದಲ್ಲಿ ಪುತ್ತೂರಿನ ಆಶಾ ನಾಯಕ್

0

ಪುತ್ತೂರು: ಖ್ಯಾತ ಸಿನಿಮಾ ನಟ ಸಿಹಿ ಕಹಿ ಚಂದ್ರು ನಡೆಸಿಕೊಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರದ ತನಕ ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗುವ ಬೊಂಬಾಟ್ ಭೋಜನ’ ಕಾರ್ಯಕ್ರಮದಲ್ಲಿ ಮೇ.16ರಂದು ಮೂಡಿ ಬರುವ ಸಂಚಿಕೆಯಲ್ಲಿ ನಾಯಕ್ಸ್ ಕಿಚನ್’ ಯೂಟ್ಯೂಬ್ ಚಾನೆಲ್‌ನ ಪುತ್ತೂರಿನ ಆಶಾ ನಾಯಕ್‌ರವರು ಭಾಗವಹಿಸುತ್ತಿದ್ದಾರೆ.

ನಟನಾಗಿ ಅಲ್ಲದೆ ತಮ್ಮ ರುಚಿಕರ ಅಡುಗೆ ಮೂಲಕವೂ ಸಾವಿರಾರು ಜನರ ಮನಗೆದ್ದಿರುವ ಸಿಹಿಕಹಿ ಚಂದ್ರುರವರು ದಿನನಿತ್ಯ ಬಳಸುವ ಕೈಗೆಟಕುವ ಸಾಮಾಗ್ರಿಗಳಲ್ಲೇ ರುಚಿಕರ ಅಡುಗೆ ಮಾಡುವುದು ಇವರ ವಿಶೇಷತೆಯಾಗಿದೆ. ಸ್ಟಾರ್ ಸುವರ್ಣ ವಾಹಿನಿಯ ಮೂರನೇ ಸೀಸನ್ ಈಗಾಗಲೇ ಭಾರೀ ಸದ್ದು ಮಾಡುತ್ತಿದ್ದು ಇದರಲ್ಲಿ ಬಯಲೂಟ, ಮನೆಯೂಟ, ಸವಿಯೂಟ,ಅಂದಚಂದ,ಅಂಗೈಯಲ್ಲಿ ಆರೋಗ್ಯ, ಟಿಪ್‌ಟಿಪ್‌ಟಿಪ್ ಹಾಗೂ ಅತಿಥಿ ದೇವೋಭವ ಎಂಬ ಏಳು ಬಗೆಯ ವಿಶೇಷತೆಗಳಿವೆ.


ಪುತ್ತೂರಿನ ಆಶಾ ನಾಯಕ್
ನರಿಮೊಗರು ಗ್ರಾಮದ ಉದ್ದಮಜಲು ಶಾಂತರಾಮ ನಾಯಕ್‌ರವರ ಪತ್ನಿಯಾಗಿರುವ ಆಶಾ ನಾಯಕ್‌ರವರು ಬೊಂಬಾಟ್ ಭೋಜನದ ಮೇ.16 ರ ಸಂಚಿಕೆಯಲ್ಲಿ ತಮ್ಮ ಅಡುಗೆ ರುಚಿಯನ್ನು ವೀಕ್ಷಕರಿಗೆ ತೋರಿಸಲಿದ್ದಾರೆ. ನಾಯಕ್ಸ್ ಕಿಚನ್ ಎಂಬ ಯೂಟ್ಯೂಬ್ ಚಾನೆಲ್ ಹೊಂದಿರುವ ಇವರು ಆ ಚಾನೆಲ್‌ನಲ್ಲಿ ಸುಮಾರು 100 ಕ್ಕೂ ಅಧಿಕ ವಿವಿಧ ಬಗೆಯ ಅಡುಗೆ ಶೈಲಿಯನ್ನು ವೀಡಿಯೋ ಮೂಲಕ ಜನರಿಗೆ ತಲುಪಿಸಿದ್ದಾರೆ. ಪುತ್ತೂರು ಬೆಥನಿ ಶಾಲೆಯ ಉಪಾಧ್ಯಕ್ಷೆಯಾಗಿರುವ ಆಶಾ ನಾಯಕ್‌ರವರು, ಇನ್ನರ್‌ವೀಲ್ ಕ್ಲಬ್‌ನ ಸಕ್ರೀಯ ಸದಸ್ಯೆಯಾಗಿರುವ ಇವರು 2023-24 ನೇ ಸಾಲಿನ ನಿಯೋಜಿತ ಕ್ಲಬ್ ಐಎಸ್‌ಒ ಆಯ್ಕೆಯಾಗಿದ್ದಾರೆ. ಇವರ ಅಡುಗೆ ಪರಿಣತಿಯನ್ನು ಪರಿಗಣಿಸಿ ಬೊಂಬಾಟ್ ಭೋಜನದಲ್ಲಿ ಇವರಿಗೆ ಅವಕಾಶ ದೊರೆತಿದ್ದು ಆ ಮೂಲಕ ವೀಕ್ಷಕರಿಗೆ ಇವರ ಕೈ ರುಚಿ ತಲುಪಲಿದೆ.

LEAVE A REPLY

Please enter your comment!
Please enter your name here