ವಿಘ್ನ ಸಂತೋಷಿಗಳಿಂದ ಸಂಘ, ಬಿಜೆಪಿ ಪಕ್ಷದ ನಾಯಕರನ್ನು ನಿಂದಿಸುತ್ತಿರುವುದನ್ನು ನಾವು ಬೆಂಬಲಿಸುವುದಿಲ್ಲ – ಅರುಣ್ ಕುಮಾರ್ ಪುತ್ತಿಲ

0

ಪುತ್ತೂರು: ಯಾರೋ ವಿಘ್ನ ಸಂತೋಷಿಗಳು ಸಂಘ ಹಾಗೂ ಬಿಜೆಪಿ ಪಕ್ಷದ ನಾಯಕರನ್ನು ನಿಂದಿಸುವುದು ಕಂಡು ಬಂದಿದೆ. ನಾವು ಇದನ್ನು ಬೆಂಬಲಿಸುವುದಿಲ್ಲ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.

ಅರುಣ್ ಕುಮಾರ್ ಪುತ್ತಿಲ ಪರ ಅನೇಕ ವಾಟ್ಸಪ್ ಗ್ರೂಪ್, ಫೇಸ್ ಬುಕ್ ಪೇಜ್ ಗಳಲ್ಲಿ ಕೆಲವರು ಪುತ್ತಿಲ ಬೆಂಬಲಿಗರಲ್ಲದವರೂ ಸೇರಿಕೊಂಡು ಸಂಘ ಮತ್ತು ಬಿಜೆಪಿ ಪಕ್ಷದ ನಾಯಕರನ್ನು ನಿಂದಿಸುವ ಮೂಲಕ ಹಿಂದುತ್ವದ ನಿಲುವಿಗೆ ಹಿನ್ನಡೆ ತರುವ ಕೆಲಸ ನಡೆಯುತ್ತಿದೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ದೊರೆತಿದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಸ್ಪಷ್ಟ ಸಂದೇಶ ನೀಡುತ್ತಿದ್ದೇನೆ.

ನಾವು ಹಿಂದುತ್ವದ ಪ್ರತಿಪಾದನೆಗಾಗಿ, ಸ್ವಾಭಿಮಾನ, ಪ್ರತಿರೋಧದ ಭಾಗವಾಗಿ ಚುನಾವಣೆಗೆ ಸ್ಪರ್ಧಿಸಿ ಗೆಲುವಿಗಾಗಿ ಹೋರಾಟ ಮಾಡಿದ್ದೀವೆ. ನಮ್ಮದು ವೀರೋಚಿತ ಸೋಲು. ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಎತ್ತಿತೋರಿಸಲು ಸ್ಪರ್ಧಿಸಿ ಸ್ಪಷ್ಟವಾದ ಸಂದೇಶ ರವಾನೆಯಾಗಿದೆ.

ನಮ್ಮ ವಿರುದ್ಧ ಎಷ್ಟೇ ಅಪಪ್ರಚಾರ, ಷಡ್ಯಂತ್ರ ನಡೆದರೂ ಸತ್ಯದ ದಾರಿಯಲ್ಲಿ ನಡೆದ್ದಿದ್ದೇವೆ ನಾವು ಇದನ್ನೇ ಮುಂದುವರಿಸುವ. ಭವಿಷ್ಯದ ಗೆಲುವಿಗಾಗಿ ಕಾಯೋಣ ಎಂದವರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡಿದ್ದಾರೆ.

LEAVE A REPLY

Please enter your comment!
Please enter your name here