ಶ್ರೀ ರಾಮಕೃಷ್ಣ ಪ್ರೌಢಶಾಲೆಯು ಸ್ಥಾಪನೆಗೊಂಡ ಬಳಿಕ ಹಲವಾರು ದಾಖಲೆಗಳನ್ನು ನಿರ್ಮಿಸಿದೆ. ಸುಮಾರು 22 ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಸಮಾವೇಶಗಳಲ್ಲಿ ಭಾಗವಹಿಸಿ ವಿಜ್ಞಾನ ಯೋಜನಾ ವರದಿಗಳನ್ನು ಮಂಡಿಸಿ ಚಿನ್ನ ಬೆಳ್ಳಿ, ಕಂಚಿನ ಪದಕ ಪಡೆದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶೈಕ್ಷಣಿಕವಾಗಿ ತನ್ನದೇ ಆದ ಸಾಧನೆಯನ್ನು ಮಾಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಸರಾಸರಿ 97 ಶೇ. ಫಲಿತಾಂಶವನ್ನು ದಾಖಲಿಸಿದೆ. ಅಲ್ಲದೇ ಎನ್.ಎಮ್.ಎಮ್.ಎಸ್ ಮತ್ತು ಎನ್.ಟಿ.ಎಸ್.ಇ ಪರೀಕ್ಷೆಯಲ್ಲಿ ಪ್ರತಿ ವರ್ಷವು ಆಯ್ಕೆಯಾಗುತ್ತಿದ್ದು, ಪ್ರಸ್ತುತ ಸಾಧನೆಯ ಮತ್ತೊಂದು ಮೆಟ್ಟಿಲು ಹವಾಮಾನ ಗಡಿಯಾರ ಸ್ಥಾಪಿಸಿ ಮೇ 16ರಂದು ಉದ್ಘಾಟನೆಗೊಳ್ಳುತ್ತಿದೆ.
ಕಾವು ಹೇಮನಾಥ ಶೆಟ್ಟಿ, ಸಂಚಾಲಕರು,
ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು
ಪುತ್ತೂರು: ನವದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಎನರ್ಜಿ ಸ್ವರಾಜ್ ಫೌಂಡೇಶನ್ ಅಟಲ್ ಇನ್ನೋವೇಶನ್ ಮಿಷನ್ (NITI AAyog) ಮತ್ತು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (AICTE) ಸಹಯೋಗದೊಂದಿಗೆ ಮದರ್ ಅರ್ಥ್ ಡೇ ವಿಶೇಷ ದಿನವಾದ ಎ. 22 ರಂದು ಜರಗಿದ ವಿಶ್ವದ ಅತಿದೊಡ್ಡ ಜಾಗತಿಕ ಹವಾಮಾನ ಗಡಿಯಾರ ಜೋಡನೆ ಕಾರ್ಯಕ್ರಮದಲ್ಲಿ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 10ನೇ ತರಗತಿಯ ಕಾರ್ತಿಕೇಯ ವಾಗ್ಲೆ (ಮಂಜಲಡ್ಪು ಶ್ರೀಪ್ರಕಾಶ್ ವಾಗ್ಳೆ ಬಿ ಮತ್ತು ಸುಲೋಚನ ಎಸ್‌ರವರ ಪುತ್ರ), ಶ್ರೀವತ್ಸ ಬಿ (ಬನ್ನೂರು ಮಂಜುನಾಥಯ್ಯ ಬಿ ಮತ್ತು ಮೀನಾಕ್ಷಿ ಬಿರವರ ಪುತ್ರ), ಕಷೀಶ್ ಪಿ ಎಸ್ (ಚಿಕ್ಕಪುತ್ತೂರು ಸತೀಶ್ ಪಿ ಮತ್ತು ರಂಜಿನಿ ಎರವರ ಪುತ್ರಿ), ಪ್ರಕೃತಿ ವಿ ರೈ (ಪಾಂಗ್ಲಾಯಿ ವಿಠಲ ರೈ ಎ ಮತ್ತು ಚಿತ್ರಾ ರೈ ಎಸ್‌ರವರ ಪುತ್ರಿ), 9ನೇ ತರಗತಿಯ ಅಕ್ಷಯ್ ಗಣೇಶ್ ಕೆ (ವರ್ಕಾಡಿ ರಘುರಾಮ ಎಸ್ ಮತ್ತು ವೈಶಾಲಿ ಎಂ ಆರ್‌ರವರ ಪುತ್ರ), ಪ್ರಖ್ಯಾತ್ ಡಿ ರೈ (ನಿಡ್ಪಳ್ಳಿ ಹೊಸಮನೆ ದಯಾನಂದ ರೈ ಮತ್ತು ಪ್ರತಿಭಾ ಕುಮಾರಿ ಪಿ ರವರ ಪುತ್ರ) ಹಾಗೂ ಮಾರ್ಗದರ್ಶಕ ಮತ್ತು ಅಟಲ್ ಮೆಂಟರ್ ಆಗಿ ಕಾವು ರಂಜಿತಾ ಹೆಚ್ ಶೆಟ್ಟಿ ಭಾಗವಹಿಸಿದ್ದರು. ಇದೀಗ ವಿಶ್ವ ದಾಖಲೆ ನಿರ್ಮಿಸಿದಂತಹ ಈ ಜಾಗತಿಕ ಹವಾಮಾನ ಗಡಿಯಾರ ಮತ್ತು ಸ್ಮಾರ್ಟ್ ಟಿವಿ ಉದ್ಘಾಟನೆ ಕಾರ್ಯಕ್ರಮವು ಮೇ 16 ರಂದು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ವಹಿಸಲಿದ್ದು, ಹವಾಮಾನ ಗಡಿಯಾರದ ಉದ್ಘಾಟನೆಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮಂಗಳೂರು ಇದರ ಪ್ರಾಂಶುಪಾಲ ಮತ್ತು ಉಪನಿರ್ದೇಶಕ (ಅಭಿವೃದ್ಧಿ)ರಾದ ರಾಜಲಕ್ಷ್ಮಿ ಕೆ, ಸ್ಮಾರ್ಟ್ ಟಿ.ವಿಯ ಉದ್ಘಾಟನೆಯನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಎಸ್.ಆರ್, ಮುಖ್ಯ ಅತಿಥಿಗಳಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು ಇದರ ಉಪನ್ಯಾಸಕರು ಹಾಗೂ ಅಟಲ್ ಟಿಂಕರಿಂಗ್ ಲ್ಯಾಬ್‌ನ ಜಿಲ್ಲಾ ನೋಡಲ್ ಅಧಿಕಾರಿಗಳಾದ ವೇದಾವತಿ ಬಿ ಕೆ, ಎನ್.ಐ.ಟಿ.ಕೆ. ರಸಾಯನಶಾಸ್ತ್ರದ ಪ್ರೊಫೆಸರ್ ಅರುಣ್ ಎಂ ಇಸ್ಲೂರು, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹರೀಶ್ ಶಾಸ್ತ್ರೀ , ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಪುತ್ತೂರು ಶಿಕ್ಷಣ ಸಂಯೋಜಕ ಹರಿಪ್ರಸಾದ್ ರವರು ಭಾಗವಹಿಸಲಿದ್ದಾರೆ ಎಂದು ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮತ್ತು ಮುಖ್ಯ ಶಿಕ್ಷಕಿ ಜಯಲಕ್ಷ್ಮೀಯವರು ತಿಳಿಸಿದ್ದಾರೆ.