ನಾಪತ್ತೆಯಾಗಿದ್ದ ಶಶಿಕಾಂತ್ ಠಾಣೆಗೆ ಹಾಜರು

0

ಉಪ್ಪಿನಂಗಡಿ : ಕಳೆದ ಶನಿವಾರದಂದು ನಾಪತ್ತೆಯಾಗಿದ್ದ ಕೌಕ್ರಾಡಿ ಗ್ರಾಮದ ಪಾಲೇಲೆ ಮನೆ ನಿವಾಸಿ ಶಶಿಕಾಂತ್ (38) ಎಂಬವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾದ ಬೆನ್ನಲ್ಲೇ ಪತ್ತೆಯಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಹಾಜರಾದ ಘಟನೆ ವರದಿಯಾಗಿದೆ.

ದಿವ್ಯಾ ಎಂಬಾಕೆ ತನ್ನ ಗಂಡ ಶಶಿಕಾಂತ್ ಶನಿವಾರ ಪಟ್ರಮೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಬಳಿಕ ಪೋನ್ ಕರೆಗೆ ಸಿಗದೆ ನಾಪತ್ತೆಯಾಗಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾಗಲೇ ಶಶಿಕಾಂತ್ ತನ್ನ ಮನೆಗೆ ಆಗಮಿಸಿದ್ದು, ಬಳಿಕ ಪೊಲೀಸ್ ಠಾಣೆಗೆ ಹಾಜರಾಗಿರುತ್ತಾನೆ.

ಬೆಟ್ಟಿಂಗ್ ಜಾಲದಲ್ಲಿ ಹಲವಾರು ಮಂದಿಗೆ ಹಣ ಕೊಡಬೇಕಾಗಿದ್ದರಿಂದ ತಾನು ಊರಿನಿಂದ ಹೊರಗೆ ಹೋಗಿದ್ದೆ ಎಂದು ಶಶಿಕಾಂತ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here