ಪ್ರಗತಿ ಪಥದ ದಶ ಸಂಭ್ರಮದಲ್ಲಿರುವ ತಾಲೂಕಿನ ಪ್ರಥಮ ಪ್ಯಾರಾಮೆಡಿಕಲ್ ಕಾಲೇಜು ಪ್ರಗತಿಯಲ್ಲಿ ದಾಖಲಾತಿ ಆರಂಭ

0

ನುರಿತ ಉಪನ್ಯಾಸಕ ತಂಡ
100 ಹಾಸಿಗೆಗಳ, ಅತ್ಯಾಧುನಿಕ ಉಪಕರಣಗಳನ್ನೊಳಗೊಂಡ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲೇ ತರಬೇತಿ.
ಅತ್ಯುತ್ತಮ ಕ್ಲಿನಿಕಲ್ ಸೌಲಭ್ಯ
ವಿದ್ಯಾರ್ಥಿ ವೇತನ ಸೌಲಭ್ಯ
ಕಾಲೇಜು ಬಸ್ ವ್ಯವಸ್ಥೆ
ನೂರರಷ್ಟು ಉದ್ಯೋಗವಕಾಶ
ವಿವರಗಳಿಗಾಗಿ 9916373417/ 9844377347

ವೃತ್ತಿಪರ ತರಬೇತಿಗಳಲ್ಲಿ ಮುಂಚೂಣಿಯಲ್ಲಿ ಬರುವುದೇ ವೈದ್ಯಕೀಯ ಕ್ಷೇತ್ರ. ಅದರಲ್ಲೂ ಅರೆವೈದ್ಯಕೀಯ ಕೋರ್ಸ್ ಗಳಿಗೆ ಹಾಗೂ ಅಲೈಡ್ ಕೋರ್ಸ್ ಗಳಿಗೆ ಎಲ್ಲೂ ಸಿಗದ ಪ್ರಾಮುಖ್ಯತೆಯಿದೆ.

ಈ ಕೋರ್ಸ್‌ಗಳೆಲ್ಲಾ ಕಡಿಮೆ ಶುಲ್ಕದೊಂದಿಗೆ, ಉತ್ತಮ ಸಂಬಳದ ಭರವಸೆಯನ್ನು ನೀಡುವಲ್ಲಿ ಸೈ ಎನಿಸಿಕೊಂಡಿವೆ. ದೇಶ ವಿದೇಶದಲ್ಲಿ ಕೆಲಸದ ಭರವಸೆಯೊಂದಿಗೆ, ಗೌರವಾನ್ವಿತ ಜೀವಿತದೆಡೆಗೆ ವ್ಯಕ್ತಿಯನ್ನು ಮುನ್ನಡೆಸುವಲ್ಲೂ ಅತ್ಯಂತ ಪರಿಣಾಮಕಾರಿಯೆಂದರೆ ತಪ್ಪಲ್ಲ. ಸಮಾಧಾನಕರ ಜೀವನವೆಂದಾಗ, ಪ್ರತಿಯೊಬ್ಬನ ಪ್ರಕಾರ ಕೈ ತುಂಬಾ ಸಂಬಳ ಹಾಗೂ ಗೌರವಾನ್ವಿತ ಜೀವನಶೈಲಿ, ಇವೆರಡನ್ನೂ ಈ ವೃತ್ತಿಯು ದೊರಕಿಸಿ ಕೊಟ್ಟಾಗ ಬೇರೆ ಉದ್ಯೋಗ ಯಾಕೆ ಬೇಕು..? ಎಂಬ ಪ್ರಶ್ನೆ ಸಹಜ.
ನಿಜವಾಗಿಯೂ ಇದೊಂದು ವಿದ್ಯಾರ್ಥಿ ಜೀವನದ ಅತ್ಯುತ್ತಮ ಆಯ್ಕೆ ಎಂದೂ ಪರಿಗಣಿಸಬಹುದು.

ಇಂತಹ ಸುವರ್ಣಾವಕಾಶವನ್ನು ಎಲ್ಲಾ ಪ್ರತಿಷ್ಠಿತ, ಅರೆ ವೈದ್ಯಕೀಯ ಹಾಗೂ ಅಲೈಡ್ ಕಾಲೇಜುಗಳಲ್ಲಿ ಪಡೆಯಲು ಸಾಧ್ಯವಿದೆ.

ಬೇಕಿರುವ ಅರ್ಹತೆ: ಅರೆ ವೈದ್ಯಕೀಯ ತರಬೇತಿಯಲ್ಲಿ ಪ್ಯಾರಾ ಮೆಡಿಕಲ್ ಬೋರ್ಡ್, ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದಿವೆ.
10 ನೇ ತರಗತಿ ಮುಗಿಸಿದವರಿಗೆ 3 ವರುಷ ಹಾಗೂ ದ್ವಿತೀಯ ಪಿಯು, ವಿಜ್ಞಾನ (ಜೀವಶಾಸ) ವಿಭಾಗದ ವಿದ್ಯಾರ್ಥಿಗಳಿಗೆ ನೇರವಾಗಿ 2 ನೇ ವರ್ಷಕ್ಕೆ ಪ್ರವೇಶ ಲಭ್ಯವಿರುತ್ತದೆ.

ಅಲೈಡ್ ಕೋರ್ಸ್ ಪ್ರವೇಶಕ್ಕಾಗಿ:
ವಿಜ್ಞಾನ ವಿಭಾಗದಲ್ಲಿ ಶೇ.45 ಅಂಕದೊಡನೆ ತೇರ್ಗಡೆ ಹೊಂದಿರಬೇಕು.
ತರಬೇತಿಯು ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ, ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದಿದ್ದು, ನಾಲ್ಕು ವರುಷದ ಕೋರ್ಸ್‌ಗಳಾಗಿವೆ.

ಅರೆ ವೈದ್ಯಕೀಯದಲ್ಲಿ ಡಿಪ್ಲೋಮ ತರಬೇತಿ:

1.ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ/ ಪ್ರಯೋಗ ಶಾಲಾ ತಂತ್ರಜ್ಞ.

2.ಆಪರೇಷನ್ ಥಿಯೇಟರ್ ಹಾಗೂ ಅನಸ್ತೇಶಿಯಾ ಟೆಕ್ನಾಲಜಿ / ಶಾಸ ಚಿಕಿತ್ಸೆ ಹಾಗೂ ಅರಿವಳಿಕೆ ತಂತ್ರಜ್ಞ.
3.ಮೆಡಿಕಲ್‌ಎಕ್ಸ್ರೇಟೆಕ್ನಾಲಜಿ / ಕ್ಷ ಕಿರಣ ತಂತ್ರಜ್ಞ.
4.ಡೈಲಿಸಿಸ್ ಟೆಕ್ನಾಲಜಿ/ ರಕ್ತ ಶುದ್ಧೀಕರಣ ತಂತ್ರಜ್ಞ.
5.ಆಪ್ತಾಲ್ಮಿಕ್ ಟೆಕ್ನಾಲಜಿ/ ನೇತ್ರ ವಿಜ್ಞಾನ ತಂತ್ರಜ್ಞ.

6.ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ / ವೈದ್ಯಕೀಯ ದಾಖಲೆಗಳ ತಂತ್ರಜ್ಞ.
7.ಹೆಲ್ತ್ ಇನ್ಸ್ ಪೆಕ್ಟರ್.
8.ಡೆಂಟಲ್ ಮೆಕ್ಯಾನಿಕ್.
9.ಡೆಂಟಲ್ ಹೈಜೀನ್.
ಹಾಗೆಯೇ ಅಲೈಡ್ ಕೋರ್ಸ್‌ಗಳು:
1.ಬಿ.ಎಸ್ಸಿ. ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ.
2.ಬಿ.ಎಸ್ಸಿ.ಆಪರೇಷನ್ ಥಿಯೇಟರ್ ಹಾಗೂ ಅನಸ್ತೆಶೀಯಾ ಟೆಕ್ನಾಲಜಿ.
3.ಬಿ.ಎಸ್ಸಿ.ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ.
4.ಬಿ.ಎಸ್ಸಿ.ಡಯಲಿಸಿಸ್ ಟೆಕ್ನಾಲಜಿ.
5.ಬಿ.ಎಸ್ಸಿ.ಆಪ್ತಾಲ್ಮಿಕ್ ಟೆಕ್ನಾಲಜಿ.
6.ಬಿ.ಎಸ್ಸಿ.ಕಾರ್ಡಿಯಾಕ್ ಟೆಕ್ನಾಲಜಿ.
7.ಬಿ.ಎಸ್ಸಿ.ನ್ಯುರೋ ಸಯನ್ಸ್ ಟೆಕ್ನಾಲಜಿ.
8.ಬಿ.ಎಸ್ಸಿ. ಎಮರ್ಜೆನ್ಸಿ ಮತ್ತು ಟ್ರಾಮ ಕೇರ್ ಟೆಕ್ನಾಲಜಿ.

ಇವುಗಳಿಗೆ ಮುಕ್ತ ಅವಕಾಶ.

ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಯಲ್ಲಿ ಡಿಪ್ಲೋಮ ಮಾಡಿದರೆ, ಆಸ್ಪತ್ರೆಯ ಪ್ರಯೋಗ ಶಾಲೆಯಲ್ಲಿ ರಕ್ತಪರೀಕ್ಷೆ ಮಾಡುವುದಲ್ಲದೇ, ರೋಗ ಪತ್ತೆ ಹಚ್ಚಲು ಸಹಾಯಮಾಡುವುದು, ಇಷ್ಟೇ ಅಲ್ಲದೆ ಸ್ವಂತ ಪ್ರಯೋಗ ಶಾಲೆ ಕೂಡಾ ಆರಂಭಿಸಬಹುದು.

ಆಪರೇಷನ್ ಹಾಗೂ ಅನಸ್ತೆಶಿಯಾ ಟೆಕ್ನಾಲಜಿಯಲ್ಲಿ ಡಿಪ್ಲೋಮ ಮಾಡಿದರೆ , ಆಪರೇಷನ್ ಥೀಯೆಟರ್ ಇದರ ಎಲ್ಲಾ ಕೆಲಸ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುವುದು. ಆಪರೇಷನ್ ಥಿಯೇಟರ್ ಮತ್ತು ಹೊರ ರೋಗಿಗಳ ನಿರ್ವಹಣೆ, ಎಲ್ಲಾ ಶಸ್ತ್ರಚಿಕಿತ್ಸಾ ಉಪಕರಣಗಳ ಜವಾಬ್ದಾರಿ, ಅವುಗಳ ಕ್ರಿಮಿಶುದ್ಧೀಕರಣ ಜೊತೆಗೆ ಆಪರೇಷನ್ ಥಿಯೇಟರ್ ಟೇಬಲ್ ವ್ಯವಸ್ಥೆ.

ಮೆಡಿಕಲ್ ಎಕ್ಸ್ ರೇ ಟೆಕ್ನಾಲಜಿಯಲ್ಲಿ ಡಿಪ್ಲೋಮ ಮಾಡಿದರೆ ಎಕ್ಸ್ ರೇ ಉಪಕರಣಗಳ ನಿರ್ವಹಣೆಯೊಂದಿಗೆ ಎಕ್ಸ್ ರೇ , ಸಿ.ಟಿ. ಸ್ಕ್ಯಾನ್ ಬಳಸಿ, ರೋಗ ಪತ್ತೆ ಹಚ್ಚುವಲ್ಲಿ ವೈದ್ಯರಿಗೆ ಸಹಾಯ.

ಡಯಾಲಿಸಿಸ್ ಟೆಕ್ನಾಲಜಿಯಲ್ಲಿ ಡಿಪ್ಲೋಮ ಮಾಡಿದರೆ, ಮೂತ್ರಪಿಂಡಗಳ ಅಸಮರ್ಪಕತೆಯ ರೋಗಿಗಳಿಗೆ ಡೈಯಾಲಿಸಿಸ್ ಹಾಗೂ ಉಪಕರಣಗಳ ನಿರ್ವಹಣೆ.
ಆಪ್ತಾಲ್ಮಿಕ್ ಟೆಕ್ನಾಲಜಿ ಡಿಪ್ಲೋಮದಿಂದ ದೃಷ್ಟಿದೋಷ ಪತ್ತೆ ಹಚ್ಚುವಲ್ಲಿ ವೈದ್ಯರಿಗೆ ನೆರವು. ಕಣ್ಣಿನ ವಕ್ರೀಭವನ ಹಾಗೂ ಕನ್ನಡಕ ತಯಾರಿ ಇತ್ಯಾದಿ.

ಹಾಗೇ , ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ ಮಾಡಿದರೆ, ಆಸ್ಪತ್ರೆ ವೈದ್ಯಕೀಯ ದಾಖಲೆಯ ಸಮರ್ಪಕ ನಿರ್ವಹಣೆ ಇತ್ಯಾದಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಬಹುದು.

ಅಲೈಡ್ ಕೋರ್ಸ್ ಪ್ಯಾರಾ ಮೆಡಿಕಲ್ ಕೋರ್ಸ್ ಹಾಗೂ ಪದವಿ ಕೋರ್ಸ್‌ಗಳು.
ಈ ಕೋರ್ಸ್‌ಗೆ, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೇ, ಪ್ಯಾರಾ ಮೆಡಿಕಲ್ ಹಾಗೂ ಅಲೈಡ್ ಕಾಲೇಜುಗಳಲ್ಲಿ ಉಪನ್ಯಾಸಕರಾಗೋ ಜೊತೆಗೆ ಸಂಶೋಧನಾ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಬಹುದು. ಹಾಗೆಯೇ ಸ್ನಾತಕೋತ್ತರ ಪದವಿ ಪಡೆಯಲು ಅರ್ಹರಾಗುತ್ತಾರೆ.

ಒಟ್ಟಾರೆ ಹೇಳುವುದಾದರೆ ತಾಂತ್ರಿಕ ಕೋರ್ಸ್‌ಗಳ ತುಲನೆಯಲ್ಲಿ ಪ್ಯಾರಾಮೆಡಿಲ್ ಹಾಗೂ ಅಲೈಡ್ ಕೋರ್ಸ್‌ಗಳಿಗೆ ಅತ್ಯುತ್ತಮ ಅವಕಾಶವಿದ್ದು ಈ ರೀತಿಯಲ್ಲಿ ಹಲವು ಲಾಭಗಳೂ, ಪ್ರಯೋಜನಗಳೂ ಇರುವಂಥ ತರಬೇತಿಯಿಂದ , ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸಲು ಬಯಸುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ವೇದಿಕೆಯಾಗಿದೆ.

ಈ ನಿಟ್ಟಿನಲ್ಲಿ 2013 -14 ರ ಸಾಲಿನ ,ಪ್ರಾರಂಭಗೊಂಡ ಪ್ರಗತಿ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ ಸಂಸ್ಥೆ ಹಲವು ಬಗೆಯ ಹೊಸತನದೊಡನೆ , DMLT , DOT AT ಮತ್ತು DOT ಎಂಬ ಮೂರು ಪಾರಾಮೆಡಿಕಲ್ ಕೋರ್ಸ್ ನಡೆಸುತ್ತಿದ್ದು, ಇಲ್ಲಿ ವಿದ್ಯಾಭ್ಯಾಸ ಪಡೆದಿರುವಂಥ ವಿದ್ಯಾರ್ಥಿಗಳೂ ,ದೇಶ, ವಿದೇಶಗಳಲ್ಲಿ ಉತ್ತಮ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಗತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ , B.Sc .MLT, B.Sc. O.T A.T , B.Sc.MIT , B.Sc.EMT , ಎಂಬ ನಾಲ್ಕು ಕೋರ್ಸ್ ಗಳಿದ್ದು , ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡ ಬಯಸುವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಿದೆ. ಪ್ರಗತಿ ಹಾಸ್ಪಿಟಲ್ ಎಜುಕೇಷನ್ ಟ್ರಸ್ಟ್ ಇದರ ಅಂಗ ಸಂಸ್ಥೆಗಳಾಗಿರುವ ಈ ವಿದ್ಯಾ ಸಂಸ್ಥೆಗಳು ಸತತ 10 ವರುಷಗಳಿಂದ ವೈದ್ಯಕೀಯ ಕ್ಷೇತ್ರಕ್ಕೆ ತಜ್ಞ ತಂತ್ರಜ್ಞರನ್ನು ಒದಗಿಸುತ್ತಿದೆ. ಸಂಸ್ಥೆಯೂ ನುರಿತ ಉಪನ್ಯಾಸಕ ವೃಂದವನ್ನುಹೊಂದಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ಕ್ಲಿನಿಕಲ್ ತರಬೇತಿಯನ್ನು ನೀಡುವಲ್ಲೂ ಸೈ ಎನಿಸಿದೆ.
ಸಂಸ್ಥೆಯ ಅಧ್ಯಕ್ಷರೂ, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಇದರ ನಿರ್ದೇಶಕರೂ ಆಗಿರುವ, ಡಾ. ಯು .ಶ್ರೀಪತಿರಾವ್, ಟ್ರಸ್ಟಿಗಳಾದ, ಡಾ. ಸುಧಾ ಎಸ್ ರಾವ್, ಡಾ. ಸ್ಮಿತಾ ಎಸ್ ಹಾಗೂ ಡಾ. ಅಭೀಶ್ ಹೆಗ್ಡೆ ಇವರುಗಳು ಸಂಸ್ಥೆಯ ಏಳಿಗೆಗೆ, ಅಭಿವೃದ್ಧಿಗೆ ನಿರಂತರ ಪ್ರೋತ್ಸಾಹ, ಮಾರ್ಗದರ್ಶನ, ಸಲಹೆಯನ್ನಿತ್ತು ಬೆಂಬಲ ನೀಡುತ್ತಿದ್ದಾರೆ.

ಲೇಖನ
ಪ್ರಜ್ವಲ್ ಸ್ಟಿಫನ್ ಕುಮಾರ್
ಉಪನ್ಯಾಸಕರು
ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಪುತ್ತೂರು

LEAVE A REPLY

Please enter your comment!
Please enter your name here