ರಾಮಕುಂಜ ಬೂತ್ ನಂ.6ರಲ್ಲಿ ಮಾದರಿ ಮತ ಡಿಲೀಟ್ ಮಾಡದೇ ಅಧಿಕಾರಿಗಳ ಎಡವಟ್ಟು

0

ಪುತ್ತೂರು: ಸುಳ್ಯ ವಿಧಾನಸಭಾ ಕ್ಷೇತ್ರದ ರಾಮಕುಂಜ ಬೂತ್ ನಂ.6ರಲ್ಲಿ ಚಲಾವಣೆಯಾದ ಇವಿಎಂನ ಮತ ಎಣಿಕೆಯಾಗದೆ ಬಾಕಿ ಉಳಿದಿದೆ. ಇದಕ್ಕೆ ಅಧಿಕಾರಿಗಳ ಅಸಡ್ಡೆ ಕಾರಣವಾಗಿದೆ.

ಬೂತ್‌ನಲ್ಲಿ ಮತದಾನ ಆರಂಭಿಸುವ ಮೊದಲು ಅಭ್ಯರ್ಥಿಗಳ ಏಜೆಂಟ್‌ಗಳ ಸಮ್ಮುಖದಲ್ಲಿ ಮಾದರಿ ಮತದಾನ ಮಾಡುವ ಕ್ರಮವಿದೆ. ಬಳಿಕ ಈ ಮತಗಳನ್ನು ಡಿಲೀಟ್ ಮಾಡಿ ಮತದಾನ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಆದರೆ ರಾಮಕುಂಜ ಗ್ರಾಮದ ಬೂತ್ ನಂ.6ರಲ್ಲಿ ಮಾದರಿ ಮತದಾನದ ಸಂದರ್ಭ 51 ಮತ ಚಲಾವಣೆ ಮಾಡಿ ಟೆಸ್ಟ್ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಅದನ್ನು ಡಿಲೀಟ್ ಮಾಡದೆ ಮತದಾನ ಮುಂದುವರಿಸಿದ್ದರು. ಈ ಬೂತ್‌ನಲ್ಲಿ ಒಟ್ಟು 713 ಮತ ಚಲಾವಣೆಯಾಗಿತ್ತು.
ಮೇ 13ರಂದು ಮತ ಎಣಿಕೆ ಸಂದರ್ಭ ಅಧಿಕಾರಿಗಳು ಮಾಡಿದ ಎಡವಟ್ಟು ಬೆಳಕಿಗೆ ಬಂದಿದೆ. ಹಾಗಾಗಿ ಈ ಇವಿಎಂನ ಮತ ಎಣಿಕೆ ಮಾಡದೆ ಹಾಗೆ ಇರಿಸಲಾಗಿದೆ. ಅಭ್ಯರ್ಥಿಯ ಗೆಲುವಿನ ಅಂತರ 713 ಮತಗಳ ಒಳಗಿದ್ದರೆ ಮಾತ್ರ ಈ ಮತಗಳನ್ನು ಎಣಿಕೆ ಮಾಡಲಾಗುವುದು. ಭಾಗೀರಥಿ ಮುರುಳ್ಯ ಅವರ ಗೆಲುವಿನ ಅಂತರ 30 ಸಾವಿರಕ್ಕೂ ಅಧಿಕ ಇರುವುದರಿಂದ ಈ ಇವಿಎಂನ ಮತ ಎಣಿಕೆ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here