ನಗರಸಭಾಧ್ಯಕ್ಷ, ಉಪಾಧ್ಯಕ್ಷರ ಆಡಳಿತಾವಧಿ ಮುಕ್ತಾಯ-ಶೀಘ್ರದಲ್ಲಿಯೇ ಆಡಳಿತಾಧಿಕಾರಿ ನೇಮಕ; ಮೀಸಲಾತಿ ಪ್ರಕಟ

0

ಪುತ್ತೂರು: 31 ವಾರ್ಡ್ ಸದಸ್ಯ ಬಲ ಹೊಂದಿರುವ ಪುತ್ತೂರು ನಗರಸಭೆಯ ಹಾಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಡಳಿತ ಅವಧಿ ಮುಕ್ತಾಯಗೊಂಡಿದೆ.


ನಗರಸಭೆಯ ಪ್ರಥಮ ಅವಧಿಯ ಎರಡೂವರೆ ವರ್ಷದ ಅವಧಿ ಈಗಾಗಲೇ ಮುಕ್ತಾಯಗೊಂಡಿದ್ದು ರಾಜ್ಯದಲ್ಲಿ ಹೊಸ ಸರಕಾರ ಆಡಳಿತಕ್ಕೆ ಬಂದ ಬಳಿಕ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಳ್ಳಲಿದೆ. ನಗರಸಭೆಯಯ ಪ್ರಥಮ ಅವಧಿಯಲ್ಲಿ ಅಧ್ಯಕ್ಷರಾಗಿ ಕೆ. ಜೀವಂಧರ್ ಜೈನ್ ಮತ್ತು ಉಪಾಧ್ಯಕ್ಷರಾಗಿ ವಿದ್ಯಾ ಆರ್. ಗೌರಿ ಕಾರ್ಯ ನಿರ್ವಹಿಸಿದ್ದರು. ಮೇ 2ಕ್ಕೆ ಇವರ ಅಧಿಕಾರವಾಧಿ ಮುಕ್ತಾಯಗೊಂಡಿದ್ದು ಸದ್ಯದಲ್ಲಿಯೇ ಆಡಳಿತಾಧಿಕಾರಿ ನೇಮಕವಾಗಲಿದ್ದಾರೆ. ಜಿಲ್ಲಾಡಳಿತ ಇದರ ಪ್ರಕ್ರಿಯೆ ನಡೆಸಲಿದೆ. ನಾಲ್ಕೂವರೆ ವರ್ಷಗಳ ಹಿಂದೆ ನಗರಸಭೆಗೆ ಚುನಾವಣೆ ನಡೆದಿದ್ದು ಬಿಜೆಪಿಯ 25, ಕಾಂಗ್ರೆಸ್ 5 ಹಾಗೂ ಓರ್ವ ಎಸ್‌ಡಿಪಿಐ ಸದಸ್ಯರು ಚುನಾಯಿತರಾಗಿದ್ದರು. ರಾಜ್ಯದ ವಿವಿದೆಡೆಯ ಸ್ಥಳೀಯಾಡಳಿತದ ಮೀಸಲಾತಿಯಲ್ಲಿ ತಗಾದೆ ಇದ್ದ ಹಿನ್ನೆಲೆಯಲ್ಲಿ 2 ವರ್ಷ ಜನಪ್ರತಿನಿಧಿಗಳಿಗೆ ಆಡಳಿತ ನಡೆಸುವ ಅಧಿಕಾರ ಸಿಕ್ಕಿರಲಿಲ್ಲ. 2020ರ ನವೆಂಬರ್‌ನಲ್ಲಿ ನಗರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿತ್ತು. ಇದೀಗ ಅವರ ಅಧಿಕಾರವಾಧಿ ಮುಕ್ತಾಯವಾಗಿದ್ದು ನೂತನ ಆಯ್ಕೆಗಾಗಿ ಸದ್ಯದಲ್ಲಿಯೇ ಮೀಸಲಾತಿ ಪ್ರಕಟವಾಗಲಿದೆ. ಅದಕ್ಕೆ ಮೊದಲು ಆಡಳಿತಾಧಿಕಾರಿಯ ನೇಮಕವಾಗಲಿದೆ.

LEAVE A REPLY

Please enter your comment!
Please enter your name here