ಕೆದಂಬಾಡಿ ಇದ್ಪಾಡಿ ಮಂಜಕೊಟ್ಯ ಶ್ರೀ ಶಿರಾಡಿ ದೈವಸ್ಥಾನದಲ್ಲಿ ತಂಬಿಲ ಸೇವೆ

0

ಪುತ್ತೂರು: ಕೆದಂಬಾಡಿ ಇದ್ಪಾಡಿ ಮಂಜಕೊಟ್ಯ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಮೇ 15 ರಂದು ಬೆದ್ರುಮಾರು ಬಾಲಚಂದ್ರ ರೈ ಮತ್ತು ಮನೆಯವರಿಂದ ತಂಬಿಲ ಸೇವೆ ನಡೆಯಿತು.


ದೈವಸ್ಥಾನದ ಯಜಮಾನ ನಿವೃತ್ತ ಡಿವೈಎಸ್‌ಪಿ ಮುಂಡಾಳಗುತ್ತು ಶಾಂತಾರಾಮ ರೈರವರ ಉಸ್ತುವಾರಿಯಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಮುಂಡಾಳಗುತ್ತು ಸುಧಾಕರ್ ರೈ ಮತ್ತು ಪದಾಧಿಕಾರಿಗಳು, ಊರವರು ಸೇರಿದಂತೆ ಸುಮಾರು 130 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ತಂಬಿಲ ಸೇವೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಕುಂಬ್ರದ ದಂತ ವೈದ್ಯೆ ಡಾ.ಯಶ್‌ಮಿರವರು ಪ್ರತಿ ತಿಂಗಳು ನಡೆಯುವ ತಂಬಿಲ ಸೇವೆಗೆ ಸಿಹಿತಿಂಡಿಯನ್ನು ಕೊಡುಗೆಯಾಗಿ ನೀಡುತ್ತಾರೆ ಎಂದು ದೈವಸ್ಥಾನದ ಆಡಳಿತ ಸಮಿತಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here