ತಾ. ಮಹಿಳಾ ಬಂಟರ ಸಂಘದ ಸಭೆ – ಸಹಾಯಧನ ವಿತರಣೆ

0

ಪುತ್ತೂರು: ತಾಲೂಕು ಮಹಿಳಾ ಬಂಟರ ಸಂಘದ ಸಭೆಯು ಮೇ 16 ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಸಭಿತಾ ಭಂಡಾರಿ ವಹಿಸಿ ಕೆಯ್ಯೂರು ಗ್ರಾಮದ ದಿ|ಸಂಜೀವ ರೈಗಳ ಪುತ್ರಿ ನಮಿತಾ ರೈಯವರ ಮದುವೆಗೆ ಮಹಿಳಾ ಬಂಟರ ಸಂಘದ ವತಿಯಿಂದ 5000/- ಚೆಕ್ ಹಾಗೂ ಬಂಟರ ಸಂಘ ಪುತ್ತೂರು ತಾಲೂಕು ಇವರ ವತಿಯಿಂದ 5000/- ದ ಚೆಕ್ಕನ್ನು ವಿತರಿಸಿದರು . ಪ್ರದಾನ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ಸ್ವಾಗತಿಸಿ ವರದಿಯನ್ನು ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ವಾಣಿ ಎಸ್ ಶೆಟ್ಟಿ ವಂದಿಸಿದರು. ಜತೆ ಕಾರ್ಯದರ್ಶಿ ರೂಪರೇಖ ಆಳ್ವಾರವರು ಮದುಮಗಳು ನಮಿತಾ ರೈಯವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದರು. ಉಪಾಧ್ಯಕ್ಷರುಗಳಾದ ಗೀತಾ ಮೋಹನ್ ರೈ, ಜಯಂತಿ ಯಂ. ರೈ, ಸ್ವರ್ಣಲತಾ ಜೆ ರೈ, ಅನುಶ್ರೀ ಬಿ ಶೆಟ್ಟಿ, ನಿರ್ದೇಶಕರುಗಳಾದ ವತ್ಸಲಾ ಪಿ ಶೆಟ್ಟಿ, ಲಾವಣ್ಯ , ಸುಜಾತಾ ಸುರೇಂದ್ರ ರೈ, ಕಿರಣಾ ರೈ, ಯೋಗಿನಿ ರೈ ಉಪಸ್ಥಿತರಿದ್ದರು. ರವಿಚಂದ್ರ ರೈ ಸಹಕರಿಸಿದರು.

LEAVE A REPLY

Please enter your comment!
Please enter your name here