ಪುತ್ತೂರು: ಉಪ್ಪಿನಂಗಡಿ-ಪುತ್ತೂರು ಚತುಷ್ಪಥ ಮಾರ್ಗ ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಎಕ್ಸ್ಪ್ರೆಸ್, ಕಾಂಚನ, ಉಪ್ಪಿನಂಗಡಿ ಓಲ್ಡ್ – ವಾಟರ್ ಸಪ್ಲೈ ಫೀಡರ್ನಲ್ಲಿ ಮೇ 18ರಂದು ಪೂರ್ವಾಹ್ನ 9ರಿಂದ ಅಪರಾಹ್ನ 3ರವರೆಗೆ ಹಾಗೂ ಕಡಬ ಸುಬ್ರಹ್ಮಣ್ಯ 33ಕೆ.ವಿ ವಿದ್ಯುತ್ ಮಾರ್ಗದಲ್ಲಿ ಪೂ.10ರಿಂದ ಸಂಜೆ 5ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಫೀಡರ್ನಿಂದ ವಿದ್ಯುತ್ ಸರಬರಾಜಾಗುವ ಕೋಡಿಂಬಾಡಿ, ಸೇಡಿಯಾಪು, ಉಪ್ಪಿನಂಗಡಿ, ನೆಕ್ಕಿಲಾಡಿ, ರಾಮಕುಂಜ, ಕೊಯಿಲ, ಹಿರೇಬಂಡಾಡಿ ಮತ್ತು ಕಡಬ-ಸುಬ್ರಹ್ಮಣ್ಯ 33ಕೆ.ವಿ ವಿದ್ಯುತ್ ಮಾರ್ಗ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.