ಬ್ಯಾನರ್‌ ಪ್ರಕರಣ -ಪುತ್ತೂರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಉಪ ವಿಭಾಗದ ಸಹಾಯಕ ಆಯುಕ್ತರಿಗೆ ಮನವಿ

0

ಪುತ್ತೂರು: ಪತ್ತೂರಿನಲ್ಲಿ ರಾಜಕೀಯ ನಾಯಕರಿಬ್ಬರ ಚಿತ್ರವಿರುವ ಬ್ಯಾನರ್‌ ಅಳವಡಿಸಿ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೋಲೀಸರು ವಶಕ್ಕೆ ಪಡೆದು ಯುವಕರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಕೃತ್ಯವನ್ನು ಖಂಡಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದು, ತಪ್ಪಿತಸ್ಥರ ವಿರುಧ್ಧ ಅಗತ್ಯ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದೆ.

ಇಲಾಖೆ ನಿರ್ಲಕ್ಷ ನೀತಿಯನ್ನು ಅನುಸರಿಸಿದರೆ ಪೊಲೀಸ್ ಅಧಿಕಾರಿಗಳ ಮತ್ತು ಕಂದಾಯ ಇಲಾಖೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಆಯೋಜಿಸುವುದು ಅನಿವಾರ್ಯವಾದೀತೆಂದು ಪಕ್ಷ ಮನವಿಯಲ್ಲಿ ತಿಳಿಸಿದೆ. ಕರ್ನಾಟಕ ರಾಷ್ಟ್ರ ಸಮಿತಿಯ ಇವಾನ್ ಫೆರಾವೋ ಮತ್ತು ಸದಸ್ಯರು ಖಲಂದರ್ ಉಪ್ಪಿನಂಗಡಿ, ಹನೀಫ್ ಬೆಳ್ತಂಗಡಿ, ಸಮೀರ್ ಪರ್ಲಿಯ ( ಬಂಟ್ವಾಳ ) ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here