ದೌರ್ಜನ್ಯ ಯಾರು ಮಾಡಿಸಿದ್ದಾರೆಂದು ಪುತ್ತೂರಿನ ಪ್ರತಿಯೊಬ್ಬರಿಗೂ ಗೊತ್ತಿದೆ-ಪ್ರಭಾಕರ್ ಭಟ್ ಆರೋಪಕ್ಕೆ ಹೇಮನಾಥ ಶೆಟ್ಟಿ ಗರಂ

0


ಪುತ್ತೂರು: ಬ್ಯಾನರ್‌ಗೆ ಚಪ್ಪಲಿಹಾರ ಹಾಕಿದ ಆರೋಪಿಗಳ ಮೇಲೆ ಪೊಲೀಸ್ ದೌರ್ಜನ್ಯವಾಗಲು ಕಾಂಗ್ರೆಸ್ ಕಾರಣ, ಕಾಂಗ್ರೆಸ್ ಸರಕಾರ ಬಂದರೆ ಹೀಗೆಲ್ಲಾ ಆಗುತ್ತದೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಆರೋಪ ಮಾಡಿದ್ದು, ಈ ಆರೋಪಕ್ಕೆ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಗರಂ ಆಗಿದ್ದು, ಯಾರು ಹಲ್ಲೆ ಮಾಡಿಸಿದ್ದಾರೆ ಎಂದು ಪುತ್ತೂರಿನ ಪ್ರತೀಯೊಬ್ಬರಿಗೂ ಗೊತ್ತಿದೆ ಅನಾವಶ್ಯಕವಾಗಿ ಕಾಂಗ್ರೆಸ್ಸನ್ನು ಎಳೆದು ತರಬೇಡಿ ಎಂದು ಭಟ್‌ಗೆ ಖಾರವಾಗಿಯೇ ಉತ್ತರಿಸಿದ್ದಾರೆ.


ʼಪುತ್ತೂರಿನಲ್ಲಿ ಪುತ್ತಿಲರ ಹಿಂದುತ್ವ ಮತ್ತು ಬಿಜೆಪಿಯ ಹಿಂದುತ್ವದ ಡೊಂಬರಾಟದಿಂದ ಇಂತಹ ಕೃತ್ಯಗಳು ನಡೆದಿದೆ, ನಿಮ್ಮೊಳಗಿನ ಡೊಂಬರಾಟವನ್ನು ಮೊದಲು ನಿಲ್ಲಿಸುವ ಕೆಲಸವನ್ನು ಮಾಡಿ. ಅವರು ಇವರ ಮೇಲೆ ಆರೋಪ ಮಾಡುವುದು, ಇವರು ಅವರ ಮೇಲೆ ಆರೋಪ ಮಾಡುವುದು, ನಿಮ್ಮ ಈ ನಾಟಕ ಎಲ್ಲಾ ಇನ್ನು ನಡೆಯುವುದಿಲ್ಲ. ಪುತ್ತೂರಿನಲ್ಲಿ ಏನು ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ, ನೀವು ಕಾಂಗ್ರೆಸ್ಸಿನ ಮೇಲೆ ಗೂಬೆ ಕೂರಿಸುವ ಕೆಲಸಕ್ಕೆ ಕೈ ಹಾಕಬೇಡಿʼ ಎಂದು ಎಚ್ಚರಿಸಿದರು.
ಪುತ್ತೂರಿನ ಶಾಸಕರು ಎಲ್ಲದಕ್ಕೂ ಸಮರ್ಥರಿದ್ದಾರೆ. ಹೊರಗಿನಿಂದ ಬಂದವರು ಇಲ್ಲಿ ಪುಕ್ಕಟೆ ಸಲಹೆ ಕೊಡುವ ಅಗತ್ಯವಿಲ್ಲ. ಘಟನೆಯಲ್ಲಿ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಕಾಂಗ್ರಸ್ಸಿನ ಶಾಸಕರು ಮಾಡಿದ್ದಾರೆ. ತಪ್ಪತಸ್ಥರನ್ನು ಅಮಾನತು ಮಾಡಿಸಿದ್ದಾರೆ. ಅವರ ಮೇಲೆ ಕೇಸು ಕೂಡಾ ದಾಖಲಾಗಿದೆ. ಪಕ್ಷೇತರ ಅಭ್ಯರ್ಥಿಯನ್ನು ಎದುರಿಸುವ ತಾಕತ್ತಿಲ್ಲದ ನೀವು ಕಾಂಗ್ರೆಸ್ ಶಾಸಕರ ಬಗ್ಗೆ ಅಥವಾ ಕಾಂಗ್ರೆಸ್ ಸರಕಾರವನ್ನು ಟಾರ್ಗೆಟ್ ಮಾಡುತ್ತಿದ್ದೀರಿ. ಬಿಜೆಪಿ ನಾಯಕರಿಗೆ ಸೋಲಿನಿಂದ ದೃತಿಗೆಟ್ಟಿದೆ. ಅದಕ್ಕೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ ಹೇಮನಾಥ ಶೆಟ್ಟಿಯವರು ಬೆಳ್ತಂಗಡಿ ಶಾಸಕರು ಬಂದು ಇಲ್ಲಿ ಪುಕ್ಕಟೆ ಸಲಹೆ ಕೊಡುವುದು ಬೇಡ. ನಮ್ಮ ಶಾಸಕರಿಗೆ ನ್ಯಾಯ ಕೊಡಿಸಲು ಗೊತ್ತಿದೆ. ನಮ್ಮ ಶಾಸಕರು ಪುತ್ತೂರಿನ ಎಲ್ಲಾ ಸಮುದಾಯದ , ಎಲ್ಲಾ ವರ್ಗದವರ, ಪುತ್ತೂರಿನ ಸಮಸ್ತ ನಾಗರಿಕರ ಶಾಸಕಕರಾಗಿದ್ದು, ನಿಮ್ಮ ಹಾಗೆ ಅಲ್ಲ ಎಂದು ಹೇಳಿದ ಅವರು ಆರೋಪ ಮಾಡುವಾಗ ಸ್ವಲ್ಪ ಆಲೋಚನೆ ಮಾಡಿ ಎಂದು ಎಚ್ಚರಿಸಿದರು.

LEAVE A REPLY

Please enter your comment!
Please enter your name here