ಉಪ್ಪಿನಂಗಡಿ: ವಿಧಾನ ಸಭಾ ಚುನಾವಣೆಯಲ್ಲಿ ಪರಾಜಿತಗೊಂಡರೂ, ಸೋತ ಉಳಿದ ಅಭ್ಯರ್ಥಿಗಳಿಗಿಂತಲೂ ಹೆಚ್ಚಿನ ಮತಗಳನ್ನು ಪಡೆದುಕೊಂಡ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರವರ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯು ಇಲ್ಲಿನ ನೆಡ್ಚಿಲ್‌ನ ಲಕ್ಷ್ಮಣ ಗೌಡ ಅವರ ಮನೆಯಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು, ನೀವೆಲ್ಲಾ ಒಂದುಗೂಡಿ ಬಹುದೊಡ್ಡ ಶಕ್ತಿಯಾಗಿ ರೂಪುಗೊಂಡಿದ್ದೀರಿ. ಮುಂದಿನ ದಿನಗಳಲ್ಲಿ ಸಂಘಟನೆಯ ಬಲವನ್ನು ಪ್ರತಿ ಬೂತ್ ಮಟ್ಟದಿಂದಲೇ ಬಲಪಡಿಸಬೇಕು. ನಮ್ಮ ಕಾರ್ಯಕರ್ತರು ಯಾವುದೇ ಪಕ್ಷ, ಸಂಘಟನೆ ಹಾಗೂ ಅದರ ನಾಯಕರನ್ನು ದೂಷಿಸುವ ಕೆಲಸಕ್ಕೆ ಹೋಗಬಾರದು. ನನ್ನ ಬೆನ್ನ ಹಿಂದೆ ನಿಂತು ಶ್ರಮಿಸಿದ ಎಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದರು.
ವೇದಿಕೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗರಾದ ಬಿಎಸ್ಸೆಫ್‌ನ ನಿವೃತ ಕಮಾಂಡೆಂಟ್ ಚಂದಪ್ಪ ಮೂಲ್ಯ, ಉದ್ಯಮಿ ನಟೇಶ್ ಪೂಜಾರಿ, ರಾಜಶೇಖರ ಬನ್ನೂರು, ಬಾಬು ಗೌಡ ನೆಡ್ಚಿಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಿದಾನಂದ ಪಂಚೇರು, ಮಹೇಂದ್ರವರ್ಮ ಪಡ್ಪು, ಲಕ್ಷ್ಮಣ ಗೌಡ ನೆಡ್ಚಿಲ್, ರವಿ ಶೆಟ್ಟಿ, ರಾಮಚಂದ್ರ ನೆಡ್ಚಿಲ್, ಧರ್ನಪ್ಪ ನಾಯ್ಕ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಸುಚಿತ್ ಬೊಳ್ಳಾವು, ಜಿತೇಶ್ ಪುಳಿತ್ತಡಿ, ರಶ್ಮಿತ್ ಪುಳಿತ್ತಡಿ, ಕೀರ್ತನ್ ಪುಳಿತ್ತಡಿ, ಸಚಿನ್ ಪುಳಿತ್ತಡಿ, ಉಮೇಶ್ ಕೋಡಿಜಾಲು, ಕಿರಣ್ ಆಲಾಜೆ, ಅನಿಲ್ ಅಡೆಕ್ಕಲ್, ರಮೇಶ್ ಬಂಡಾರಿ, ಚಂದ್ರಶೇಖರ ನಲಿಕೆಮಜಲು, ಶ್ರೀರಾಮ್ ಭಟ್, ಕಿರಣ್ ಪುಳಿತ್ತಡಿ ಸೇರಿದಂತೆ ಸುಮಾರು 300ರಷ್ಟು ಬೆಂಬಲಿಗರಿದ್ದರು.