ಕುಲ್ಕುಂದ ನಿವಾಸಿ ಕಡಬದಲ್ಲಿ ಮೃತ್ಯು

0

ಕಡಬ: ಕುಲ್ಕುಂದ ನಿವಾಸಿಯೊಬ್ಬರು ಕಡಬದಲ್ಲಿ ಮೃತಪಟ್ಟ ಘಟನೆ ಮೇ 17ರಂದು ಬೆಳಿಗ್ಗೆ ನಡೆದಿದೆ.


ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಕಾಲೋನಿ ನಿವಾಸಿ ನರಸಿಂಹ(60ವ.)ಮೃತಪಟ್ಟವರಾಗಿದ್ದಾರೆ. ನರಸಿಂಹ ಅವರು ಸುಬ್ರಹ್ಮಣ್ಯ ಐನೆಕಿದು ಸೊಸೈಟಿಯಲ್ಲಿ ಗುಮಾಸ್ತರಾಗಿ ಕೆಲಸದಲ್ಲಿದ್ದವರು ಪ್ರಸ್ತುತ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿದ್ದರು. 15 ವರ್ಷದ ಹಿಂದೆ ಇವರು ಪಾರ್ಶ್ವವಾಯು ಪೀಡಿತರಾಗಿದ್ದರು. ಅಲ್ಲದೇ ಮೂರ್ಛೆ ರೋಗದ ಬಗ್ಗೆ ಮಾತ್ರೆಯನ್ನು ಸೇವಿಸುತ್ತಿದ್ದರು. ಇದರ ಜೊತೆಗೆ ಕುಡಿತದ ಚಟವನ್ನು ಹೊಂದಿದ್ದರು. ನರಸಿಂಹ ಅವರು ಮೇ 17ರಂದು ಬೆಳಿಗ್ಗೆ 11 ಗಂಟೆಗೆ ಕಡಬ ಪೇಟೆಯ ಹಳೇ ಪ್ರವಾಸಿ ಮಂದಿರದ ಕಟ್ಟಡದ ಬಳಿ ಬಿದ್ದುಕೊಂಡಿರುವುದನ್ನು ಪಕ್ಕದ ಬಾರ್ ಮ್ಯಾನೇಜರ್ ಸುಧಾಕರ ರೈ ಹಾಗೂ ಸಾರ್ವಜನಿಕರು ನೋಡಿದ ವೇಳೆ ಅವರು ಮೃತಪಟ್ಟಿರುದು ತಿಳಿದುಬಂದಿದೆ.

ನರಸಿಂಹ ಅವರ ಪತ್ನಿ ಲಲಿತಾ ಅವರು ಮಕ್ಕಳೊಂದಿಗೆ ಭೂತ ಹರಕೆಯ ಬಗ್ಗೆ ಬಂಟ್ವಾಳಕ್ಕೆ ಹೋಗಿದ್ದು ಅಲ್ಲಿರುವ ಸಮಯ ಪತಿ ಕಡಬದಲ್ಲಿ ಮೃತಪಟ್ಟಿರುವ ಬಗ್ಗೆ ವಾಟ್ಸಪ್ ಗ್ರೂಪ್‌ನಲ್ಲಿ ಬಂದಿರುವದನ್ನು ನೋಡಿ ಕಡಬಕ್ಕೆ ಬಂದು ಗಂಡನ ಮೃತ ಶರೀರವನ್ನು ನೋಡಿ ಗುರುತಿಸಿದ್ದರು ಎಂದು ವರದಿಯಾಗಿದೆ. ಈ ಬಗ್ಗೆ ಲಲಿತಾ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here