ಡಿವೈಎಸ್ಪಿ ಹುದ್ದೆಗೆ ಕಳಂಕ ತಂದ ಪುತ್ತೂರು ಡಿವೈಎಸ್ಪಿಯನ್ನು ಅಮಾನತು ಮಾಡಿ- ಕಡಬ ಪ್ರಖಂಡ ವಿ.ಎಚ್.ಪಿ ಕಾರ್ಯದರ್ಶಿ ಪ್ರಮೋದ್

0

ಕಡಬ: ಪುತ್ತೂರು ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಹುದ್ದೆಯನ್ನು ಅರಿಯದ ಸಾಮಾನ್ಯ ವ್ಯಕ್ತಿಯಂತೆ ಹಲ್ಲೆ ನಡೆಸಿದ ಪುತ್ತೂರು ಡಿವೈಎಸ್ಪಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ವಿ.ಹಿಂ.ಪ. ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ ಆಗ್ರಹಿಸಿದ್ದಾರೆ.


ಈ ಬಗ್ಗೆ ಅವರು ಮಾತನಾಡಿ, ಇದೇ ಡಿವೈಎಸ್ಪಿ ಕೊಂಬಾರು ಆನೆ ದಾಳಿ ಪ್ರಕರಣದಲ್ಲಿ ಕೂಡ ತಾನೂ ಡಿವೈಎಸ್ಪಿ ಎಂಬುದನ್ನು ಮರೆತು ಅನಾಗರಿಕನಂತೆ ವರ್ತಿಸಿದ್ದಾರೆ. ಸಮಸ್ಯೆ ಗಳು ಬಂದಾಗ ಅದನ್ನು ಬಗೆಹರಿಸುವ ಬಗ್ಗೆ ಯೋಚಿಸದೆ ಒಟ್ಟಾರೆಯಾಗಿ ವರ್ತಿಸಿರುವುದು ಕಂಡು ಬಂದಿದೆ. ಸಾಮಾನ್ಯ ಜನರಿಗೆ ಕಾನೂನು ಪಾಠ ಹೇಳುವ ಇವರು ಕಾನೂನನ್ನು ಕೈಗೆತ್ತಿಕೊಂಡಾಗ ತಕ್ಕ ಶಾಸ್ತಿಯಾಗಬೇಕು. ನಾಗರಿಕರ ಜೀವದ ಮೇಲೆ ಚೆಲ್ಲಾಟವಾಡುವವರಿಗೆ ತಕ್ಕ ಪಾಠವಾಗಬೇಕು. ಈ ಹಲ್ಲೆಯ ಹಿಂದಿರುವ ಶಕ್ತಿಗಳನ್ನು ಕೂಡ ಸಮಾಜಕ್ಕೆ ತಿಳಿಸಬೇಕು, ಇಂತವರಿಂದಲೇ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಕೂಡಲೇ ಅಮಾನತು ಮಾಡದಿದ್ದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here