ದೌರ್ಜನ್ಯಕ್ಕೊಳಗಾದ ಯುವಕರ ಕಂಡು ಮರುಗಿದ ಸುಳ್ಯ ಶಾಸಕಿ ಮುರುಳ್ಯ

0

ಪುತ್ತೂರು: ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತರನ್ನು ಭೇಟಿಯಾದ ಸುಳ್ಯ ಶಾಸಕ ಯೋಗ ಕ್ಷೇಮ ವಿಚಾರಿಸಿ ಸಾಂತ್ವಾನ ಹೇಳಿದ್ದಾರೆ.

ಈ ವೇಳೆ ಸುದ್ದಿಯೊಂದಿಗೆ ಮಾತನಾಡಿ ಅವರು ಘಟನೆ ಬಗ್ಗೆ ಬೇಸರವಾಗಿದ್ದು ಖಂಡಿಸುವುದಾಗಿ ಹೇಳಿದರು ಹಿಂದೂ ಯುವಕರಿಗೆ ಈ ರೀತಿ ಆಗಬಾರದಿತ್ತು ಸರಕಾರ ಬಂದು ಎರಡೇ ದಿವಸದಲ್ಲಿ ಹೀಗಾದರೆ ಮುಂದಿನ ಐದು ವರ್ಷದಲ್ಲಿ ನಮ್ಮ ಯುವಕರು ಏನಾಗಬಹುದು ಎಂಬುದು ಚಿಂತೆಯಾಗಿದೆ ಹಿಂದುಗಳ ಪರವಾಗಿ ಯುವಕರ ಪರವಾಗಿ ಧ್ವನಿ ಎತ್ತಲು ನಾನು ಸಿದ್ಧಳಾಗಿದ್ದೇನೆ. ಈ ಬಗ್ಗೆ ವಿಧಾನಸೌಧದಲ್ಲಿ ಧ್ವನಿ ಎತ್ತುವುದಾಗಿ ಎಂದು ಅವರು ಹೇಳಿದ್ದಾರೆ.

ಘಟನೆಯ ಬಗ್ಗೆ ಶಾಸಕಿ ಭಾಗೀರಥಿರವರಿಗೆ ಹಿಂದು ಮುಖಂಡ ಅರುಣ್‌ಕುಮಾರ್ ಪುತ್ತಿಲರವರು ಪೂರ್ಣ ಮಾಹಿತಿಯನ್ನು ನೀಡಿದರು.

ಸುಳ್ಯ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಿ.ಪಂ, ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಸುಳ್ಯ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್‍ಯದರ್ಶಿ ರಾಕೇಶ್ ರೈ ಕೆಡೆಂಜಿ, ಕಾರ್‍ಯದರ್ಶಿ ಇಂದಿರಾ ಬಿ.ಕೆ ಬಂಬಿಲ,ಸುಳ್ಯ ಬಿಜೆಪಿ ಯುವ ಮೋರ್ಚ ಉಪಾಧ್ಯಕ್ಷ ಸುನೀಲ್ ಕೇರ್ಪಳ, ರೈತ ಮೋರ್ಚ್ ಜಿಲ್ಲಾ ಉಪಾಧ್ಯಕ್ಷ ಮಹೇಶ್ ರೈ ಮೇನಾಲ, ಸುಳ್ಯ ನಗರಸಭಾ ಅಧ್ಯಕ್ಷ ವಿನಯ್‌ಕುಮಾರ್ ಕಂದಡ್ಕ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here