ಕಡಬ ಗ್ರಾ.ಪಂ.ಮಾಜಿ ಸದಸ್ಯೆ ರೇವತಿ ನಿಧನ

0

ಕಡಬ: ಇಲ್ಲಿನ ಗ್ರಾ.ಪಂ. ಮಾಜಿ ಸದಸ್ಯೆ, ಕೋಡಿಂಬಾಳ ಗ್ರಾಮದ ಅಜ್ಜಿಕಟ್ಟೆ ನಿವಾಸಿ ಸೀತಾರಾಮ ನಾಯ್ಕ ಎಂಬವರ ಪತ್ನಿ ರೇವತಿ(55ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಮೇ.19ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

ಇವರು ಕಳೆದ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಇವರು ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.


ಮೃತರ ಮನೆಗೆ ಮಾಜಿ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪ್ರಮುಖರಾದ ಜನಾರ್ದನ ಗೌಡ ಪಣೆಮಜಲು, ಫಝಲ್ ಕೋಡಿಂಬಾಳ, ಜ್ಯೋತಿ ಡಿ.ಕೋಲ್ಪೆ,ಕೃಷ್ಣಪ್ಪ ನಾಯ್ಕ,ಕೆ.ಎಂ.ಸತೀಶ್ ನಾಕ್ ಮೇಲಿನ ಮನೆ,ಜಯಂತಿ ಪಿಜಕಳ, ಎ.ಎಸ್.ಶೆರೀಫ್, ಶಾಲಿನಿ ಸತೀಶ್ ಮತ್ತೀತರರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here