ವಿಹಿಂಪ ಮುಖಂಡರ ಕಾರು ಅಪಘಾತ-ಮಾನವೀಯತೆ ಮೆರೆದ ಅರುಣ್‌ ಕುಮಾರ್‌ ಪುತ್ತಿಲ

0

ಪುತ್ತೂರು: ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಶುಂಠಕೊಪ್ಪದ ವಿಶ್ವಹಿಂದು ಪರಿಷತ್ ಮುಖಂಡರೊಬ್ಬರ ಕಾರು ಮುಕ್ರಂಪಾಡಿಯಲ್ಲಿ ಅಪಘಾತಗೊಂಡಾಗ ಗಾಯಾಳುಗಳಿಗೆ ಅರುಣ್ ಕುಮಾರ್ ಪುತ್ತಿಲರವರು ಪ್ರಥಮ ಚಿಕಿತ್ಸೆ ಕೊಡಿಸಿ ತನ್ನ ಕಾರಿನಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಕಳುಹಿಸಿ ಮಾನವೀಯತೆ ಮೆರೆದ ಘಟನೆ ಮೇ 20ರಂದು ನಡೆದಿದೆ.


ಮುಡಿಪಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಶುಂಠಿಕೊಪ್ಪದ ವಿಶ್ವಹಿಂದು ಪರಿಷತ್ ಕಾರ್ಯದರ್ಶಿಯಾಗಿರುವ ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಈಶ್ವರ್ ಅವರು ಪತ್ನಿ ಮತ್ತು ಮಗ ಕುಟುಂಬ ಸಮೇತರಾಗಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮುಕ್ರಂಪಾಡಿಯಲ್ಲಿ ಅವರ ಕಾರು ಅಪಘಾತಗೊಂಡಿತ್ತು. ಇದೇ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಆಗಮಿಸಿ ಗಾಯಾಳುಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ತಮ್ಮದೆ ವಾಹನದಲ್ಲಿ ಮುಡಿಪಿನ ಧಾರ್ಮಿಕ ಕಾರ್ಯಕ್ರಮಕ್ಕೆ ಕಳುಹಿಸಿಕೊಟ್ಟರು. ಅರುಣ್ ಕುಮಾರ್ ಪುತ್ತಿಲ ಅವರ ಮಾನವೀಯತೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೊಳಪಟ್ಟಿದೆ.

LEAVE A REPLY

Please enter your comment!
Please enter your name here