ಬೆಂಗಳೂರಿನ ಎನ್‌ಜಿಒ ಸಂಸ್ಥೆಯಿಂದ ಪುತ್ತೂರಿನಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ

0

ಮಕ್ಕಳೊಂದಿಗೆ ಗಂಟೆಯೊಳಗೆ 4 ಗೋಣಿ ಪ್ಲಾಸ್ಟಿಕ್, ಚೀಲ ಸಂಗ್ರಹ

ಪುತ್ತೂರು:ಬೆಂಗಳೂರು ಮೂಲದ ಕ್ಯಾಪ್ಸ್ ಫೌಂಡೇಶನ್ ಎನ್‌ಜಿಒ ಸಂಸ್ಥೆಯೊಂದು ತನ್ನ 18ನೇ ವರ್ಷಾಚರಣೆಯ ಅಂಗವಾಗಿ ರಾಜ್ಯದ 15 ಕಡೆಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಮ್ಮಿಕೊಂಡಿದ್ದು ಮೇ 18ರಂದು ಸಂಜೆ ಪುತ್ತೂರು ಬೊಳುವಾರಿನಿಂದ ಹಾರಾಡಿ ತನಕ ಸ್ಥಳೀಯ ಮಕ್ಕಳೊಂದಿಗೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ನಡೆಸಿತು.

ಬೊಳುವಾರಿನಿಂದ ಹಾರಾಡಿಯ ತನಕ ಒಂದು ಗಂಟೆಯ ಅವಧಿಯಲ್ಲಿ ಸುಮಾರು 4 ಗೋಣಿ ಚೀಲದಷ್ಟು ಪ್ಲಾಸ್ಟಿಕ್ ಸಂಗ್ರಹವಾಗಿದೆ. 20ಕ್ಕೂ ಅಧಿಕ ಮಕ್ಕಳು ಕೈಗವಸು ಹಾಕಿಕೊಂಡು ಪ್ಲಾಸ್ಟಿಕ್ ಅಭಿಯಾನದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here