ಬೈತಡ್ಕ ಮಸೀದಿಯಲ್ಲಿ ಸ್ವಲಾತ್ ವಾರ್ಷಿಕೋತ್ಸವ

0

ಕಾಣಿಯೂರು: ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಬೈತಡ್ಕ ಇದರ ಅಧೀನದಲ್ಲಿ ಕಾರ್ಯಾಚರಿಸುವ ಅಸ್ವಲಾತುಲ್ ಕಫೀಲು ಬಿಶ್ಶಫಾಅ ಇದರ 34 ನೇ ವಾರ್ಷಿಕ ಹಾಗೂ ಮೂರು ದಿನಗಳ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮವು ಮೇ 16,17,18 ರಂದು ಮಸೀದಿಯ ಗೌರವಾಧ್ಯಕ್ಷರಾದ ಬಹು ಅಸ್ಸಯ್ಯದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.

ಮೇ 16 ರಂದು ಬಹು ಕೆ.ಎಸ್ ಮುಖ್ತಾರ್ ತಂಙಳ್ ಕುಂಬೋಲ್ ದುಆ ನೆರವೇರಿಸಿ ಬೈತಡ್ಕ ಮುದರ್ರಿಸ್ ಜುನೈದ್ ಸಖಾಫಿ ಅಲ್ ಮುಈನಿ ಕಾರ್ಯಕ್ರಮ ಉದ್ಘಾಟಿಸಿದರು.ಬೈತಡ್ಕ ಖತೀಬ್ ಮೂಸ ಸಖಾಫಿ ಪಳ್ಳಂಗೋಡು ಮುಖ್ಯ ಪ್ರಭಾಷಣ ನಡೆಸಿದರು.

ಮೇ 17 ರಂದು ಮಾಲಿಕ್ ದೀನಾರ್ ತಳಂಗರೆ ಮಸೀದಿಯ ಖತೀಬರಾದ ಬಹು ಮಜೀದ್ ಬಾಖವಿ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಿದರು.ಮೇ 18 ನೇ ಗುರುವಾರದಂದು ಬೈತಡ್ಕ ಮಸೀದಿಯ ಅಧ್ಯಕ್ಷ ಬಿ.ಪಿ ಹಮೀದ್ ಹಾಜಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

.ಬಹು ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಅಹ್ದಲ್ ತಂಙಳ್ ಮುತ್ತನ್ನೂರ್ ಕೇರಳ ಅವರು ಸ್ವಲಾತ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಮುಖ್ಯ ಪ್ರಭಾಷಣ ನಡೆಸಿದರು.ಈ ಸಂದರ್ಭದಲ್ಲಿ ಅಸ್ಸಯ್ಯದ್ ಅಬ್ದುಲ್ ಬಾಅಲವಿ ಚೆನ್ನಾರ್,ಅಶ್ರಫ್ ಬಾಖವಿ ಮುದರ್ರಿಸ್ ಚಾಪಳ್ಳ,ಅಬ್ದುಲ್ ಖಾದರ್ ಫಾಳಿಲಿ ಕೂರತ್ ಮುದರ್ರಿಸ್,ಮುಶ್ತಾಕ್ ಕಾಮಿಲ್ ಸಖಾಫಿ ಖತೀಬ್ ಪಳ್ಳತ್ತಾರು ಸೇರಿದಂತೆ ಪರಿಸರ ಪ್ರದೇಶದ ಮಸೀದಿಯ ಅಧ್ಯಕ್ಷರು ಮತ್ತು ಖತೀಬರು,ಊರಿನ ಗಣ್ಯ ವ್ಯಕ್ತಿಗಳು,ಜಮಾಅತಿನ ಪದಾಧಿಕಾರಿಗಳು ಭಕ್ತಾದಿಗಳು ಭಾಗವಹಿಸಿದ್ದರು.ಬೈತಡ್ಕ ಸದರ್ ಮುಅಲ್ಲಿಂ ಮುಹಮ್ಮದ್ ಇರ್ಫಾನ್ ಹಿಮಮಿ ಸ್ವಾಗತಿಸಿ ಮಸೀದಿಯ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ ವಂದಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಿಸಲಾಯಿತು.

LEAVE A REPLY

Please enter your comment!
Please enter your name here